ಗೇಮಿಂಗ್ ಪೋರ್ಟಲ್‌ಗಳ ಕಚೇರಿ ಮೇಲೆ ಇಡಿ ದಾಳಿ; 4 ಸಾವಿರ ಕೋಟಿ ರೂ. ವಿದೇಶಕ್ಕೆ ರವಾನೆ
ವಿದೇಶಿ ವಿನಿಮಯ ಕಾನೂನು ಉಲ್ಲಂಘಿಸಿದ ವಿದೇಶಿ-ನೋಂದಾಯಿತ ಆನ್‌ಲೈನ್ ಗೇಮಿಂಗ್ ವೆಬ್‌ಸೈಟ್‌ಗಳು ಮತ್ತು ಕಂಪನಿಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ ಸುಮಾರು 4,000 ಕೋಟಿ ರೂಪಾಯಿ ಅಕ್ರಮವಾಗಿ ವಿದೇಶಗಳಿಗೆ...
Published: 25th May 2023 12:43 AM | Last Updated: 25th May 2023 06:22 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ವಿದೇಶಿ ವಿನಿಮಯ ಕಾನೂನು ಉಲ್ಲಂಘಿಸಿದ ವಿದೇಶಿ-ನೋಂದಾಯಿತ ಆನ್‌ಲೈನ್ ಗೇಮಿಂಗ್ ವೆಬ್‌ಸೈಟ್‌ಗಳು ಮತ್ತು ಕಂಪನಿಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ ಸುಮಾರು 4,000 ಕೋಟಿ ರೂಪಾಯಿ ಅಕ್ರಮವಾಗಿ ವಿದೇಶಗಳಿಗೆ ರವಾನಿಸಿರುವುದನ್ನು ಪತ್ತೆಹಚ್ಚಲಾಗಿದೆ ಎಂದು ಜಾರಿ ನಿರ್ದೇಶನಾಲಯ ಬುಧವಾರ ತಿಳಿಸಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ನಡೆಸಿದ ಈ ಕಾರ್ಯಾಚರಣೆಯಲ್ಲಿ 55 ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡುವುದರ ಜೊತೆಗೆ 19.55 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.
ದೆಹಲಿ, ಗುಜರಾತ್, ಮಹಾರಾಷ್ಟ್ರ, ಮಧ್ಯ ಪ್ರದೇಶ ಮತ್ತು ಆಂಧ್ರ ಪ್ರದೇಶ ಸೇರಿದಂತೆ 25 ಸ್ಥಳಗಳಲ್ಲಿ ಮೇ 22 ಮತ್ತು ಮೇ 23 ರಂದು ದಾಳಿ ನಡೆಸಿ, ಶೋಧ ನಡೆಸಲಾಯಿತು ಎಂದು ಇಡಿ ಹೇಳಿದೆ.
ಇದನ್ನು ಓದಿ: ಬೆಂಗಳೂರು: ಬೈಜೂಸ್ ಸಿಇಒ ಕಚೇರಿ, ನಿವಾಸದ ಮೇಲೆ ಇಡಿ ದಾಳಿ
ಈ ಆನ್‌ಲೈನ್ ಗೇಮಿಂಗ್ ಕಂಪನಿಗಳು ಮತ್ತು ವೆಬ್‌ಸೈಟ್‌ಗಳು ಕ್ಯುರಾಕೊ, ಮಾಲ್ಟಾ ಮತ್ತು ಸೈಪ್ರಸ್‌ನಂತಹ ಸಣ್ಣ ದ್ವೀಪ ರಾಷ್ಟ್ರಗಳಲ್ಲಿ ನೋಂದಾಯಿಸಲ್ಪಟ್ಟಿದ್ದನ್ನು ಪತ್ತೆ ಹಚ್ಚಲು ದಾಳಿ ನಡೆಸಲಾಗಿದೆ ಎಂದು ಫೆಡರಲ್ ತನಿಖಾ ಸಂಸ್ಥೆ ಹೇಳಿದೆ.
ಆದಾಗ್ಯೂ, ಆನ್‌ಲೈನ್ ಗೇಮಿಂಗ್ ಚಟುವಟಿಕೆಯೊಂದಿಗೆ ಯಾವುದೇ ಲಿಂಕ್‌ಗಳನ್ನು ಹೊಂದಿರದ ಪ್ರಾಕ್ಸಿ ವ್ಯಕ್ತಿಗಳ ಹೆಸರಿನಲ್ಲಿ ತೆರೆಯಲಾದ ಭಾರತೀಯ ಬ್ಯಾಂಕ್ ಖಾತೆಗಳಿಗೆ ಇವೆಲ್ಲವೂ ಲಿಂಕ್ ಆಗಿವೆ. ಗೇಮಿಂಗ್ ವೆಬ್‌ಸೈಟ್‌ಗಳ ಮೂಲಕ ಸಾರ್ವಜನಿಕರಿಂದ ಸಂಗ್ರಹಿಸಿದ ಮೊತ್ತವನ್ನು ನಂತರ ಬಹು ಬ್ಯಾಂಕ್ ಖಾತೆಗಳ ಮೂಲಕ ರವಾನಿಸಲಾಗುತ್ತದೆ ಎಂದು ಇಡಿ ತಿಳಿಸಿದೆ.