ಹಿಂಡನ್ ಬರ್ಗ್ ವರದಿ ಪರಿಣಾಮ: ಅದಾನಿ ಷೇರುಗಳು ಶೇ.20 ರಷ್ಟು ಕುಸಿತ

ಅದಾನಿ ಸಮೂಹದ ಷೇರುಗಳಿಗೆ ಈ ಶುಕ್ರವಾರ ಶುಭವಾಗಿಲ್ಲ. ಅಮೇರಿಕಾ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹೈಡನ್ ಬರ್ಗ್ ರಿಸರ್ಚ್ ಅದಾನಿ ಸಮೂಹದ ಬಗ್ಗೆ ಹಾನಿಕರ ಆರೋಪಗಳ ಪರಿಣಾಮವಾಗಿ ಷೇರುಗಳು ಕುಸಿತ ಕಂಡಿದೆ.
ಗೌತಮ್ ಅದಾನಿ
ಗೌತಮ್ ಅದಾನಿ

ಮುಂಬೈ: ಅದಾನಿ ಸಮೂಹದ ಷೇರುಗಳಿಗೆ ಈ ಶುಕ್ರವಾರ ಶುಭವಾಗಿಲ್ಲ. ಅಮೇರಿಕಾ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ರಿಸರ್ಚ್ ಅದಾನಿ ಸಮೂಹದ ಬಗ್ಗೆ ಹಾನಿಕರ ಆರೋಪಗಳ ಪರಿಣಾಮವಾಗಿ ಷೇರುಗಳು ಕುಸಿತ ಕಂಡಿದೆ.

ಬಿಎಸ್ ಇ ನಲ್ಲಿ ಅದಾನಿ ಟೋಟಲ್ ಗ್ಯಾಸ್ ನ ಷೇರುಗಳು ಶೇ.19.65 ರಷ್ಟು ಕುಸಿತ ಕಂಡಿದ್ದರೆ, ಅದಾನಿ ಟ್ರಾನ್ಸ್ಮಿಷನ್ ಶೇ.19 ರಷ್ಟು ಕುಸಿತ ಕಂಡಿದೆ. ಅದಾನಿ ಗ್ರೀನ್ ಎನರ್ಜಿ ಶೇ.15.50 ರಷ್ಟು ಅದಾನಿ ಎಂಟರ್ ಪ್ರೈಸಸ್ ಶೇ.6.19 ರಷ್ಟು ಕುಸಿತ ಕಂಡಿದೆ. 

ಅದಾನಿ ಪೋರ್ಟ್ ಹಾಗೂ ವಿಶೇಷ ಆರ್ಥಿಕ ಜೋನ್ ನ ಷೇರುಗಳು ಶೇ.5.31 ರಷ್ಟು ಅದಾನಿ ವಿಲ್ಮಾರ್ ಷೇರುಗಳು ಶೇ.5 ರಷ್ಟು ಹಾಗೂ ಅದಾನಿ ಪವರ್ ಷೇರುಗಳು ಶೇ.4.99 ಕ್ಕೆ ಕುಸಿತ ಕಂಡಿದೆ. 

ಇನ್ನು ಸಂಘಟಿತ ಸಂಸ್ಥೆಗಳ ಪ್ರಮುಖ ಸಂಸ್ಥೆಯಲ್ಲಿ ಮೆಗಾ ಷೇರು ಮಾರಾಟವನ್ನು ಹಾಳುಮಾಡುವ ಪ್ರಯತ್ನ ಮಾಡಿರುವ ಹಿಂಡರ್ ಬರ್ಗ್ ರಿಸರ್ಚ್ ನ ವಿರುದ್ಧ ದಂಡನಾತ್ಮಕ ಕ್ರಮವನ್ನು ಜರುಗಿಸಲು ಕಾನೂನು ಆಯ್ಕೆಗಳನ್ನು ಪರಿಶೀಲಿಸುತ್ತಿರುವುದಾಗಿ ಅದಾನಿ ಸಮೂಹ ತಿಳಿಸಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೇರಿಕ ಸಂಸ್ಥೆ, ಅದಾನಿ ಸಮೂಹ ಮಾರುಕಟ್ಟೆ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆಯ ಆರೋಪದ ವರದಿಗೆ ಬದ್ಧವಾಗಿರುವುದಾಗಿ ಹೇಳಿದೆ. 

ತನ್ನ ಎರಡು ವರ್ಷಗಳ ಸಂಶೋಧನೆಯಲ್ಲಿ ಅದಾನಿ ಸಮೂಹ ಹಲವು ದಶಕಗಳಿಂದ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ ಯೋಜನೆಯಲ್ಲಿ ತೊಡಗಿದೆ ಎಂದು ಅಮೇರಿಕ ಮೂಲದ ಹೂಡಿಕೆ ಸಂಶೋಧನೆ ಸಂಸ್ಥೆ ಹಿಂಡರ್ಬರ್ಗ್ ಗಂಭೀರ ಆರೋಪ ಮಾಡಿತ್ತು ಪರಿಣಾಮ ಅದಾನಿ ಸಮೂಹದ ಷೇರುಗಳು ತೀವ್ರ ಕುಸಿತ ಕಂಡಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com