ಸಗಟು ಹಣದುಬ್ಬರ 3 ತಿಂಗಳಲ್ಲೇ ಅತ್ಯಧಿಕ!

ಸಗಟು ಹಣದುಬ್ಬರ 3 ತಿಂಗಳಲ್ಲೇ ಅತ್ಯಧಿಕವಾಗಿದ್ದು, ಮಾರ್ಚ್ ತಿಂಗಳಲ್ಲಿ ಶೇ.0.53 ರಷ್ಟಾಗಿದೆ. ಈ ಹಿಂದಿನ ತಿಂಗಳಿನಲ್ಲಿ ಈ ವಿಭಾಗದ ಹಣದುಬ್ಬರ ಶೇ.0.20 ರಷ್ಟಿತ್ತು.
ಸಗಟು ಹಣದುಬ್ಬರ
ಸಗಟು ಹಣದುಬ್ಬರonline desk

ನವದೆಹಲಿ: ಸಗಟು ಹಣದುಬ್ಬರ 3 ತಿಂಗಳಲ್ಲೇ ಅತ್ಯಧಿಕವಾಗಿದ್ದು, ಮಾರ್ಚ್ ತಿಂಗಳಲ್ಲಿ ಶೇ.0.53 ರಷ್ಟಾಗಿದೆ. ಈ ಹಿಂದಿನ ತಿಂಗಳಿನಲ್ಲಿ ಈ ವಿಭಾಗದ ಹಣದುಬ್ಬರ ಶೇ.0.20 ರಷ್ಟಿತ್ತು.

ತರಕಾರಿ, ಆಲೂಗಡ್ಡೆ, ಈರುಳ್ಳಿ ಹಾಗೂ ಕಚ್ಚಾತೈಲ ಬೆಲೆ ಏರಿಕೆಯಿಂದಾಗಿ ಸಗಟು ಹಣದುಬ್ಬರ 3 ತಿಂಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ.

ಸಗಟು ಬೆಲೆ ಸೂಚ್ಯಂಕ(ಡಬ್ಲ್ಯುಪಿಐ) ಆಧರಿತ ಹಣದುಬ್ಬರ ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ಋಣಾತ್ಮಕ ವಲಯದಲ್ಲಿತ್ತು. ನವೆಂಬರ್ ಬಳಿಕ 0.26 ಕ್ಕೆ ಏರಿಕೆಯಾಗಿತ್ತು. 2023 ರ ಮಾರ್ಚ್ ನಲ್ಲಿ ಈ ವಿಭಾಗದ ಹಣದುಬ್ಬರ ಶೇ.1.41 ರಷ್ಟಿತ್ತು. ಆಹಾರ ಹಣದುಬ್ಬರ ಮಾರ್ಚ್‌ನಲ್ಲಿ ಶೇಕಡಾ 6.88 ಕ್ಕೆ ಸ್ವಲ್ಪ ಏರಿಕೆಯಾಗಿದ್ದು, ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ ಶೇಕಡಾ 5.42 ರಷ್ಟಿತ್ತು ಎಂದು ಅಂಕಿ-ಅಂಶಗಳು ತೋರಿಸಿವೆ.

ಸಗಟು ಹಣದುಬ್ಬರ
ಚಿಲ್ಲರೆ ಹಣದುಬ್ಬರ 5 ತಿಂಗಳಲ್ಲೇ ದಾಖಲೆಯ ಕುಸಿತ!

ತರಕಾರಿಗಳ ಹಣದುಬ್ಬರ ಶೇಕಡಾ 19.52 ರಷ್ಟಿತ್ತು, ಇದು ಒಂದು ವರ್ಷದ ಹಿಂದೆ ಇದೇ ತಿಂಗಳಲ್ಲಿ ಶೇಕಡಾ (- 2.39) ರಷ್ಟಿತ್ತು. ಆಲೂಗಡ್ಡೆಯ ಡಬ್ಲ್ಯುಪಿಐ ಶೇಕಡಾ 25.59 ರ ಹಣದುಬ್ಬರವಿಳಿತದ ವಿರುದ್ಧ ಶೇಕಡಾ 52.96 ರಷ್ಟು ಜಿಗಿತವನ್ನು ಕಂಡಿದೆ, ಆದರೆ ಮಾರ್ಚ್ 2023 ರಲ್ಲಿ (-) 36.83 ಶೇಕಡಾಕ್ಕೆ ಹೋಲಿಸಿದರೆ ಈರುಳ್ಳಿಗೆ ಶೇಕಡಾ 56.99 ರಷ್ಟು ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com