ಬ್ಯಾಂಕ್ ಗಳಿಂದ ಅದಾನಿ ಸಮೂಹಕ್ಕೆ ನೀಡಿರುವ ಸಾಲದ ವಿವರ ಕೇಳಿದ ಆರ್ ಬಿಐ 

 ಆರ್ ಬಿಐ ಅದಾನಿ ಸಮೂಹಕ್ಕೆ ಸಾಲ ನೀಡಿರುವ ವಿವರಗಳನ್ನು ಕೇಳಿದೆ ಎಂದು ಬ್ಯಾಂಕ್ ಮೂಲಗಳು ಹೇಳಿವೆ.
ಅದಾನಿ ಸಮೂಹ
ಅದಾನಿ ಸಮೂಹ

ಮುಂಬೈ: ಆರ್ ಬಿಐ ಅದಾನಿ ಸಮೂಹಕ್ಕೆ ಸಾಲ ನೀಡಿರುವ ವಿವರಗಳನ್ನು ಕೇಳಿದೆ ಎಂದು ಬ್ಯಾಂಕ್ ಮೂಲಗಳು ಹೇಳಿವೆ.

ಷೇರುಗಳ ಬೆಲೆಯಲ್ಲಿ ತೀವ್ರ ಕುಸಿತದ ನಡುವೆ ಅದಾನಿ ಸಮೂಹ ರೂ.20,000 ಕೋಟಿ ರೂಗಳ ಫಾಲೋ ಆನ್ ಷೇರುಗಳ ಮಾರಾಟವನ್ನು ಹಿಂಪಡೆಯುವುದಾಗಿ ಫೆ.1 ರಂದು ಘೋಷಿಸಿದ 24 ಗಂಟೆಗಳಲ್ಲಿ ಆರ್ ಬಿಐ ಬ್ಯಾಂಕ್ ಗಳಿಂದ ಸಾಲದ ಮಾಹಿತಿಯನ್ನು ಕೇಳಿದೆ.

ಇನ್ನು ಎಫ್ ಪಿಒ ಗಳನ್ನು ಹಿಂಪಡೆಯುವ ನಿರ್ಧಾರ ಘೋಷಿಸಿದ ಬೆನ್ನಲ್ಲೇ ಸ್ವಿಸ್ ಬ್ಯಾಂಕ್ ಕ್ರೆಡಿಟ್ ಸ್ಯೂಸ್ಸೆ ಅದಾನಿ ಸಂಸ್ಥೆಯ ಬಾಂಡ್ ಗಳನ್ನು ಸಾಲ ನೀಡುವ ಪ್ರಕ್ರಿಯೆಯಲ್ಲಿ ಆಧಾರವಾಗಿ ಪರಿಗಣಿಸುವುದನ್ನು ನಿಲ್ಲಿಸಿರುವುದಾಗಿ ಘೋಷಿಸಿದೆ. 

ಅಮೇರಿಕಾದ ಶಾರ್ಟ್ ಸೆಲ್ಲರ್ ಹಿಂಡನ್ ಬರ್ಗ್ ಸಂಶೋಧನೆ ವರದಿ ಅದಾನಿ ಸಮೂಹ ಷೇರು ಮಾರುಕಟ್ಟೆಗೆ ಸಂಬಂಧಿಸಿದಂತೆ ಅಕ್ರಮವೆಸಗಿದೆ ಎಂದು ಆರೋಪಿಸಿದಾಗಿನಿಂದಲೂ ಅದಾನಿ ಷೇರುಗಳು ಕುಸಿತ ದಾಖಲಿಸಿವೆ, 

ದೊಡ್ಡ ಸಾಲಗಳ ಮೇಲಿನ ಮಾಹಿತಿಯ ಕೇಂದ್ರ ಭಂಡಾರ (ಸಿಆರ್ ಐಎಲ್ ಸಿ) ಡೇಟಾ ಬೇಸ್ ನ ಭಾಗವಾಗಿ ಆರ್ ಬಿಐ ಬ್ಯಾಂಕ್ ಗಳ ದೊಡ್ಡ ಕಾರ್ಪೊರೇಟ್ ಸಾಲಗಾರರ ಕುರಿತ ಮಾಹಿತಿಗೆ ಪ್ರವೇಶ ಹೊಂದಿರುತ್ತವೆ ಎಂದು ಬ್ಯಾಂಕಿಂಗ್ ಮೂಲಗಳು ತಿಳಿಸಿವೆ,
 
ಬ್ಯಾಂಕ್ ಗಳು ಹಲವು ಬಾರಿ ಹೊಣೆಗಾರಿಗೆ ಭದ್ರತೆಗಳನ್ನಿಟ್ಟುಕೊಂಡು ಸಾಲ ನೀಡುತ್ತವೆ ಹಾಗೂ ಅದಾನಿ ಸಮೂಹದ 10 ಲಿಸ್ಟೆಡ್ ಸಂಸ್ಥೆಗಳ ಈಕ್ವಿಟಿ ಷೇರುಗಳ ಬೆಲೆಯಲ್ಲಿ ಭರಿ ಕುಸಿತ ಕಂಡಿರುವುದರಿಂದ ಈ ಹೊಣೆಗಾರಿಗೆ ಭದ್ರತೆಗಳ ಮೌಲ್ಯವೂ ಕುಸಿತ ಕಂಡಿರುತ್ತದೆ.
 
ಹಿಂಡನ್ ಬರ್ಗ್ ಸಂಶೋಧನೆ ವರದಿ ಪ್ರಕಟವಾದ ಬೆನ್ನಲ್ಲೆ ಹೂಡಿಕೆದಾರರಲ್ಲಿ ಆತಂಕ ಮೂಡಿದ್ದು, ಬ್ಯಾಂಕ್ ಗಳ ಷೇರುಗಳ ಮಾರಾಟಕ್ಕೆ ಒತ್ತಡ ಹೆಚ್ಚಿದೆ. ಹೂಡಿಕೆದಾರರ ಆತಂಕವನ್ನು ನಿವಾರಿಸುವ ನಿಟ್ಟಿನಲ್ಲಿ ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ ಬಿಐ ಅದಾನಿ ಸಮೂಹಕ್ಕೆ ನೀಡಿರುವ ಸಾಲ ನಗದು ಉತ್ಪಾದಿಸುವ ಆಸ್ತಿಗಳ ಮೂಲಕ ಸುರಕ್ಷಿತವಾಗಿದೆ ಎಂದು ಹೇಳಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com