721 ಮಿಲಿಯನ್ ಡಾಲರ್ ಗಳಿಗೆ ಕ್ರಿಕೆಟ್ ಪ್ರಸಾರ ಹಕ್ಕು ಖರೀದಿಸಿದ ಮುಖೇಶ್ ಅಂಬಾನಿ!
ಭಾರತೀಯ ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಪ್ರಸಾರ ವಿಭಾಗ ಭಾರತೀಯ ಕ್ರಿಕೆಟ್ ತಂಡದ ದ್ವಿಪಕ್ಷೀಯ ಪಂದ್ಯಗಳ ನೇರ ಪ್ರಸಾರದ ಹಕ್ಕುಗಳನ್ನು 721.41 ಮಿಲಿಯನ್ ಡಾಲರ್ ಗಳಿಗೆ ಖರೀದಿಸಿದ್ದಾರೆ.
Published: 31st August 2023 10:05 PM | Last Updated: 01st September 2023 08:13 PM | A+A A-
ನವದೆಹಲಿ: ಭಾರತೀಯ ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಪ್ರಸಾರ ವಿಭಾಗ ಭಾರತೀಯ ಕ್ರಿಕೆಟ್ ತಂಡದ ದ್ವಿಪಕ್ಷೀಯ ಪಂದ್ಯಗಳ ನೇರ ಪ್ರಸಾರದ ಹಕ್ಕುಗಳನ್ನು 721.41 ಮಿಲಿಯನ್ ಡಾಲರ್ ಗಳಿಗೆ ಖರೀದಿಸಿದ್ದಾರೆ.
ಈ ಹಿಂದೆ ಈ ಹಕ್ಕುಗಳನ್ನು ಹೊಂದಿದ್ದ ವಾಲ್ಟ್ ಡಿಸ್ನಿ ವಿರುದ್ಧದ ಉದ್ಯಮ ಪೈಪೋಟಿಯಲ್ಲಿ ಅಂಬಾನಿ ಮೇಲುಗೈ ಸಾಧಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಯ್ಟರ್ಸ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ರಿಲಾಯನ್ಸ್ ಇಂಡಸ್ಟ್ರೀಸ್ ಮಾಲಿಕತ್ವದ ವಯಾಕಾಮ್ 18- ಐಪಿಎಲ್-ಟಿ20 ಟೂರ್ನಿಯ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದಿರುವ ಸಂಸ್ಥೆ, 2023 ರ ಸೆಪ್ಟೆಂಬರ್ ನಿಂದ ಮಾರ್ಚ್ 2028 ವರೆಗಿನ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಗನ್ನು ಪ್ರಸಾರ ಮಾಡುವುದಕ್ಕೆ ಬಿಸಿಸಿಐ ಮಾಧ್ಯಮ ಹಕ್ಕುಗಳನ್ನು ಪಡೆದಿದೆ.
ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಬಳಿ ಇದ್ದ ಐಪಿಎಲ್ ಡಿಜಿಟಲ್ ಹಕ್ಕುಗಳನ್ನು 2.9 ಬಿಲಿಯನ್ ಡಾಲರ್ ಗಳಿಗೆ ಪಡೆದ ಬಳಿಕ ಅಂಬಾನಿ ಸಂಸ್ಥೆ ಕ್ರಿಕೆಟ್ ಗೆ ಸಂಬಂಧಿಸಿದಂತೆ ಪಡೆಯುತ್ತಿರುವ 2ನೇ ಹಕ್ಕುಗಳು ಇದಾಗಿದೆ. ಇದು ಡಿಸ್ನಿ ಜೊತೆಗೆ ಅಂಬಾನಿ ಸಂಸ್ಥೆಗಿನ ಪೈಪೋಟಿಯನ್ನು ಹೆಚ್ಚಿಸಿದೆ. ಬಿಸಿಸಿಐ ಬೇರೆ ಯಾವುದೇ ಬಿಡ್ಡರ್ ಗಳ ಹೆಸರನ್ನೂ ಉಲ್ಲೇಖಿಸಿಲ್ಲ.