ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹದಲ್ಲಿ ಶೇಕಡಾ 8.5 ರಷ್ಟು ಏರಿಕೆಯಾಗಿದ್ದು, ನವೆಂಬರ್ ತಿಂಗಳಲ್ಲಿ 1.82 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಭಾನುವಾರ ತಿಳಿಸಿದೆ.
ತೆರಿಗೆ ಸಂಗ್ರಹ ಹೆಚ್ಚಳ ಪ್ರವೃತ್ತಿ ಮುಂದುವರೆದಿದ್ದು, ಕಳೆದ ವರ್ಷದ ನವೆಂಬರ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ನವೆಂಬರ್ ನಲ್ಲಿ ಶೇ. 8.5 ರಷ್ಟು ಹೆಚ್ಚಳವಾಗಿದೆ.
ನವೆಂಬರ್ ತಿಂಗಳಲ್ಲಿ ಕೇಂದ್ರದ ಜಿಎಸ್‌ಟಿ 34,141 ಕೋಟಿ ರೂ. ಸಗ್ರಹವಾಗಿದ್ದು, ರಾಜ್ಯದ ಜಿಎಸ್‌ಟಿ 43,047 ಕೋಟಿ ರೂ., ಇಂಟಿಗ್ರೇಟೆಡ್ ಐಜಿಎಸ್‌ಟಿ ರೂ.91,828 ಕೋಟಿ ಮತ್ತು ಸೆಸ್ 13,253 ಕೋಟಿ ರೂ.ಸಂಗ್ರಹವಾಗಿದೆ ಎಂದು ಇಂದು ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳು ತಿಳಿಸಿವೆ.
ಒಟ್ಟು ಒಟ್ಟು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಆದಾಯವು ನವೆಂಬರ್‌ನಲ್ಲಿ ಶೇ 8.5 ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ 1.68 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಆದರೆ ಈ ನವೆಂಬರ್ ನಲ್ಲಿ 1.82 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ.
ಈ ಹಿಂದೆ ಕಲೆದ ಏಪ್ರಿಲ್‌ನಲ್ಲಿ ದಾಖಲೆಯ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಅದು ಬಿಟ್ಟರೆ ಕಳೆದ ಅಕ್ಟೋಬರ್ನಲ್ಲಿ ಆಗಿರುವ 1.87 ಲಕ್ಷ ಕೋಟಿ ರೂ. ಸಂಗ್ರಹ ಎರಡನೇ ಅತಿಹೆಚ್ಚಿನ ಸಂಗ್ರಹವಾಗಿದೆ.
Advertisement