ಶೀಘ್ರದಲ್ಲೇ ಅದಾನಿ ಸಂಸ್ಥೆಯ ಉನ್ನತ ಅಧಿಕಾರಿಗಳ ಭೇಟಿ: ಎಲ್ಐಸಿ ಅಧ್ಯಕ್ಷ
ಸಾರ್ವಜನಿಕ ವಲಯದ ವಿಮಾ ಸಂಸ್ಥೆಯ ಅಧಿಕಾರಿಗಳು ಶೀಘ್ರದಲ್ಲೇ ಅದಾನಿ ಗ್ರೂಪ್‌ನ ಉನ್ನತ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಮತ್ತು ಸಂಸ್ಥೆಯು ಎದುರಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ಸ್ಪಷ್ಟೀಕರಣ ಪಡೆಯಲಿದ್ದಾರೆ...
Published: 09th February 2023 11:48 PM | Last Updated: 10th February 2023 02:22 PM | A+A A-

ಎಂ ಆರ್ ಕುಮಾರ್
ಮುಂಬೈ: ಸಾರ್ವಜನಿಕ ವಲಯದ ವಿಮಾ ಸಂಸ್ಥೆಯ ಅಧಿಕಾರಿಗಳು ಶೀಘ್ರದಲ್ಲೇ ಅದಾನಿ ಗ್ರೂಪ್‌ನ ಉನ್ನತ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ ಮತ್ತು ಸಂಸ್ಥೆಯು ಎದುರಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ಸ್ಪಷ್ಟೀಕರಣ ಪಡೆಯಲಿದ್ದಾರೆ ಎಂದು ಎಲ್‌ಐಸಿ ಅಧ್ಯಕ್ಷ ಎಂ ಆರ್ ಕುಮಾರ್ ಅವರು ಗುರುವಾರ ಹೇಳಿದ್ದಾರೆ.
ಅಮೆರಿಕ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ರಿಸರ್ಚ್ ವರದಿಯ ಬಳಿಕ ಅದಾನಿ ಕಂಪನಿಯ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತವಾಗಿದ್ದು, ಅದಾನಿ ಸಮೂಹ ಸಂಸ್ಥೆಗಳಲ್ಲಿ ಎಲ್‌ಐಸಿ ಸಹ ಹೂಡಿಕೆ ಮಾಡಿದೆ.
"ನಮ್ಮ ಹೂಡಿಕೆದಾರರ ತಂಡವು ಈಗಾಗಲೇ ಅದಾನಿ ಸಂಸ್ಥೆಯಿಂದ ಸ್ಪಷ್ಟೀಕರಣವನ್ನು ಕೇಳಿದೆ. ಆದರೆ ನಾವು ಫಲಿತಾಂಶಗಳ ತಯಾರಿಯಲ್ಲಿ ನಿರತರಾಗಿರುವ ಕಾರಣ ನಮ್ಮ ಉನ್ನತ ಅಧಿಕಾರಿಗಳು ಅವರನ್ನು ಇನ್ನೂ ಭೇಟಿ ಮಾಡಿಲ್ಲ. ಶೀಘ್ರದಲ್ಲೇ ಅವರನ್ನು ಭೇಟಿ ಮಾಡಿ ಸ್ಪಷ್ಟನೆ ಪಡೆಯಲಾಗುವುದು ಎಂದು ಕುಮಾರ್ ತಿಳಿಸಿದ್ದಾರೆ.
ಇದನ್ನು ಓದಿ: ಅದಾನಿ ಗ್ರೂಪ್ ನಲ್ಲಿ ಎಸ್‌ಬಿಐ-ಎಲ್‌ಐಸಿ ಹೂಡಿಕೆಯ ಬಗ್ಗೆ ಮೌನ ಮುರಿದ ನಿರ್ಮಲಾ ಸೀತಾರಾಮನ್!
"ಅದಾನಿ ಸಂಸ್ಥೆಯಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಬಯಸುತ್ತೇವೆ. ಇಡೀ ಬಿಕ್ಕಟ್ಟನ್ನು ಅವರು ಹೇಗೆ ನಿರ್ವಹಿಸುತ್ತಿದ್ದಾರೆಂದು ತಿಳಿಯಲು ನಾವು ಶೀಘ್ರದಲ್ಲೇ ಅವರನ್ನು ಭೇಟಿ ಮಾಡುತ್ತೇವೆ" ಎಂದು ಕುಮಾರ್ ಹೇಳಿದ್ದಾರೆ.