ಅಂತಾರಾಷ್ಟ್ರೀಯ ಕಾರ್ಡ್ ಪಾವತಿಗಳ ಮೇಲೆ ತೆರಿಗೆ ಇರುವುದಿಲ್ಲ: ಸರ್ಕಾರ

ಡೆಬಿಟ್ ಅಥವಾ ಕ್ರೆಡಿಟ್ ಮೂಲಕ ಮಾಡಲಾಗುವ 7 ಲಕ್ಷದ ವರೆಗಿನ ಅಂತಾರಾಷ್ಟ್ರೀಯ ಪಾವತಿಗಳಿಗೆ ಟಿಸಿಎಸ್ ವಿಧಿಸುವುದಿಲ್ಲ ಎಂದು ಸರ್ಕಾರ ಹೇಳಿದೆ. 
ಅಂತಾರಾಷ್ಟ್ರೀಯ ಕಾರ್ಡ್ ಪಾವತಿ (ಸಾಂಕೇತಿಕ ಚಿತ್ರ)
ಅಂತಾರಾಷ್ಟ್ರೀಯ ಕಾರ್ಡ್ ಪಾವತಿ (ಸಾಂಕೇತಿಕ ಚಿತ್ರ)

ನವದೆಹಲಿ: ಡೆಬಿಟ್ ಅಥವಾ ಕ್ರೆಡಿಟ್ ಮೂಲಕ ಮಾಡಲಾಗುವ 7 ಲಕ್ಷದ ವರೆಗಿನ ಅಂತಾರಾಷ್ಟ್ರೀಯ ಪಾವತಿಗಳಿಗೆ ಟಿಸಿಎಸ್ ವಿಧಿಸುವುದಿಲ್ಲ ಎಂದು ಸರ್ಕಾರ ಹೇಳಿದೆ. 

ಹಣಕಾಸು ಸಚಿವಾಲಯ ಕಳೆದ ವಾರ ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಖರ್ಚುಗಳನ್ನು ಆರ್‌ಬಿಐನ ಉದಾರೀಕೃತ ರವಾನೆ ಯೋಜನೆಯಡಿ (ಲಿಬ್ರಲೈಸ್ಡ್ ರೆಮಿಟೆನ್ಸ್ ಸ್ಕೀಮ್) ಅಡಿ ತರಲು ನಿರ್ಧಾರ ಕೈಗೊಂಡಿತ್ತು ಮತ್ತು ಅದರ ಪರಿಣಾಮವಾಗಿ ಶೇಕಡಾ 20 ಟಿಸಿಎಸ್ ತೆರಿಗೆ ವಿಧಿಸುವ ನಡೆಗೆ ತಜ್ಞರು ಮತ್ತು ಸಂಬಂಧಪಟ್ಟ ಕ್ಷೇತ್ರದವರಿಂದ ತೀವ್ರ ವಿರೋಧ ವ್ಯಕ್ತವಾಗತೊಡಗಿತ್ತು.

ವ್ಯಾಪಕ ವರ್ಗದ ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಹಣಕಾಸು ಸಚಿವಾಲಯ, ಉದಾರೀಕೃತ ರವಾನೆ ಯೋಜನೆ (ಲಿಬ್ರಲೈಸ್ಡ್ ರೆಮಿಟೆನ್ಸ್ ಸ್ಕೀಮ್)  ಹಾಗೂ ಮತ್ತು ಮೂಲದಲ್ಲಿ ಸಂಗ್ರಹಿಸಲಾದ ತೆರಿಗೆಯನ್ನು ವಿಧಿಸುವುದಕ್ಕೆ ಸಂಬಂಧಪಟ್ಟ ಕಾರ್ಯವಿಧಾನದ ಅಸ್ಪಷ್ಟತೆಯನ್ನು ತೆಗೆದುಹಾಕುವುದು ಈ ನಡೆಯ ಉದ್ದೇಶವಾಗಿದೆ ಎಂದು ಹೇಳಿದೆ. 

"ಯಾವುದೇ ಕಾರ್ಯವಿಧಾನದ ಅಸ್ಪಷ್ಟತೆಯನ್ನು ತಪ್ಪಿಸಲು, ಒಬ್ಬ ವ್ಯಕ್ತಿಯು ಪ್ರತಿ ಹಣಕಾಸು ವರ್ಷಕ್ಕೆ ಅಂತರರಾಷ್ಟ್ರೀಯ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಡೆಸುವ ರೂ 7 ಲಕ್ಷದವರೆಗಿನ ಪಾವತಿಗಳನ್ನು ಎಲ್‌ಆರ್‌ಎಸ್ ಮಿತಿಗಳಿಂದ ಹೊರಗಿಡಲಾಗುತ್ತದೆ ಮತ್ತು ಯಾವುದೇ ಟಿಸಿಎಸ್ ನ್ನು ವಿಧಿಸದಿರಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಸ್ತುತ, ವಿದೇಶದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಮತ್ತು ಶಿಕ್ಷಣಕ್ಕಾಗಿ 7 ಲಕ್ಷದವರೆಗಿನ ಪಾವತಿಗಳಿಗೆ ಟಿಸಿಎಸ್ ಅನ್ವಯವಾಗುವುದಿಲ್ಲ ಅಂತಹ ವೆಚ್ಚಗಳ ಮೇಲೆ ಶೇ.5 ರಷ್ಟು ಟಿಸಿಎಸ್ ನ್ನು ವಿಧಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com