ನವದೆಹಲಿ: ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಬೈಜೂಸ್ ಸೇಲ್ಸ್ ಸೇರಿದಂತೆ ಹಲವು ವಿಭಾಗಗಳಿಂದ 500 ಉದ್ಯೋಗಿಗಳನ್ನು ನೌಕರಿಯಿಂದ ವಜಾಗೊಳಿಸಲು ನಿರ್ಧರಿಸಿದೆ. ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಉದ್ಯಮದ ಪುನರ್ರಚನೆಯ ಹಂತದಲ್ಲಿರುವುದಾಗಿ ಬೈಜೂಸ್ ತಿಳಿಸಿದೆ.
ಎಂಬಾಟಲ್ಡ್ ಎಡ್ಟೆಕ್ ಕಂಪನಿಯಲ್ಲಿ ವಜಾಗೊಳಿಸುವಿಕೆ 15-20 ದಿನಗಳ ಹಿಂದೆ ಪ್ರಾರಂಭವಾಗಿದೆ. ಇದು 500 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚಿನ ಸುತ್ತಿನ ಉದ್ಯೋಗ ಕಡಿತ ಸೇಲ್ಸ್, ಶಿಕ್ಷಕರು ಮತ್ತು ಕೆಲವು ಬೋಧನಾ ಕೇಂದ್ರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸಲಾಗಿದೆ.
ವಜಾಗೊಳಿಸುವಿಕೆಗೆ ಸಂಬಂಧಿಸಿದಂತೆ ತನ್ನ ಕೆಲವು ಹೂಡಿಕೆದಾರರೊಂದಿಗೆ ಕಾನೂನು ವಿವಾದದಲ್ಲಿ ಸಿಲುಕಿರುವ ಬೈಜುಸ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
Advertisement