ನವದೆಹಲಿ/ಮುಂಬೈ: ವಿಸ್ತಾರ ತನ್ನ ಬ್ರಾಂಡ್ ಹೆಸರಿನಡಿಯಲ್ಲಿ ನವೆಂಬರ್ 11 ರಂದು ಕೊನೆಯ ವಿಮಾನವನ್ನು ನಿರ್ವಹಿಸಲಿದೆ. ನವೆಂಬರ್ 12 ರಿಂದ ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳಲಿದೆ.
ಏರ್ ಇಂಡಿಯಾ-ವಿಸ್ತಾರ ವಿಲೀನದ ಭಾಗವಾಗಿ ಸಿಂಗಾಪುರ್ ಏರ್‌ಲೈನ್ಸ್ ವಿದೇಶಿ ನೇರ ಹೂಡಿಕೆಗೆ ಸರ್ಕಾರ ತನ್ನ ಒಪ್ಪಿಗೆ ನೀಡಿದೆ. ವಿಸ್ತಾರಾ ಟಾಟಾ ಗ್ರೂಪ್ ಮತ್ತು ಸಿಂಗಾಪುರ್ ಏರ್ಲೈನ್ಸ್ ನಡುವಿನ ಜಂಟಿ ಉದ್ಯಮವಾಗಿದೆ.
ಏರ್ ಇಂಡಿಯಾ ಟಾಟಾ ಗ್ರೂಪ್ ಒಡೆತನದಲ್ಲಿದೆ. ಸೆಪ್ಟೆಂಬರ್ 3ರಿಂದ ಗ್ರಾಹಕರು, ಹಂತಹಂತವಾಗಿ, ನವೆಂಬರ್ 12 ಮತ್ತು ನಂತರ ಪ್ರಯಾಣಕ್ಕಾಗಿ ವಿಸ್ತಾರದೊಂದಿಗೆ ಬುಕ್ಕಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ವಿಸ್ತಾರಾ ತಿಳಿಸಿದೆ.
ನಂತರ ವಿಸ್ತಾರ ವಿಮಾನವನ್ನು ಏರ್ ಇಂಡಿಯಾ ನಿರ್ವಹಿಸುತ್ತದೆ. ಈ ವಿಮಾನಗಳು ನಿರ್ವಹಿಸುವ ಮಾರ್ಗಗಳ ಬುಕಿಂಗ್ ನ್ನು ಏರ್ ಇಂಡಿಯಾದ ವೆಬ್‌ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ.
ವಿಸ್ತಾರ 11 ನವೆಂಬರ್ 2024 ರವರೆಗೆ ಬುಕ್ಕಿಂಗ್‌ಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತದೆ ಮತ್ತು ಎಂದಿನಂತೆ ವಿಮಾನಗಳನ್ನು ನಿರ್ವಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಏರ್ ಇಂಡಿಯಾದೊಂದಿಗೆ ವಿಸ್ತಾರ ವಿಲೀನವನ್ನು ನವೆಂಬರ್ 2022 ರಲ್ಲಿ ಘೋಷಿಸಲಾಯಿತು ಮತ್ತು ಒಪ್ಪಂದದ ನಂತರ, ಸಿಂಗಾಪುರ್ ಏರ್‌ಲೈನ್ಸ್ ಏರ್ ಇಂಡಿಯಾದಲ್ಲಿ ಶೇಕಡಾ 25.1 ಪಾಲನ್ನು ಹೊಂದಿರುತ್ತದೆ.
Advertisement