ಬಿಲಿಯನೇರ್ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಯಾದ ಭಾರತೀಯರು ಯಾರು ಗೊತ್ತೇ?: ಇಲ್ಲಿದೆ ಮಾಹಿತಿ

ಸಂಪತ್ತಿನ ಕ್ರೋಡೀಕರಣದಲ್ಲಿ ಭಾರತ ಈ ವರ್ಷ ಏರಿಕೆ ದಾಖಲಿಸಿದೆ. 25 ಮಂದಿ ಹೊಸದಾಗಿ ಬಿಲಿಯನೇರ್ ಪಟ್ಟಿಗೆ ಸೇರಿದ್ದಾರೆ.
ರೇಣುಕಾ ಜಗ್ತಿಯಾನಿ
ರೇಣುಕಾ ಜಗ್ತಿಯಾನಿ online desk

ನವದೆಹಲಿ: ಸಂಪತ್ತಿನ ಕ್ರೋಡೀಕರಣದಲ್ಲಿ ಭಾರತ ಈ ವರ್ಷ ಏರಿಕೆ ದಾಖಲಿಸಿದೆ. 25 ಮಂದಿ ಹೊಸದಾಗಿ ಬಿಲಿಯನೇರ್ ಪಟ್ಟಿಗೆ ಸೇರಿದ್ದಾರೆ.

ಫೋರ್ಬ್ಸ್ ನ ಇತ್ತೀಚಿನ ವರದಿಯ ಪ್ರಕಾರ, ರೇಣುಕಾ ಜಗ್ತಿಯಾನಿ ಎಂಬುವವರು 4.8 ಬಿಲಿಯನ್ ಡಾಲರ್ ಸಂಪತ್ತು ಹೊಂದುವ ಮೂಲಕ ಬಿಲಿಯನೇರ್ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿರುವ ಭಾರತೀಯರಾಗಿದ್ದಾರೆ.

ಯಾರು ರೇಣುಕಾ ಜಗ್ತಿಯಾನಿ?

ರೇಣುಕಾ ಜಗ್ತಿಯಾನಿ ಲ್ಯಾಂಡ್ ಮಾರ್ಕ್ ಗ್ರೂಪ್ ನ ಸಿಇಒ ಆಗಿದ್ದಾರೆ. ಲ್ಯಾಂಡ್ ಮಾರ್ಕ್ ದುಬೈ ನಲ್ಲಿರುವ ಬಹುರಾಷ್ಟ್ರೀಯ ಗ್ರಾಹಕ ಸಮೂಹ ಸಂಸ್ಥೆಯಾಗಿದ್ದು, ಈ ಸಂಸ್ಥೆಯನ್ನು ಆಕೆಯ ಪತಿ ಮೈಕಿ ಜಗ್ತಿಯಾನಿ ಸ್ಥಾಪಿಸಿದ್ದರು. ಮೈಕಿ ಜಗ್ತಿಯಾನಿ ಮೇ.2023 ರಲ್ಲಿ ನಿಧನರಾದರು. ಲ್ಯಾಂಡ್ ಮಾರ್ಕ್ ಸಂಸ್ಥೆ 50,000 ಉದ್ಯೋಗಿಗಳನ್ನು ಹೊಂದಿದೆ.

ರೇಣುಕಾ ಜಗ್ತಿಯಾನಿ
ಫೋರ್ಬ್ಸ್ ಪಟ್ಟಿ: 20 ಏಷ್ಯನ್ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಮೂವರು ಭಾರತೀಯ ಉದ್ಯಮಿಗಳಿಗೆ ಸ್ಥಾನ

ಮುಂಬೈ ವಿವಿಯಿಂದ ಕಲಾ ವಿಭಾಗದಲ್ಲಿ ಪದವೀಧರರಾಗಿರುವ ರೇಣುಕಾ ಜಗ್ತಿಯಾನಿ ಮಧ್ಯಪ್ರಾಚ್ಯದಲ್ಲಿ ಜನವರಿ 2007 ರಲ್ಲಿ ಏಷ್ಯನ್ ಬಿಸಿನೆಸ್ ಅವಾರ್ಡ್ಸ್ ವರ್ಷದ ಅತ್ಯುತ್ತಮ ಏಷ್ಯನ್ ಬ್ಯುಸಿನೆಸ್ ವುಮನ್ ಪ್ರಶಸ್ತಿಯನ್ನು ಪಡೆದಿದ್ದರು.

ನಂತರ, ಜನವರಿ 2012 ರಲ್ಲಿ, ಅವರು ಗಲ್ಫ್ ಬಿಸಿನೆಸ್ ಇಂಡಸ್ಟ್ರಿ ಪ್ರಶಸ್ತಿಗಳಲ್ಲಿ ವರ್ಷದ ಉದ್ಯಮಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ರೇಣುಕಾ ಜಗ್ತಿಯಾನಿ ನಿವ್ವಳ ಆಸ್ತಿ 4.8 ಬಿಲಿಯನ್ ಡಾಲರ್ ಇದ್ದು, ಫೋರ್ಬ್ಸ್ ನ ಹೊಸ ಬಿಲಿಯನೇರ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಫೋರ್ಬ್ಸ್‌ನ ನ್ಯೂ ಬಿಲಿಯನೇರ್ಸ್ 2024 ವರದಿ ಜಾಗತಿಕವಾಗಿ ಸಂಪತ್ತಿನ ಏರಿಕೆಯನ್ನು ತೋರಿಸಿದೆ. ವಿಶ್ವಾದ್ಯಂತ 2,781 ಬಿಲಿಯನೇರ್‌ಗಳನ್ನು ಗುರುತಿಸಲಾಗಿದ್ದು ಒಟ್ಟಾರೆಯಾಗಿ $14.2 ಟ್ರಿಲಿಯನ್ ಮೌಲ್ಯವನ್ನು ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com