12 ತಿಂಗಳಲ್ಲಿ ಸ್ವಿಗ್ಗಿಯಲ್ಲಿ 3.3 ಕೋಟಿ ಪ್ಲೇಟ್ ಇಡ್ಲಿ ಆರ್ಡರ್ 

ವಿಶ್ವ ಇಡ್ಲಿ ದಿನಾಚರಣೆಯ ಅಂಗವಾಗಿ ಇಡ್ಲಿ ಆರ್ಡರ್ ಗಳ ಬಗ್ಗೆ ಸ್ವಿಗ್ಗಿ ಆಸಕ್ತಿದಾಯಕ ಅಂಶವೊಂದನ್ನು ಬಹಿರಂಗಪಡಿಸಿದೆ.
ಇಡ್ಲಿ
ಇಡ್ಲಿ

ನವದೆಹಲಿ: ವಿಶ್ವ ಇಡ್ಲಿ ದಿನಾಚರಣೆಯ ಅಂಗವಾಗಿ ಇಡ್ಲಿ ಆರ್ಡರ್ ಗಳ ಬಗ್ಗೆ ಸ್ವಿಗ್ಗಿ ಆಸಕ್ತಿದಾಯಕ ಅಂಶವೊಂದನ್ನು ಬಹಿರಂಗಪಡಿಸಿದೆ. ಕಳೆದ 12 ತಿಂಗಳಲ್ಲಿ 3.3 ಕೋಟಿ ಪ್ಲೇಟ್ ಗಳಷ್ಟು ಇಡ್ಲಿಯನ್ನು ತನ್ನ ವೇದಿಕೆ ಮೂಲಕ ಜನರಿಗೆ ತಲುಪಿಸಲಾಗಿದೆ ಎಂದು ಸ್ವಿಗ್ಗಿ ಹೇಳಿದೆ. 

ಹೈದರಾಬಾದ್ ನ ವ್ಯಕ್ತಿಯೋರ್ವ 12 ತಿಂಗಳ ಅವಧಿಯಲ್ಲಿ ಇಡ್ಲಿಗಳಿಗಾಗಿ 6 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾನೆಂಬುದು ಮತ್ತೊಂದು ಅಚ್ಚರಿಯ ಅಂಶವಾಗಿದೆ. 

ಸ್ವಿಗ್ಗಿ ನೀಡಿರುವ ಅಂಕಿ-ಅಂಶಗಳು ಮಾ.30, 2022 ರಿಂದ ಮಾ.25, 2023 ರ ಅವಧಿಯದ್ದಾಗಿದ್ದು ಇಡ್ಲಿಗಳ ಬಗ್ಗೆ ಅಚ್ಚರಿಯ ಹಾಗೂ ಆಸಕ್ತಿದಾಯಕ ಅಂಶಗಳನ್ನು ಹೊಂದಿದೆ. 

ಬೆಂಗಳೂರು, ಹೈದರಾಬಾದ್, ಚೆನ್ನೈ ನಗರಗಳು ಅತಿ ಹೆಚ್ಚು ಇಡ್ಲಿಗಳು ಆರ್ಡರ್ ಮಾಡಿರುವ ನಗರಗಳಾಗಿವೆ ಎಂದು ಸಂಸ್ಥೆ ಹೇಳಿದೆ. ಈ ನಗರಗಳ ನಂತರದ ಸ್ಥಾನಗಳಲ್ಲಿ ಮುಂಬೈ, ಕೊಯಂಬತ್ತೂರು, ಪುಣೆ, ವಿಶಾಖಪಟ್ಟಣ, ದೆಹಲಿ, ಕೋಲ್ಕತ್ತಾ ಹಾಗೂ ಕೊಚ್ಚಿ ನಗರಗಳಿವೆ.

ಇನ್ನು ಇಡ್ಲಿ ಆರ್ಡರ್ ಮಾಡಿರುವ ಅತ್ಯಂತ ಪ್ರಾಶಸ್ತ್ಯ ಸಮಯವೆಂದರೆ ಅದು ಬೆಳಿಗ್ಗೆ 8 ರಿಂದ 10 ವರೆಗೆ ಎಂದು ಸ್ವಿಗ್ಗಿ ಹೇಳಿದ್ದು, ಚೆನ್ನೈ, ಹೈದರಾಬಾದ್, ಬೆಂಗಳೂರು, ಕೊಯಂಬತ್ತೂರು, ಮುಂಬೈ ಗಳಲ್ಲಿ ಮಧ್ಯಾಹ್ನದ ವೇಳೆಯಲ್ಲೂ ಇಡ್ಲಿ ಆರ್ಡರ್ ಮಾಡಿರುವ ಅನೇಕ ಉದಾಹರಣೆಗಳಿವೆ.

ಎಲ್ಲಾ ನಗರಗಳಲ್ಲಿ ಸಾದಾ ಇಡ್ಲಿ ಅತ್ಯಂತ ಜನಪ್ರಿಯವಾಗಿದ್ದು. 2 ಪೀಸ್ ಇರುವ ಒಂದು ಪ್ಲೇಟ್ ಇಡ್ಲಿ ಹೆಚ್ಚು ಆರ್ಡರ್ ಮಾಡಲಾಗಿದೆ ಎಂದು ಸ್ವಿಗ್ಗಿ ಹೇಳಿದೆ. ಉಳಿದೆಲ್ಲಾ ನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ರವಾ ಇಡ್ಲಿ ಹೆಚ್ಚು ಜನಪ್ರಿಯವಾಗಿದ್ದು, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ ನಗರಗಳಲ್ಲಿ ತುಪ್ಪ/ನೇಯಿ ಕರಮ್ ಪೋಡಿ ಇಡ್ಲಿ ಜನಪ್ರಿಯವಾಗಿದೆ.

ಇಡ್ಲಿಗಳಿಗಾಗಿ ಆರ್ಡರ್ ಗಳಿಗೆ ನೆಚ್ಚಿನ ರೆಸ್ಟೋರೆಂಟ್ ಗಳ ಟಾಪ್ 5 ರ ಪಟ್ಟಿಯಲ್ಲಿ ಬೆಂಗಳೂರು,  ಚೆನ್ನೈಗಳಲ್ಲಿ ಅಡ್ಯಾರ್ ಆನಂದ್ ಭವನ್, ಗಳಾಗಿದ್ದರೆ, ಹೈದರಾಬಾದ್ ನಲ್ಲಿ ವರಲಕ್ಷ್ಮಿ ಟಿಫನ್ಸ್, ಉಡುಪೀಸ್ ಉಪಹಾರ್ ಹಾಗೂ ಚೆನ್ನೈ ನಲ್ಲಿ ಸಂಗೀತಾ ವೆಜ್ ರೆಸ್ಟೋರೆಂಟ್ ಗಳಿವೆ ಎಂದು ಸ್ವಿಗ್ಗಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com