ವಿದೇಶಿ ದೇಣಿಗೆ ಕಾನೂನು ಉಲ್ಲಂಘನೆ: 9 ಸಾವಿರ ಕೋಟಿ ರೂಪಾಯಿ ಪಾವತಿಗೆ ಬೈಜೂಸ್ ಗೆ ಇಡಿ ನೋಟೀಸ್

ಎಡ್ಟೆಕ್ ದೈತ್ಯ ಬೈಜೂಸ್ ಗೆ 9 ಸಾವಿರ ಕೋಟಿ ರೂಪಾಯಿ ಪಾವತಿಸುವಂತೆ ಜಾರಿ ನಿರ್ದೇಶನಾಲಯ ನೊಟೀಸ್ ಜಾರಿಗೊಳಿಸಿದೆ.
ಬೈಜೂಸ್
ಬೈಜೂಸ್

ನವದೆಹಲಿ: ಎಡ್ಟೆಕ್ ದೈತ್ಯ ಬೈಜೂಸ್ ಗೆ 9 ಸಾವಿರ ಕೋಟಿ ರೂಪಾಯಿ ಪಾವತಿಸುವಂತೆ ಜಾರಿ ನಿರ್ದೇಶನಾಲಯ ನೊಟೀಸ್ ಜಾರಿಗೊಳಿಸಿದೆ.
 
ಬೈಜೂಸ್ ವಿದೇಶಿ ದೇಣಿಗೆ ಕಾನೂನನ್ನು ಉಲ್ಲಂಘನೆ ಮಾಡಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. 

ಆದರೆ ಬೈಜೂಸ್ ಮಾತ್ರ ತನಗೆ ಜಾರಿ ನಿರ್ದೇಶನಾಲಯದಿಂದ ನೊಟೀಸ್ ಬಂದಿರುವುದನ್ನು ನಿರಾಕರಿಸಿದೆ.  ಜಾರಿ ನಿರ್ದೇಶನಾಲಯದ ಮೂಲಗಳ ಪ್ರಕಾರ, ಬೈಜು 2011 ಮತ್ತು 2023 ರ ನಡುವೆ ಸುಮಾರು ₹ 28,000 ಕೋಟಿ ವಿದೇಶಿ ನೇರ ಹೂಡಿಕೆಯನ್ನು (ಎಫ್‌ಡಿಐ) ಸ್ವೀಕರಿಸಿದೆ. ಎಡ್ಟೆಕ್ ಪ್ರಮುಖ ಸಂಸ್ಥೆ, ಇದೇ ಅವಧಿಯಲ್ಲಿ ಸಾಗರೋತ್ತರ ನೇರ ಬಂಡವಾಳದ ಹೆಸರಿನಲ್ಲಿ ಸುಮಾರು 9,754 ಕೋಟಿ ಹಣವನ್ನು ರವಾನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ವರ್ಷದ ಆರಂಭದಲ್ಲಿ ಬೈಜೂಸ್ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಇದಷ್ಟೇ ಅಲ್ಲದೇ ಕೆಲವು ಬ್ಯಾಂಕ್ ಗಳು, ಬೈಜೂಸ್ ಸಾಲ ಮರುಪಾವತಿ ಮಾಡಿಲ್ಲ. ಲೋನ್ ಒಪ್ಪಂದವನ್ನು ಉಲ್ಲಂಘನೆ ಮಾಡಿವೆ ಎಂದು ಅಮೇರಿಕದ ಕೋರ್ಟ್ ಮೆಟ್ಟಿಲೇರಿದ್ದರು. ಈ ಬಳಿಕ ಬೈಜೂಸ್ ಬ್ಯಾಂಕ್ ಗಳ ವಿರುದ್ಧ ಕಿರುಕುಳ ಆರೋಪ ಮಾಡಿ ಪ್ರಕರಣ ದಾಖಲಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com