ಯುಪಿಐ ವಹಿವಾಟು ಗಾತ್ರ 4.6 ಬಿಲಿಯನ್ ನಿಂದ 9.3 ಬಿಲಿಯನ್ ಗೆ ಏರಿಕೆ
ನವದೆಹಲಿ: ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ದೇಶದ ಪ್ರಬಲ ಪೇಮೆಂಟ್ ಮಾಧ್ಯಮವಾಗಿ ಮುಂದುವರೆದಿದ್ದು, 2022 ರ ಜನವರಿಯಲ್ಲಿ 4.6 ಬಿಲಿಯನ್ ಗಳಷ್ಟಿದ್ದ ವಹಿವಾಟು, ಈಗ 2023 ರ ಜೂನ್ ನಲ್ಲಿ 9.3 ಬಿಲಿಯನ್ ಗಳಿಗೆ ಏರಿಕೆಯಾಗಿದೆ.
ವಹಿವಾಟು ಮೌಲ್ಯವೂ ಹೆಚ್ಚಳವಾಗಿದ್ದು, 8.3 ಲಕ್ಷ ಕೋಟಿಯಿಂದ 14.7 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ ಎಂದು ಹೆಚ್ 1 2023 ರ ಸಾಲಿನ ವರ್ಲ್ಡ್ ಲೈನ್ ಡಿಜಿಟಲ್ ಪೇಮೆಂಟ್ ವರದಿ ಹೇಳಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 33.55 ಶತಕೋಟಿಗೆ ಹೋಲಿಸಿದರೆ ಈ ವರ್ಷದ ಮೊದಲಾರ್ಧದಲ್ಲಿ ಮೊಬೈಲ್ ವಹಿವಾಟುಗಳ ಸಂಖ್ಯೆ 52.15 ಶತಕೋಟಿ ಆಗಿರುವುದರಿಂದ ಮೊಬೈಲ್ ಫೋನ್‌ಗಳು ಡಿಜಿಟಲ್ ವಹಿವಾಟುಗಳನ್ನು ಮುಂದುವರೆಸುತ್ತಿವೆ ಎಂದು ಮಂಗಳವಾರ ಬಿಡುಗಡೆಯಾದ ವರದಿ ಬಿಡುಗಡೆ ಮಾಡಿದೆ.
ಆದರೆ 2022ರ ಹೆಚ್ 1 ರಲ್ಲಿ ಸರಾಸರಿ ವ್ಯಕ್ತಿಯೋರ್ವ ಒಂದು ಬಳಕೆಯಲ್ಲಿ ಮಾಡುವ ವಹಿವಾಟು (ಟಿಕೆಟ್ ಗಾತ್ರ) ಶೇ.10 ರಷ್ಟು ಅಂದರೆ 1,774 ರೂಪಾಯಿಗಳಿಂದ 1,604 ರೂಪಾಯಿಗಳಿಗೆ ಇಳಿಕೆಯಾಗಿದೆ. ಈ ಇಳಿಕೆಯು UPI ಅನ್ನು ಸಣ್ಣ ಅಥವಾ ಸೂಕ್ಷ್ಮ ವಹಿವಾಟುಗಳ ಬಳಕೆ ಆವರಿಸಿರುವುದು ಸೂಚಿಸುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ವಹಿವಾಟು ಹಾಗೂ ವ್ಯಕ್ತಿಯಿಂದ ವ್ಯಾಪಾರಿಗಳಿಗೆ ನಡೆಯುವ ಉತ್ತಮ ಬೆಳವಣಿಗೆ ಕಂಡಿದೆ ಎಂದು ವರದಿ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ