ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ್ದ ಮಿಶ್ರಾಗೆ ಏರ್ ಇಂಡಿಯಾದಿಂದ 4 ತಿಂಗಳು ನಿಷೇಧ
ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಶಂಕರ್ ಮಿಶ್ರಾಗೆ ಏರ್ ಇಂಡಿಯಾ ನಾಲ್ಕು ತಿಂಗಳ ಕಾಲ ವಿಮಾನ...
Published: 19th January 2023 08:00 PM | Last Updated: 20th January 2023 01:37 PM | A+A A-

ಆರೋಪಿ ಶಂಕರ್ ಮಿಶ್ರಾ
ನವದೆಹಲಿ: ನ್ಯೂಯಾರ್ಕ್-ದೆಹಲಿ ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಶಂಕರ್ ಮಿಶ್ರಾಗೆ ಏರ್ ಇಂಡಿಯಾ ನಾಲ್ಕು ತಿಂಗಳ ಕಾಲ ವಿಮಾನ ಪ್ರಯಾಣ ನಿಷೇಧಿಸಿದೆ.
ಶಂಕರ್ ಮಿಶ್ರಾ ಅವರು ಏರ್ ಇಂಡಿಯಾದ ಯಾವುದೇ ವಿಮಾನಗಳಲ್ಲಿ ನಾಲ್ಕು ತಿಂಗಳ ಕಾಲ ಪ್ರಯಾಣ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಂಡಿರುವುದಾಗಿ ಎಎನ್ಐ ಟ್ವೀಟ್ ಮಾಡಿದೆ.
ಇದನ್ನು ಓದಿ: ವಿಮಾನದಲ್ಲಿ 'ಮೂತ್ರ ವಿಸರ್ಜನೆ' ಘಟನೆ: ಶಂಕರ್ ಮಿಶ್ರಾ ಹೇಳಿಕೆ ಅವಹೇಳನಕಾರಿ ಎಂದ ದೂರುದಾರ ಮಹಿಳೆ!
ಮಿಶ್ರಾ, ಕಳೆದ ವರ್ಷ ನವೆಂಬರ್ 26 ರಂದು ಏರ್ ಇಂಡಿಯಾ ನ್ಯೂಯಾರ್ಕ್-ದೆಹಲಿ ವಿಮಾನದಲ್ಲಿ ಕುಡಿದ ಅಮಲಿನಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಮಹಿಳೆಯ ದೂರಿನ ಮೇರೆಗೆ ದೆಹಲಿ ಪೊಲೀಸರು ಜನವರಿ 4 ರಂದು ಶಂಕರ್ ಮಿಶ್ರಾ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.