BSNL: ಎರಡನೇ ಹಂತದ VRS ಗೆ ನೌಕರರಿಂದ ತೀವ್ರ ವಿರೋಧ

ಬಿಎಸ್ಎನ್ ಎಲ್ ಆಡಳಿತ ಮತ್ತು ಸರ್ಕಾರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ಬದಲು, ಆರ್ಥಿಕ ತೊಂದರೆಗಳಿಗಾಗಿ ಕಂಪನಿಯ ಉದ್ಯೋಗಿಗಳನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಸಂಘ ಕಿಡಿ ಕಾರಿದೆ.
BSNL
ಬಿಎಸ್ಎನ್ಎಲ್ online desk
Updated on

ನವದೆಹಲಿ: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(ಬಿಎಸ್‌ಎನ್‌ಎಲ್) ಆಡಳಿತ ಪರಿಚಯಿಸಿದ ಸ್ವಯಂ ನಿವೃತ್ತಿ ಯೋಜನೆ(ವಿಆರ್‌ಎಸ್) ಉದ್ದೇಶಿತ ಎರಡನೇ ಹಂತಕ್ಕೆ ಬಿಎಸ್‌ಎನ್‌ಎಲ್ ನೌಕರರ ಸಂಘ(ಬಿಎಸ್‌ಎನ್‌ಎಲ್‌ಇಯು) ತೀವ್ರ ವಿರೋಧ ವ್ಯಕ್ತಪಡಿಸಿದೆ.

BSNL ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್(CMD) ರಾಬರ್ಟ್ J. ರವಿ ಅವರಿಗೆ ಬರೆದ ಪತ್ರದಲ್ಲಿ, ಕಂಪನಿಯ ಪ್ರಸ್ತುತ ತೊಂದರೆಗಳಿಗೆ ದೋಷಪೂರಿತ ಸರ್ಕಾರಿ ನೀತಿಗಳು ಮತ್ತು ನಿರ್ವಾಹಕರ ಅಸಮರ್ಥತೆ ಕಾರಣ ಎಂದು ನೌಕರರ ಸಂಘ ಟೀಕಿಸಿದೆ.

ಬಿಎಸ್ಎನ್ ಎಲ್ ಆಡಳಿತ ಮತ್ತು ಸರ್ಕಾರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ಬದಲು, ಆರ್ಥಿಕ ತೊಂದರೆಗಳಿಗಾಗಿ ಕಂಪನಿಯ ಉದ್ಯೋಗಿಗಳನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಸಂಘ ಕಿಡಿ ಕಾರಿದೆ.

BSNL
ಖಾಸಗಿ ಟೆಲಿಕಾಂ ಕಂಪನಿಗಳ ದರ ಏರಿಕೆ: BSNL ಗೆ 5.5 ಮಿಲಿಯನ್ ಗ್ರಾಹಕರು ಪೋರ್ಟ್!

ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್(MTNL)ನ ಉದಾಹರಣೆ ನೀಡಿದ ಸಂಘ, ಇದೇ ರೀತಿಯ VRS ಯೋಜನೆಯನ್ನು ಮೂರು ಬಾರಿ ಜಾರಿಗೊಳಿಸಲಾಗಿದೆ. ಆದರೂ ಕಂಪನಿಯ ಆರ್ಥಿಕ ಸಂಕಷ್ಟದಿಂದ ಹೊರಬರಲು ವಿಫಲವಾಗಿದೆ ಮತ್ತು MTNL ಈಗ ಮುಚ್ಚುವ ಹಂತದಲ್ಲಿದೆ ಎಂದು ಹೇಳಿದೆ.

ಎರಡನೇ ಹಂತದ VRS ಅನ್ನು ಜಾರಿಗೊಳಿಸುವ ನಿರ್ಧಾರ ಮರುಪರಿಶೀಲಿಸಬೇಕು ಮತ್ತು ಹಿಂಪಡೆಯಲು ನಾವು ಮ್ಯಾನೇಜ್‌ಮೆಂಟ್ ಅನ್ನು ಬಲವಾಗಿ ಒತ್ತಾಯಿಸುತ್ತೇವೆ. ಬದಲಿಗೆ, ದೋಷಪೂರಿತ ನೀತಿಗಳು ಮತ್ತು ನಿರ್ವಹಣಾ ಅಸಮರ್ಥತೆಗಳ ಸಂಪೂರ್ಣ ಆತ್ಮಾವಲೋಕನಕ್ಕೆ ನಾವು ಸೂಚಿಸುತ್ತೇವೆ. ಏಕೆಂದರೆ ಇವು BSNLನ ಪುನರುಜ್ಜೀವನ ಮತ್ತು ಬೆಳವಣಿಗೆಗೆ ನಿಜವಾದ ಅಡೆತಡೆಗಳಾಗಿವೆ ಎಂದು ಸಂಘ ಹೇಳಿದೆ.

2020 ರಲ್ಲಿ ಸರ್ಕಾರ BSNL ಉದ್ಯೋಗಿಗಳಿಗೆ VRS ಅನ್ನು ಜಾರಿಗೊಳಿಸಿದ ನಂತರ ಸುಮಾರು 80,000 ಉದ್ಯೋಗಿಗಳು ಸ್ವಯಂ ನಿವೃತ್ತಿ ಪಡೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com