ಗೌತಮ್ ಅದಾನಿ(ಸಂಗ್ರಹ ಚಿತ್ರ)
ಗೌತಮ್ ಅದಾನಿ(ಸಂಗ್ರಹ ಚಿತ್ರ)

ಹಿಂಡನ್‌ಬರ್ಗ್‌ ಎಫೆಕ್ಟ್: ವಿಶ್ವದ ಟಾಪ್ 20 ಶ್ರೀಮಂತರ ಪಟ್ಟಿಯಿಂದ ಅದಾನಿ ಹೊರಕ್ಕೆ

ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ರಿಸರ್ಚ್‌ ವರದಿಯ ಬಳಿಕ ಅದಾನಿ ಕಂಪನಿಯ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತವಾಗಿದ್ದು, ಉದ್ಯಮಿ ಗೌತಮ್ ಅದಾನಿ ಅವರು ಶುಕ್ರವಾರ ವಿಶ್ವದ...

ನವದೆಹಲಿ: ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್‌ ರಿಸರ್ಚ್‌ ವರದಿಯ ಬಳಿಕ ಅದಾನಿ ಕಂಪನಿಯ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತವಾಗಿದ್ದು, ಉದ್ಯಮಿ ಗೌತಮ್ ಅದಾನಿ ಅವರು ಶುಕ್ರವಾರ ವಿಶ್ವದ ಟಾಪ್ 20 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದಾರೆ.

ಇಂದು ಫೋರ್ಬ್ಸ್‌ ಬಿಡುಗಡೆ ಮಾಡಿರುವ ವಿಶ್ವದ ರಿಯಲ್-ಟೈಮ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಗೌತಮ್ ಅದಾನಿ ಅವರು 22ನೇ ಸ್ಥಾನಕ್ಕೆ ಕುಸಿದಿದ್ದಾರೆ. ಗೌತಮ್ ಅದಾನಿ ಅವರ ಸಂಪತ್ತು ಶೇಕಡಾ 21.77 ಅಥವಾ USD 16.2 ಬಿಲಿಯನ್ ಕುಸಿದಿದೆ.

ಕಳೆದ ಎರಡು ವಾರಗಳಿಂದ ಗೌತಮ್ ಅದಾನಿ ಕಂಪನಿಗಳ ಷೇರುಗಳಲ್ಲಿ ಭಾರಿ ಕುಸಿತ ದಾಖಲಾಗುತ್ತಿದೆ. ವಿಶ್ವದ ಮೊದಲ 500 ಶ್ರೀಮಂತ ಪುರುಷರು ಮತ್ತು ಮಹಿಳೆಯರ ಪಟ್ಟಿಯಲ್ಲಿ, ಅದಾನಿ 2023ನೇ ವರ್ಷದಲ್ಲಿ ಅತಿದೊಡ್ಡ ಕುಸಿತ ಕಂಡಿದ್ದಾರೆ.

ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಫ್ರೆಂಚ್ ಐಷಾರಾಮಿ ಫ್ಯಾಷನ್ ದೈತ್ಯ ಲೂಯಿ ವಿಟಾನ್ ಮತ್ತು ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರು ಮೊದಲ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ನಿವ್ವಳ ಆಸ್ತಿ 217.5 ಬಿಲಿಯನ್ ಡಾಲರ್ ಇದ್ದು, ಎಲೋನ್ ಮಸ್ಕ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ನಿವ್ವಳ ಮೌಲ್ಯ 183.2 ಬಿಲಿಯನ್ ಡಾಲರ್ ಆಗಿದೆ. ಮೂರನೇ ಸ್ಥಾನದಲ್ಲಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಇದ್ದಾರೆ. ಅವರ ಒಟ್ಟು ನಿವ್ವಳ ಮೌಲ್ಯ 136 ಬಿಲಿಯನ್ ಡಾಲರ್.

Related Stories

No stories found.

Advertisement

X
Kannada Prabha
www.kannadaprabha.com