3ನೇ ತ್ರೈಮಾಸಿಕದಲ್ಲಿ ಎಸ್ ಬಿಐ ನಿವ್ವಳ ಲಾಭ ಶೇ.35 ರಷ್ಟು ಕುಸಿತ

ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ ಬಿಐ ಫೆ.03 ರಂದು ತನ್ನ 3 ನೇ ತ್ರೈಮಾಸಿಕ ವರದಿ ಪ್ರಕಟಿಸಿದ್ದು ನಿವ್ವಳ ಲಾಭದಲ್ಲಿ ಶೇ.35 ರಷ್ಟು ಕುಸಿತ ದಾಖಲಿಸಿದೆ.
ಎಸ್ ಬಿಐ
ಎಸ್ ಬಿಐ

ಮುಂಬೈ: ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ ಬಿಐ ಫೆ.03 ರಂದು ತನ್ನ 3 ನೇ ತ್ರೈಮಾಸಿಕ ವರದಿ ಪ್ರಕಟಿಸಿದ್ದು ನಿವ್ವಳ ಲಾಭದಲ್ಲಿ ಶೇ.35 ರಷ್ಟು ಕುಸಿತ ದಾಖಲಿಸಿದೆ.

ಡಿಸೆಂಬರ್ ತ್ರೈಮಾಸಿಕದಲ್ಲಿ ಎಸ್ ಬಿಐ ನ ಲಾಭ 9,164 ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ. 

ಕಳೆದ ವರ್ಷದ ಇದೇ ಅವಧಿಯಲ್ಲಿ ಎಸ್ ಬಿಐ 14,205 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಒಟ್ಟು ಆದಾಯ 1,18,193 ಕೋಟಿ ರೂ.ಗೆ ಏರಿಕೆಯಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ 98,084 ಕೋಟಿ ರೂ.ಗೆ ಏರಿಕೆಯಾಗಿತ್ತು ಎಂದು ಬ್ಯಾಂಕ್ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.

ತ್ರೈಮಾಸಿಕದಲ್ಲಿ ಬ್ಯಾಂಕ್ 1,06,734 ಕೋಟಿ ರೂ.ಗಳ ಬಡ್ಡಿ ಆದಾಯ ಗಳಿಸಿದ್ದು, ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 86,616 ಕೋಟಿ ರೂ.ಪಾಯಿಗಳ ಆದಾಯ ಗಳಿಸಿತ್ತು.  ಕಳೆದ ವರ್ಷದ ಮೂರನೇ ತ್ರೈಮಾಸಿಕದ ಅಂತ್ಯದ ವೇಳೆಗೆ ಶೇ.3.14 ರಿಂದ ಡಿಸೆಂಬರ್ ಅಂತ್ಯದ  ವೇಳೆಗೆ ಬ್ಯಾಂಕಿನ ಒಟ್ಟು ಮುಂಗಡಗಳ ಒಟ್ಟು ಅನುತ್ಪಾದಕ ಆಸ್ತಿಗಳು (NPA) ಶೇಕಡಾ 2.42 ಕ್ಕೆ ಇಳಿದಿದೆ.

ಅದೇ ರೀತಿ, ನಿವ್ವಳ ಅನುತ್ಪಾದಕ ಆಸ್ತಿಗಳು (ಎನ್‌ಪಿಎ) ಸಹ ಒಂದು ವರ್ಷದ ಹಿಂದೆ ಇದೇ ಅವಧಿಯ ಅಂತ್ಯಕ್ಕೆ ಇದ್ದ  ಶೇ.0.77 ರಷ್ಟಿಂದ   ಶೇ. 0.64 ಕ್ಕೆ ಕಡಿಮೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com