ಎಲಾನ್ ಮಸ್ಕ್ ತೆಕ್ಕೆಗೆ ಬಿದ್ದ ಟ್ವಿಟರ್ ನ ಮೌಲ್ಯ ಅರ್ಧದಷ್ಟು ಕುಸಿತ!

ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ 5 ತಿಂಗಳಲ್ಲೇ ಸಾಮಾಜಿಕ ಜಾಲತಾಣ ಮಾಧ್ಯಮದ ಮೌಲ್ಯ ಅರ್ಧದಷ್ಟು ಕುಸಿತ ಕಂಡಿದೆ. 
ಎಲಾನ್ ಮಸ್ಕ್-ಟ್ವಿಟರ್
ಎಲಾನ್ ಮಸ್ಕ್-ಟ್ವಿಟರ್

ನ್ಯೂಯಾರ್ಕ್: ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ 5 ತಿಂಗಳಲ್ಲೇ ಸಾಮಾಜಿಕ ಜಾಲತಾಣ ಮಾಧ್ಯಮದ ಮೌಲ್ಯ ಅರ್ಧದಷ್ಟು ಕುಸಿತ ಕಂಡಿದೆ.
 
ಅಮೇರಿಕಾದ ಸುದ್ದಿ ಸಂಸ್ಥೆಯೊಂದಕ್ಕೆ ಲಭ್ಯವಾದ ಆಂತರಿಕ ಇ-ಮೇಲ್ ನ ಪ್ರಕಾರ, ಎಲಾನ್ ಮಸ್ಕ್ ತಾವು ಖರೀದಿಸಿದಾಗ 44 ಬಿಲಿಯನ್ ಡಾಲರ್ ಇದ್ದ ಟ್ವಿಟರ್ ನ ಮೌಲ್ಯವನ್ನು ಈಗ 20 ಬಿಲಿಯನ್ ಡಾಲರ್ ಗೆ ಇಳಿಕೆ ಮಾಡಿದ್ದಾರೆ.
 
ಸಂಸ್ಥೆಯ ಉದ್ಯೋಗಿಗಳಿಗೆ ಕಳಿಸಲಾದ ಇ-ಮೇಲ್ ನಲ್ಲಿ ಷೇರು ಪರಿಹಾರಕ್ಕೆ ರೂಪಿಸಲಾಗಿರುವ ಹೊಸ ಕಾರ್ಯಕ್ರಮದ ಬಗ್ಗೆ ಉಲ್ಲೇಖಿಸಲಾಗಿದೆ. 

ಈ ಪರಿಹಾರ ಯೋಜನೆಯಲ್ಲಿ ಸಂಸ್ಥೆಯ ಮೌಲ್ಯವನ್ನು 20 ಬಿಲಿಯನ್ ಡಾಲರ್ ಗೆ ನಿಗದಿಪಡಿಸಲಾಗಿದೆ ಇದು ಸ್ನ್ಯಾಪ್ ಚಾಟ್ ನ ಮಾತೃಸಂಸ್ಥೆ ಸ್ನ್ಯಾಪ್ (18.2 ಬಿಲಿಯನ್ ಡಾಲರ್) ಗಿಂತಲೂ ಸ್ವಲ್ಪ ಹೆಚ್ಚಿನ ಮೌಲ್ಯವನ್ನು ಹೊಂದಿದೆ.

ಟೆಸ್ಲಾ ಐಎನ್ ಸಿ ಯ ಸಿಇಒ ಆಗಿರುವ ಮಸ್ಕ್, ಟ್ವಿಟರ್ ಪ್ರತಿ ಆರು ತಿಂಗಳಿಗೊಮ್ಮೆ ತನ್ನ ಉದ್ಯೋಗಿಗಳಿಗೆ ಷೇರುಗಳಿಂದ ನಗದು ಲಾಭ ಪಡೆಯಲು ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ. 

ಟ್ವಿಟರ್ ನ ಸಂವಹನ ವಿಭಾಗಕ್ಕೆ ಕಳಿಸಲಾದ ಎಎಫ್ ಪಿ ಇ-ಮೇಲ್ ಪ್ರಶ್ನೆಗೆ ಸ್ವಯಂಚಾಲಿತವಾದ ಪೂಪ್ (ಹಿಕ್ಕೆ)ಯ ಎಮೋಜಿಯನ್ನು ಕಳಿಸಲಾಗಿದೆ. ಆಂತರಿಕ ಇ-ಮೇಲ್ ನಲ್ಲಿ ಸಂಸ್ಥೆಯ ಮೌಲ್ಯ ಕುಗ್ಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮಸ್ಕ್, ಸಾಮಾಜಿಕ ಜಾಲತಾಣ ಮಾಧ್ಯಮ ಸಂಸ್ಥೆ ಒಂದು ಹಂತದಲ್ಲಿ ದಿವಾಳಿ ಘೋಷಿಸಿಕೊಳ್ಳುವ ಹಂತಕ್ಕೆ ಆರ್ಥಿಕ ಸಮಸ್ಯೆಗಳನ್ನು ಎದುರಿಸಿತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com