ಆರ್ ಬಿಐ ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟ: ರೆಪೊ ದರ ಯಥಾಸ್ಥಿತಿ ಮುಂದುವರಿಕೆ; ಎಷ್ಟು? ಇಲ್ಲಿದೆ ಮಾಹಿತಿ
ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ಹಣಕಾಸು ನೀತಿ ಸಮಿತಿ (MPC) ಇಂದು ಗುರುವಾರ ತನ್ನ ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟಿಸಿದ್ದು, ರೆಪೊ ದರವನ್ನು(Repo rate) ಶೇಕಡಾ 6.5ರಷ್ಟು ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದೆ.
Published: 08th June 2023 10:58 AM | Last Updated: 08th June 2023 02:11 PM | A+A A-

ಆರ್ ಬಿಐ ಗವರ್ನರ್
ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ಹಣಕಾಸು ನೀತಿ ಸಮಿತಿ (MPC) ಇಂದು ಗುರುವಾರ ತನ್ನ ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟಿಸಿದ್ದು, ರೆಪೊ ದರವನ್ನು(Repo rate) ಶೇಕಡಾ 6.5ರಷ್ಟು ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದೆ.
ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮುಂಬೈಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ತ್ರೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದರು. 2023–24ರ ಆರ್ಥಿಕ ವರ್ಷಕ್ಕೆ, ಎರಡನೇ ದ್ವೈಮಾಸಿಕ ಹಣಕಾಸು ನೀತಿ ಸಭೆಯು ಮೂರು ದಿನಗಳ ಅವಧಿಯಲ್ಲಿ ಮೊನ್ನೆ ಜೂನ್ 6ಕ್ಕೆ ಪ್ರಾರಂಭವಾಗಿದ್ದು, ಇಂದು ಮುಕ್ತಾಯವಾಗುತ್ತದೆ.
ವಿತ್ತೀಯ ನೀತಿಯಲ್ಲಿ ರೆಪೊ ದರವನ್ನು ಶೇಕಡಾ 6.5ರಷ್ಟು ಮುಂದುವರಿಸಲು ನಿರ್ಧರಿಸಲಾಯಿತು. ಆರ್‌ಬಿಐ ಪಾಲಿಸಿ ರೆಪೊ ದರವನ್ನು ಶೇಕಡಾ 6.5 ರಲ್ಲಿ ಇರಿಸುತ್ತದೆ ಎಂದು ಮಾರುಕಟ್ಟೆ ನಿರೀಕ್ಷಿಸಿತ್ತು. ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆ ಮತ್ತು ಭವಿಷ್ಯದ ಇಳಿಕೆಯ ಸಾಧ್ಯತೆಯು ಹಿಂದಿನ ನೀತಿ ದರದ ಪರಿಣಾಮಕಾರಿತ್ವವನ್ನು ಪ್ರದರ್ಶಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕಳೆದ ಏಪ್ರಿಲ್ 6 ರಂದು ನಡೆದ ಹೊಸ ಹಣಕಾಸು ವರ್ಷ 2023–24 (FY24) ಗಾಗಿ ತನ್ನ ಮೊದಲ ದ್ವೈಮಾಸಿಕ ನೀತಿ ಸಭೆಯಲ್ಲಿ MPC ರೆಪೊ ದರವನ್ನು ಶೇಕಡಾ 6.5ರಷ್ಟು ಉಳಿಸಲಾಗಿತ್ತು. ಕಳೆದ ಮೇ ತಿಂಗಳಿನಿಂದ ರೆಪೊ ದರವನ್ನು ಈಗಾಗಲೇ ಒಟ್ಟು 250 ಮೂಲ ಅಂಶಗಳನ್ನು ಹಣದುಬ್ಬರವನ್ನು ತಗ್ಗಿಸುವ ಪ್ರಯತ್ನದಲ್ಲಿ ಹೆಚ್ಚಿಸಲಾಗಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಪ್ರಕಾರ ಕೇಂದ್ರೀಯ ಬ್ಯಾಂಕ್ ಸ್ಥಿರತೆಯನ್ನು ಆದ್ಯತೆಯಾಗಿ ಇರಿಸಿದೆ. ದೇಶೀಯ ಆರ್ಥಿಕತೆಯ ಮೂಲಭೂತ ಅಂಶಗಳು ಸುಧಾರಿಸುತ್ತಿವೆ. ಪ್ರಪಂಚದಾದ್ಯಂತ ನೀತಿಯನ್ನು ಸಾಮಾನ್ಯಗೊಳಿಸುವ ವಿಷಯದಲ್ಲಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: 2023 ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇ.7 ದಾಟಿದರೆ ಅಚ್ಚರಿ ಬೇಡ: ಆರ್ ಬಿಐ ಗೌರ್ನರ್
ಭಾರತದ ಆರ್ಥಿಕತೆ ಮತ್ತು ಹಣಕಾಸು ವಲಯವು ಚೇತರಿಸಿಕೊಳ್ಳುವ ಅಂಶ ನೋಡಿದರೆ ತೃಪ್ತಿಯಾಗುತ್ತದೆ ಎಂದರು. ಮುಖ್ಯ ಹಣದುಬ್ಬರವು ಗುರಿ ಶೇಕಡಾ 4ಕ್ಕಿಂತ ಹೆಚ್ಚಿದೆ. ವರ್ಷದ ಉಳಿದ ಅವಧಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಉಳಿಯುವ ನಿರೀಕ್ಷೆಯಿದೆ. ಆರ್ಥಿಕ ಬೆಳವಣಿಗೆ ಸಮಾಧಾನಕರವಾಗಿದೆ ಎಂದರು.
Monetary Policy Statement by Shri Shaktikanta Das, RBI Governor - June 08, 2023 https://t.co/R9mQDcr70D
— ReserveBankOfIndia (@RBI) June 8, 2023
ರೆಪೊ ದರ (Repo rate): ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರ ರೆಪೊ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ.
ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರ ಬ್ಯಾಂಕು ಆರ್ ಬಿಐ ರೆಪೊ ದರವನ್ನು ಹೆಚ್ಚಿಸುತ್ತವೆ, ಸಾಧ್ಯವಾದಷ್ಟು ಬ್ಯಾಂಕುಗಳು ಆರ್ ಬಿಐಯಿಂದ ಸಾಲ ಪಡೆಯುವುದನ್ನು ತಡೆಯುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ.
ರಿವರ್ಸ್ ರೆಪೊ ದರ (Reverse repo rate): ಇದಕ್ಕೆ ಪ್ರತಿಯಾಗಿ ಆರ್‌ಬಿಐ ಅಲ್ಪಾವಧಿಗೆ ಬ್ಯಾಂಕುಗಳಿಂದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ.