ಅತಿ ದುಬಾರಿ ಗೃಹ, ಐಷಾರಾಮಿ ಕಾರುಗಳ ಮಾರಾಟದಲ್ಲಿ ದಾಖಲೆಯ ಏರಿಕೆ

ಅತಿ ದುಬಾರಿ ವೆಚ್ಚದ ಅಪಾರ್ಟ್ ಮೆಂಟ್ ಗಳು ಹಾಗೂ ಕಾರುಗಳ ಮಾರಾಟ ದಾಖಲೆಯ ಏರಿಕೆ ಕಂಡಿದೆ. 
ಸಾಂಕೇತಿಕ ಚಿತ್ರ( ಸಂಗ್ರಹ ಚಿತ್ರ)
ಸಾಂಕೇತಿಕ ಚಿತ್ರ( ಸಂಗ್ರಹ ಚಿತ್ರ)
Updated on

ಬೆಂಗಳೂರು/ ನವದೆಹಲಿ: ಅತಿ ದುಬಾರಿ ವೆಚ್ಚದ ಅಪಾರ್ಟ್ ಮೆಂಟ್ ಗಳು ಹಾಗೂ ಕಾರುಗಳ ಮಾರಾಟ ದಾಖಲೆಯ ಏರಿಕೆ ಕಂಡಿದೆ. 

ಭಾರತದ ಅತಿ ದೊಡ್ಡ ರೀಟೇಲರ್ ಡಿಎಲ್ಎಫ್ ಗುರುಗ್ರಾಮ್ ನಲ್ಲಿ ಅಪಾರ್ಟ್ ಮೆಂಟ್ ನಿರ್ಮಾಣದ ಯೋಜನೆ- (ಡಿಎಲ್ಎಫ್ ಪರಿವಾಣ ಸೌತ್) ಪ್ರಾರಂಭಕ್ಕೂ 3 ದಿನಗಳ ಮುನ್ನವೇ 7,200 ಕೋಟಿ ರೂಪಾಯಿ ಮೊತ್ತಕ್ಕೆ 1,113 ಐಷಾರಾಮಿ ಫ್ಲ್ಯಾಟ್ ಗಳನ್ನು ಮಾರಾಟ ಮಾಡಿರುವುದಾಗಿ ಹೇಳಿದ್ದರೆ, ದೇಶದ ಅಗ್ರಗಣ್ಯ ಐಷಾರಾಮಿ ಕಾರು ಬ್ರ್ಯಾಂಡ್ ಮರ್ಸಿಡೀಸ್ ಬೆನ್ಜ್ ಭಾರತದ ಮಾರುಕಟ್ಟೆಯಲ್ಲಿ 2023 ಅತ್ಯುತ್ತಮ ವರ್ಷವಾಗಿದೆ ಎಂದು ಹೇಳಿದೆ. 

ಜರ್ಮನ್ ಕಾರು ತಯಾರಕ ಸಂಸ್ಥೆ 2023 ರಲ್ಲಿ 17,408  ವಾಹನಗಳನ್ನು ಮಾರಾಟ ಮಾಡಿದೆ. ಇದು ಕಳೆದ ವರ್ಷದ ಮಾರಾಟಕ್ಕಿಂತ ಶೇ.10 ರಷ್ಟು ಹೆಚ್ಚಾಗಿದೆ.

ಕಳೆದ ವಾರವಷ್ಟೇ ಆಡಿ ಇಂಡಿಯಾ 2023 ರಲ್ಲಿ ತನ್ನ ಮಾರಾಟ 90% ರಷ್ಟು ಅಂದರೆ 7,931 ಯುನಿಟ್‌ಗಳಿಗೆ ಬೆಳೆದಿದೆ ಎಂದು ಘೋಷಿಸಿತ್ತು. ಈ ಸ್ಥಾಪಿತ ವಿಭಾಗದಲ್ಲಿ BMW ಮತ್ತು ಇತರ ಐಷಾರಾಮಿ ಸಂಸ್ಥೆಗಳು ಮುಂಬರುವ ದಿನಗಳಲ್ಲಿ ದಾಖಲೆಯ ಮಾರಾಟವನ್ನು ವರದಿ ಮಾಡುವ ನಿರೀಕ್ಷೆಯೊಂದಿಗೆ, ಒಟ್ಟು ಐಷಾರಾಮಿ ಕಾರು ಮಾರಾಟವು 2023 ರಲ್ಲಿ 45,000 ಗಡಿ ತಲುಪಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. 

ಮರ್ಸಿಡೀಸ್ ಬೆನ್ಜ್ ಕಾರು, 2024 ರಲ್ಲಿ 3 ಇವಿ ಸೇರಿದಂತೆ 12 ಕ್ಕೂ ಹೆಚ್ಚಿನ ಹೊಸ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಕ್ಕೆ ಚಿಂತನೆ ನಡೆಸಿದೆ. 

ಮೂರು ದಿನಗಳಲ್ಲಿ ಮಾರಾಟವಾದ DLF ಅಪಾರ್ಟ್‌ಮೆಂಟ್‌ಗಳು ಒಂದು ಯೂನಿಟ್‌ಗೆ 6.25-7.5 ಕೋಟಿ ರೂ. ಪೆಂಟ್ ಹೌಸ್ ಗಳಿಗೆ ತಲಾ 11-14 ಕೋಟಿ ರೂ.  ಮೌಲ್ಯವನ್ನು ಹೊಂದಿದೆ. 

ಕಳೆದ ವಾರ, ಗೋದ್ರೇಜ್ ಪ್ರಾಪರ್ಟೀಸ್ ಗುರುಗ್ರಾಮ್‌ನಲ್ಲಿರುವ ತನ್ನ ಹೊಸ ಐಷಾರಾಮಿ ವಸತಿ ಯೋಜನೆಯಲ್ಲಿ 600 ಕ್ಕೂ ಹೆಚ್ಚು ಫ್ಲಾಟ್‌ಗಳನ್ನು 2,600 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವುದಾಗಿ ಘೋಷಿಸಿತ್ತು. ಮುಂಬೈ ಮೂಲದ ರಿಯಾಲ್ಟರ್ ಐಷಾರಾಮಿ ಘಟಕಗಳನ್ನು ಅಭಿವೃದ್ಧಿಪಡಿಸಲು ಬೆಂಗಳೂರಿನಲ್ಲಿ 4 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಮತ್ತು 1,000 ಕೋಟಿ ರೂಪಾಯಿ ಆದಾಯವನ್ನು ನಿರೀಕ್ಷಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com