ಹಣದುಬ್ಬರದಿಂದ ವೈಯಕ್ತಿಕ ಖರ್ಚುಗಳು ಇಳಿಮುಖ: ಖಾಸಗಿ ಹೂಡಿಕೆಗಳ ಮೇಲೆ ಪರಿಣಾಮ

ಹಣದುಬ್ಬರದಿಂದ ವೈಯಕ್ತಿಕ ಖರ್ಚುಗಳು ಇಳಿಮುಖವಾಗುತ್ತಿದ್ದು, ಅದು ಖಾಸಗಿ ಹೂಡಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರ್ ಬಿಐ ಪ್ರಕಟಿಸಿರುವ ಪತ್ರದ ಮೂಲಕ ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಹಣದುಬ್ಬರದಿಂದ ವೈಯಕ್ತಿಕ ಖರ್ಚುಗಳು ಇಳಿಮುಖವಾಗುತ್ತಿದ್ದು, ಅದು ಖಾಸಗಿ ಹೂಡಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರ್ ಬಿಐ ಪ್ರಕಟಿಸಿರುವ ಪತ್ರದ ಮೂಲಕ ತಿಳಿದುಬಂದಿದೆ.

ಆರ್ ಬಿಐ ಉಪಗೌರ್ನರ್ ಮೈಕೆಲ್ ದೇಬಬ್ರತಾ ಪತ್ರ ನೇತೃತ್ವದ ತಂಡ  ಈ ಲೇಖನವನ್ನು ಪ್ರಕಟಿಸಿದ್ದು, ಗ್ರಾಹಕ ಖರ್ಚುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಣದುಬ್ಬರವನ್ನು ಕಡಿಮೆ ಮಾಡುವ ಅಗತ್ಯತೆಯನ್ನು ಉಪಗೌರ್ನರ್ ಮೈಕೆಲ್ ದೇಬಬ್ರತಾ ಹೇಳಿದ್ದಾರೆ.

ಆರ್ ಬಿಐ ನ ಹಣಕಾಸು ನೀತಿ ಕ್ರಮಗಳು ಮತ್ತು ಸರ್ಕಾರದ ಕ್ರಮಗಳ ಪರಿಣಾಮವಾಗಿ 2022-23ರ ಅವಧಿಯಲ್ಲಿ ಶೇ.5 ಕ್ಕಿಂತ ಹೆಚ್ಚಿರುವ ಗ್ರಾಹಕ ಬೆಲೆ ಸೂಚ್ಯಂಕ ಸಿಪಿಐ ಆಧಾರಿತ ಚಿಲ್ಲರೆ ಹಣದುಬ್ಬರ ಈಗ ಇಳಿಮುಖವಾಗಿದೆ. ಮೇ ತಿಂಗಳಲ್ಲಿ ಎರಡು ವರ್ಷಗಳ ಕನಿಷ್ಠ 4.25 ಶೇ. ಕುಸಿದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com