ಮ್ಯೂಸಿಕ್ ಸ್ಟ್ರೀಮಿಂಗ್ ಸಂಸ್ಥೆ Spotify ನ ಶೇ.6 ರಷ್ಟು ಉದ್ಯೋಗಿಗಳು ವಜಾ

ಮ್ಯೂಸಿಕ್ ಸ್ಟ್ರೀಮಿಂಗ್ ಸಂಸ್ಥೆ ಸ್ಪಾಟಿಪೈ ಟೆಕ್ನಾಲಜಿ ತನ್ನ ಸಿಬ್ಬಂದಿಯ ಶೇಕಡಾ 6 ರಷ್ಟು ಅಂದರೆ ಸರಿಸುಮಾರು 600 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಇದರೊಂದಿಗೆ ಇತ್ತೀಚಿಗೆ ಉದ್ಯೋಗ ಕಡಿತ ಘೋಷಿಸಿದ ಅಮೆಜಾನ್, ಮೆಟಾ ಫ್ಲಾಟ್ ಫಾರ್ಮ್ ನಂತಹ ಕಂಪನಿಗಳೊಂದಿಗೆ ಸ್ಪಾಟಿಫೈ ಸಂಸ್ಥೆಯೂ ಸೇರುತ್ತಿದೆ ಎಂದು ವರದಿಗಳು ತಿಳಿಸಿವೆ.
ಸ್ಟಾಟಿಪೈನ
ಸ್ಟಾಟಿಪೈನ

ನವದೆಹಲಿ: ಮ್ಯೂಸಿಕ್ ಸ್ಟ್ರೀಮಿಂಗ್ ಸಂಸ್ಥೆ ಸ್ಪಾಟಿಪೈ ಟೆಕ್ನಾಲಜಿ ತನ್ನ ಸಿಬ್ಬಂದಿಯ ಶೇಕಡಾ 6 ರಷ್ಟು ಅಂದರೆ ಸರಿಸುಮಾರು 600 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಇದರೊಂದಿಗೆ ಇತ್ತೀಚಿಗೆ ಉದ್ಯೋಗ ಕಡಿತ ಘೋಷಿಸಿದ ಅಮೆಜಾನ್, ಮೆಟಾ ಫ್ಲಾಟ್ ಫಾರ್ಮ್ ನಂತಹ ಕಂಪನಿಗಳೊಂದಿಗೆ ಸ್ಪಾಟಿಫೈ ಸಂಸ್ಥೆಯೂ ಸೇರುತ್ತಿದೆ ಎಂದು ವರದಿಗಳು ತಿಳಿಸಿವೆ.

ಅಕ್ಟೋಬರ್ ತಿಂಗಳಲ್ಲಿ ತನ್ನ ಗಿಮ್ಲೆಟ್ ಮೀಡಿಯಾ ಮತ್ತು ಪಾರ್ಕಾಸ್ಟ್ ಪಾಡ್‌ಕಾಸ್ಟ್ ಸ್ಟುಡಿಯೋಗಳಿಂದ 38 ಸಿಬ್ಬಂದಿಯನ್ನು ಸ್ಪಾಟಿಫೈ ವಜಾಗೊಳಿಸಿತ್ತು. ಸಂಗೀತ-ಸ್ಟ್ರೀಮಿಂಗ್ ದೈತ್ಯ ಸ್ಪಾಟಿಫೈ ಸುಮಾರು 9,800 ಉದ್ಯೋಗಿಗಳನ್ನು ಹೊಂದಿದೆ. ಇದು ಐರಿಶ್ ನಲ್ಲಿಯೂ ಕಾರ್ಯನಿರ್ವಹಿಸುತ್ತಿದೆ.  ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಾರ್ಕ್ ಲಿಟಲ್ಸ್ ಕಿನ್ಜೆನ್ ಅನ್ನು ಖರೀದಿಸಿತು ಎಂದು ಐರಿಶ್ ಟೈಮ್ಸ್ ವರದಿ ಮಾಡಿದೆ.

ಸಾಂಕ್ರಾಮಿಕದಿಂದ ಆದ ದೊಡ್ಡ ಹೊಡೆತದಿಂದ ಸುಧಾರಿಸಿಕೊಳ್ಳುವ ಭರವಸೆಯಿದೆ. ವಿಶಾಲವಾದ ಜಾಗತಿಕ ವ್ಯಾಪಾರ ಮತ್ತು ಜಾಹೀರಾತುಗಳಲ್ಲಿನ ನಿಧಾನಗತಿಯ ಆದಾಯ ಸಂಗ್ರಹ ಕಾರಣದಿಂದ ನಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಶೇಕಡಾ 6 ರಷ್ಟು ಕಡಿಮೆಗೊಳಿಸುತ್ತಿದ್ದೇವೆ ಎಂದು ಮುಖ್ಯ ಕಾರ್ಯನಿರ್ವಾಹಕ ಡೇನಿಯಲ್ ಏಕ್ ಸ್ಪಾಟಿಫೈ ತನ್ನ ಸಿಬ್ಬಂದಿಗೆ ಕಳುಹಿಸಿರುವ ಇಮೇಲ್ ನಲ್ಲಿ ತಿಳಿಸಿದ್ದಾರೆ.

ಕಂಪನಿಯ ಕಂಟೆಂಟ್ ಮುಖ್ಯಸ್ಥ ಮತ್ತು ಜಾಹೀರಾತು ವ್ಯವಹಾರ ಅಧಿಕಾರಿ ಡಾನ್ ಓಸ್ಟ್ರೋಫ್ ಕೂಡಾ ಸಂಸ್ಥೆ ತೊರೆಯಲಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com