ಮುಂಬೈ: ಇತ್ತೀಚೆಗೆ ಬೆಲೆ ಏರಿಕೆ, ಹೆಚ್ಚಿನ ಹಣದುಬ್ಬರದಿಂದ ತತ್ತರಿಸುತ್ತಿರುವ ಸಾಮಾನ್ಯ ಜನತೆಗೆ ಆರ್ಥಿಕ ವರ್ಷದ ಆರಂಭ ದಿನ ಗುಡ್ ನ್ಯೂಸ್ ಸಿಕ್ಕಿದೆ.
ವೈಯಕ್ತಿಕ ಹೂಡಿಕೆದಾರರಿಗೆ ಖುಷಿಯನ್ನು ಉಂಟುಮಾಡಬಹುದಾದ ವಿಷಯ ಇದಾಗಿದ್ದು, ಕೇಂದ್ರ ಸರ್ಕಾರವು ನಿನ್ನೆ ಶುಕ್ರವಾರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ(Small Savings Scheme) ಬಡ್ಡಿದರಗಳನ್ನು 10ರಿಂದ 70 ಬಿಪಿಎಸ್‌ಗಳಷ್ಟು ಹೆಚ್ಚಿಸಿದೆ. ಪರಿಷ್ಕರಣೆಯ ನಂತರ, ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು ಈಗಿರುವ ಶೇಕಡಾ 4 ರಿಂದ ಶೇಕಡಾ 8.2ಕ್ಕೆ ಹೆಚ್ಚಾಗಲಿವೆ.
ದರಗಳನ್ನು ಹೆಚ್ಚಿಸುವ ಸರ್ಕಾರದ ನಿರ್ಧಾರವು ಆರ್ಥಿಕತೆಯಲ್ಲಿ ಬಡ್ಡಿದರಗಳು ಇನ್ನಷ್ಟು ಭದ್ರವಾಗುವುದನ್ನು ಪ್ರತಿಬಿಂಬಿಸುತ್ತದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಮೇಲಿನ ಬಡ್ಡಿದರದಲ್ಲಿ ಅತ್ಯಧಿಕ ಏರಿಕೆ ಕಂಡುಬಂದಿದೆ, ಇದರಲ್ಲಿ ಹೂಡಿಕೆ ಮಾಡಿದರೆ ಶೇಕಡಾ 7.7ರವರೆಗೆ ಬಡ್ಡಿದರ ಸಿಗುತ್ತದೆ. ಏಪ್ರಿಲ್ 1-ಜೂನ್ 30, 2023 ರ ಅವಧಿಗೆ ಇದರ ಬಡ್ಡಿದರ ಶೇಕಡಾ 7ರಷ್ಟಿತ್ತು. ಹೆಣ್ಣು ಮಕ್ಕಳ ಉಳಿತಾಯ ಯೋಜನೆಯಾದ ಸುಕನ್ಯಾ ಸಮೃದ್ಧಿಯ ದರವನ್ನು ಶೇಕಡಾ 7.6 ರಿಂದ ಶೇಕಡಾ 8 ಕ್ಕೆ ಹೆಚ್ಚಿಸಲಾಗಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಹೊಸ ದರ - ಅದರ ಗರಿಷ್ಠ ಹೂಡಿಕೆಯ ಮಿತಿಯನ್ನು 15 ಲಕ್ಷದಿಂದ ರೂಪಾಯಿಗಳಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ, ಕಿಸಾನ್ ವಿಕಾಸ್ ಪತ್ರ (ಕೆವಿಪಿ)ಕ್ಕೆ ಕ್ರಮವಾಗಿ ಶೇಕಡಾ 8.2ಕ್ಕೆ ಏರಿಕೆಯಾಗಿದೆ. (ಮೊದಲು ಶೇಕಡಾ 8) ಮತ್ತು ಶೇಕಡಾ 7.6 (7.2 ಶೇಕಡಾ) ಆಗಿದೆ. ಕೆವಿಪಿ ಇನ್ನು ಮುಂದೆ 115 ತಿಂಗಳಲ್ಲಿ ಮೆಚ್ಯೂರ್ ಆಗಲಿದೆ. ಈ ಹಿಂದೆ ಅದು 120 ತಿಂಗಳಾಗುತ್ತಿತ್ತು.
ಪರಿಷ್ಕರಣೆಯ ನಂತರ, ಅಂಚೆ ಕಛೇರಿಗಳಲ್ಲಿನ ಒಂದು ವರ್ಷದ ಅವಧಿಯ ಠೇವಣಿಗೆ ಶೇಕಡಾ 6.8 ರಷ್ಟು ಬಡ್ಡಿದರ ಸಿಗುತ್ತದೆ. ಮೊದಲು ಶೇಕಡಾ 6.6 ರಷ್ಟಿತ್ತು. ಎರಡು ವರ್ಷಗಳ ಠೇವಣಿಯು ಶೇಕಡಾ 6.9 (ಹಿಂದೆ ಶೇ. 6.8), ಮೂರು ವರ್ಷಗಳ ಠೇವಣಿಗೆ ಶೇಕಡಾ 7 ಸಿಗುತ್ತದೆ. (ಹಿಂದೆ ಶೇಕಡಾ 6.9 ರಷ್ಟಿತ್ತು). ಐದು ವರ್ಷಗಳ ಠೇವಣಿ 7.5 ಶೇಕಡಾ ಬಡ್ಡಿಯನ್ನು ನೀಡುತ್ತದೆ. ಇದಕ್ಕೆ ಹಿಂದೆ ಶೇಕಡಾ 7 ನೀಡಲಾಗುತ್ತಿತ್ತು. ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ನ ದರವನ್ನು ಶೇಕಡಾ 7.1 ರಷ್ಟು ಮತ್ತು ಉಳಿತಾಯ ಠೇವಣಿಯ ಶೇಕಡಾ 4 ರಷ್ಟು ಉಳಿಸಿಕೊಳ್ಳಲಾಗಿದೆ, ಆದರೆ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ದರಗಳನ್ನು 30 ಬಿಪಿಎಸ್‌ನಿಂದ ಶೇಕಡಾ 7.4 ಕ್ಕೆ ಏರಿಸಲಾಗಿದೆ. ಮಾಸಿಕ ಯೋಜನೆಯ ಗರಿಷ್ಠ ಠೇವಣಿ ಮಿತಿಯನ್ನು ಏಕ ಖಾತೆದಾರರಿಗೆ 4 ಲಕ್ಷದಿಂದ 9 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಹಣಕಾಸು ಸಚಿವಾಲಯವು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ಸಹ ಸೂಚಿಸಿದೆ - ಮಹಿಳೆಯರಿಗೆ ಹೊಸ ಉಳಿತಾಯ ಯೋಜನೆ ಇದು ಶೇಕಡಾ 7.5 ಬಡ್ಡಿದರವನ್ನು ನೀಡುತ್ತದೆ. ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಪರಿಶೀಲಿಸುತ್ತದೆ. ಕಳೆದ ಒಂಬತ್ತು ತಿಂಗಳಲ್ಲಿ ಸಚಿವಾಲಯವು ಈ ಯೋಜನೆಗಳಿಗೆ ಬಡ್ಡಿದರಗಳನ್ನು ಹೆಚ್ಚಿಸಿರುವುದು ಇದು ಮೂರನೇ ಬಾರಿಯಾಗಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ವಿಶಾಲ ಆರ್ಥಿಕತೆಯಲ್ಲಿ ಬಡ್ಡಿದರಗಳು ಏರಿಕೆಯಾಗಿರುವುದರಿಂದ ಇತ್ತೀಚಿನ ಹೆಚ್ಚಳವು ನಿರೀಕ್ಷಿತ ಮಾರ್ಗಗಳಲ್ಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಹಣದುಬ್ಬರವನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಕಳೆದ ವರ್ಷ ಮೇ ತಿಂಗಳಿನಿಂದ ಅದರ ರೆಪೊ ದರವನ್ನು 250 bps ಹೆಚ್ಚಿಸಿದೆ, ಇದು ಅದರ ಸೌಕರ್ಯ ವಲಯದ 6 ಪ್ರತಿಶತದಷ್ಟು ಉಳಿದಿದೆ.
ಬೇಸಿಸ್ ಪಾಯಿಂಟ್, ಬಿಪಿಎಸ್ ಅಥವಾ ಬಿಪ್ಸ್ ಎಂದು ಕರೆಯುತ್ತಾರೆ. ಹಣಕಾಸು ಸಾಧನಗಳ ಮೌಲ್ಯದಲ್ಲಿನ ಶೇಕಡಾವಾರು ಬದಲಾವಣೆ ಅಥವಾ ಸೂಚ್ಯಂಕ ಅಥವಾ ಇತರ ಮಾನದಂಡದಲ್ಲಿನ ದರ ಬದಲಾವಣೆಯನ್ನು ವಿವರಿಸಲು ಹಣಕಾಸಿನಲ್ಲಿ ಬಳಸಲಾಗುವ ಅಳತೆಯ ಘಟಕವಾಗಿದೆ. ಒಂದು ಆಧಾರ ಬಿಂದುವು 0.01% (ಪ್ರತಿಶತದ 1/100 ನೇ) ಅಥವಾ ದಶಮಾಂಶ ರೂಪದಲ್ಲಿ 0.0001 ಗೆ ಸಮನಾಗಿರುತ್ತದೆ. ಅಂತೆಯೇ, 1.5 ಬೇಸಿಸ್ ಪಾಯಿಂಟ್‌ಗಳಂತಹ ಭಾಗಶಃ ಆಧಾರ ಬಿಂದುವು ದಶಮಾಂಶ ರೂಪದಲ್ಲಿ 0.015% ಅಥವಾ 0.00015 ಗೆ ಸಮನಾಗಿರುತ್ತದೆ.
Advertisement