2023-24ರಲ್ಲಿ ಭಾರತದ ಆರ್ಥಿಕತೆ ಬೆಳವಣಿಗೆ ಶೇ.7.3: ಕೇಂದ್ರ ಸರ್ಕಾರ ಅಂದಾಜು

2023-24ರಲ್ಲಿ ಭಾರತದ ಆರ್ಥಿಕತೆಯು ಶೇ. 7.3 ರಷ್ಟು ಪ್ರಗತಿಯಾಗಲಿದೆ ಎಂದು ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (ಎನ್ ಎಸ್ ಒ) ಶುಕ್ರವಾರ ಊಹಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕತೆ ಶೇ. 7.2 ರಷ್ಟಿತ್ತು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: 2023-24ರಲ್ಲಿ ಭಾರತದ ಆರ್ಥಿಕತೆಯು ಶೇ. 7.3 ರಷ್ಟು ಪ್ರಗತಿಯಾಗಲಿದೆ ಎಂದು ರಾಷ್ಟ್ರೀಯ ಅಂಕಿಸಂಖ್ಯೆ ಕಚೇರಿ (ಎನ್ ಎಸ್ ಒ) ಶುಕ್ರವಾರ ಊಹಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕತೆ ಶೇ. 7.2 ರಷ್ಟಿತ್ತು.

2023-24 ರ ರಾಷ್ಟ್ರೀಯ ಆದಾಯದ ಮೊದಲ ಅಂದಾಜು ಬಿಡುಗಡೆ ಮಾಡಿರುವ ಎನ್ ಎಸ್ ಒ, 2023-24ರಲ್ಲಿ ನೈಜ ಜಿಡಿಪಿ ಅಥವಾ ಜಿಡಿಪಿ 171.79 ಲಕ್ಷ ಕೋಟಿ ರೂ. ಮಟ್ಟವನ್ನು ತಲುಪಲಿದೆ ಎಂದು ಅಂದಾಜಿಸಿದೆ. 2022-23ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಅಂದಾಜು ರೂ. 160.06 ಲಕ್ಷ ಕೋಟಿಯಷ್ಟಾಗಿತ್ತು.

ಸಾಂದರ್ಭಿಕ ಚಿತ್ರ
ಮುಕೇಶ್‌ ಅಂಬಾನಿ ಹಿಂದಿಕ್ಕಿದ ಗೌತಮ್‌ ಅದಾನಿ: ಭಾರತದ, ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ!

2023-24ರಲ್ಲಿ ನೈಜ ಜಿಡಿಪಿ ಬೆಳವಣಿಗೆಯು ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ. 7.3 ರಷ್ಟು ಪ್ರಗತಿಯಾಗಿದೆ ಎಂದು ಅಂದಾಜಿಸಲಾಗಿದೆ. 2023-24 ರ ಪ್ರಸ್ತುತ ಬೆಲೆಗಳಲ್ಲಿ ಜೆಡಿಪಿ 296.58 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಜೆಡಿಪಿ ರೂ.272.41 ಲಕ್ಷ ಕೋಟಿ ಎಂದು ಅಂದಾಜಿಲಾಗಿತ್ತು.

ಡಿಸೆಂಬರ್ 2023 ರಲ್ಲಿ, ಆರ್ ಬಿಐ ಭಾರತದ ಜಿಡಿಪಿ ಬೆಳವಣಿಗೆ ದರ ಶೇ. 6-5 ರಿಂದ ಶೇ.7ಕ್ಕೆ ಏರಿಕೆಯಾಗಲಿದೆ ಎಂದು ಊಹಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com