
ನವದೆಹಲಿ: ಬ್ರೆಂಟ್ ಕಚ್ಚಾ ತೈಲದ ಬೆಲೆ 6 ತಿಂಗಳಲ್ಲೇ ಅತ್ಯಧಿಕ ಹೆಚ್ಚಳವಾಗಿದ್ದು, ಪ್ರತಿ ಬ್ಯಾರೆಲ್ ಗೆ 91 ಡಾಲರ್ ಗೆ ತಲುಪಿದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾದ ಬೆನ್ನಲ್ಲೇ ತೈಲ ಬೆಲೆಗಳಲ್ಲಿನ ಈ ಹಠಾತ್ ಮತ್ತು ಗಮನಾರ್ಹ ಏರಿಕೆ ಜಾಗತಿಕ ಹಣಕಾಸು ಮಾರುಕಟ್ಟೆಗಳಾದ್ಯಂತ ಪರಿಣಾಮ ಉಂಟುಮಾಡಿದೆ. ಹಣದುಬ್ಬರ ಏರಿಕೆ ಟ್ರೆಂಡ್ ಸೆಂಟ್ರಲ್ ಬ್ಯಾಂಕ್ ಗಳಲ್ಲಿ ಹಾಗೂ ಹೂಡಿಕೆದಾರಲ್ಲಿ ಆತಂಕ ಮೂಡಿಸಿದೆ.
ಜಾಗತಿಕ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲ, ಅಕ್ಟೋಬರ್‌ನಿಂದ ಈ ಮಟ್ಟವನ್ನು ತಲುಪಿರಲಿಲ್ಲ. ಹಮಾಸ್ ಹಾಗೂ ಇಸ್ರೇಲ್ ನಡುವಿನ ಇತ್ತೀಚಿನ ಸಂಘರ್ಷ ತೈಲ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಹೆಚ್ಚುತ್ತಿರುವ ತೈಲ ಬೆಲೆಗಳ ಪರಿಣಾಮಗಳು ಭೌಗೋಳಿಕ ರಾಜಕೀಯ ಆತಂಕಗಳನ್ನು ಮೀರಿ ವಿಸ್ತರಿಸುತ್ತವೆ. ಜಾಗತಿಕ ಆರ್ಥಿಕತೆಯ ವಿವಿಧ ಕ್ಷೇತ್ರಗಳ ಮೇಲೆ ಇದರ ಕರಿ ನೆರಳು ಆವರಿಸಿದೆ.
COVID-19 ಸಾಂಕ್ರಾಮಿಕದ ಪ್ರಭಾವದಿಂದ ಆರ್ಥಿಕತೆಯು ಇನ್ನೂ ಚೇತರಿಸಿಕೊಳ್ಳುತ್ತಿರುವ ಅಮೇರಿಕಾದಲ್ಲಿ ಗ್ಯಾಸೋಲಿನ್ ಬೆಲೆಗಳಲ್ಲಿನ ಹಠಾತ್ ಏರಿಕೆಯು ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆ.
Advertisement