ವಿದೇಶಗಳಲ್ಲಿ ಯುಪಿಐ ವಿಸ್ತರಿಸಲು ಗೂಗಲ್ ಪೇ- ಎನ್ ಪಿ ಸಿಐ ಪಾಲುದಾರಿಕೆ

ಯುಪಿಐ ನ ಜಾಗತಿಕ ವಿಸ್ತರಣೆಗಾಗಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ ಪಿಸಿಐ) ನ ಅಂಗಸಂಸ್ಥೆಯೊಂದಿಗೆ ಗೂಗಲ್ ಪೇ ಒಡಂಬಡಿಕೆ ಮಾಡಿಕೊಂಡಿದೆ. 
ಗೂಗಲ್ ಪೇ
ಗೂಗಲ್ ಪೇ

ನವದೆಹಲಿ: ಯುಪಿಐ ನ ಜಾಗತಿಕ ವಿಸ್ತರಣೆಗಾಗಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ ಪಿಸಿಐ) ನ ಅಂಗಸಂಸ್ಥೆಯೊಂದಿಗೆ ಗೂಗಲ್ ಪೇ ಒಡಂಬಡಿಕೆ ಮಾಡಿಕೊಂಡಿದೆ. 

ಎನ್ ಪಿ ಸಿಐ ಇಂಟರ್ ನ್ಯಾಷನಲ್ಸ್ ಪೇಮೆಂಟ್ಸ್ ಲಿಮಿಟೆಡ್ ನೊಂದಿಗೆ ಗೂಗಲ್ ಪೇ ಎಂಒಯುಗೆ ಸಹಿ ಹಾಕಿದೆ. 

ಅಮೇರಿಕಾದ ಟೆಕ್ ದೈತ್ಯ ಸಂಸ್ಥೆಯ ಭಾರತದ ಹೊರಭಾಗದಲ್ಲೂ ಪ್ರವಾಸಿಗರು, ಪ್ರಯಾಣಿಕರಿಗೆ ಯುಪಿಐ ಪಾವತಿಗಳನ್ನು ಸುಲಭವಾಗಿಸುವುದು ಈ ಒಪ್ಪಂದದ ಉದ್ದೇಶವಾಗಿದೆ.

ವಿದೇಶಗಳಲ್ಲಿ, ತಡೆರಹಿತ ಹಣಕಾಸು ವ್ಯವಹಾರಗಳಿಗೆ ಮಾದರಿಯನ್ನು ಒದಗಿಸಲು ಯುಪಿಐ ಮಾದರಿಯ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಸ್ಥಾಪಿಸುವುದಕ್ಕೂ ಈ ಒಪ್ಪಂದ ಸಹಕಾರಿಯಾಗಲಿದೆ.

ಈ ಒಪ್ಪಂದ UPI ಮೂಲಸೌಕರ್ಯವನ್ನು ಬಳಸಿಕೊಳ್ಳುವ ಮೂಲಕ ದೇಶಗಳ ನಡುವಿನ ಹಣ ರವಾನೆ ಪ್ರಕ್ರಿಯೆಯನ್ನು ಸರಾಗಗೊಳಿಸುವತ್ತ ಗಮನಹರಿಸುತ್ತದೆ, ಇದರಿಂದಾಗಿ ಗಡಿಯಾಚೆಗಿನ ಹಣಕಾಸು ವಿನಿಮಯ ಸರಳಗೊಳ್ಳಲಿದೆ.

ಈ ಸಹಯೋಗದ ವ್ಯಾಪ್ತಿಯ ಬಗ್ಗೆ ನಾವು ತುಂಬಾ ಉತ್ಸುಕರಾಗಿದ್ದೇವೆ ಎಂದು ಗೂಗಲ್ ಪೇ ಇಂಡಿಯಾದ ಪಾಲುದಾರಿಕೆಗಳ ನಿರ್ದೇಶಕಿ ದೀಕ್ಷಾ ಕೌಶಲ್ ಹೇಳಿದ್ದಾರೆ.

NPCI ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (NIPL) ನ ಸಿಇಒ ರಿತೇಶ್ ಶುಕ್ಲಾ, ಈ ಕಾರ್ಯತಂತ್ರದ ಪಾಲುದಾರಿಕೆ ಭಾರತೀಯ ಪ್ರಯಾಣಿಕರಿಗೆ ವಿದೇಶಿ ವಹಿವಾಟುಗಳನ್ನು ಸರಳಗೊಳಿಸುವುದಲ್ಲದೆ, ಇತರ ದೇಶಗಳಿಗೆ ಯಶಸ್ವಿ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ಜ್ಞಾನ ಮತ್ತು ಪರಿಣತಿಯನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದಾರೆ

"ಯುಪಿಐನ ಕ್ರಾಸ್-ಬಾರ್ಡರ್ ಇಂಟರ್‌ಆಪರೇಬಿಲಿಟಿ ವೈಶಿಷ್ಟ್ಯವನ್ನು ಮತ್ತಷ್ಟು ವಿಸ್ತರಿಸುವ ಮೂಲಕ ತಡೆರಹಿತ ಮತ್ತು ಹೆಚ್ಚು ಸಂಪರ್ಕಗೊಂಡಿರುವ ಅಂತರಾಷ್ಟ್ರೀಯ ವಹಿವಾಟು ಜಾಲವನ್ನು ಸಕ್ರಿಯಗೊಳಿಸುವ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಎಂದು ಶುಕ್ಲಾ ಹೇಳಿದರು.

UPI ನ ಜಾಗತಿಕ ವಿಸ್ತರಣೆ ಅಂತರಾಷ್ಟ್ರೀಯ ವಾಣಿಜ್ಯ ಕ್ಷೇತ್ರದಲ್ಲಿ ಪರಿವರ್ತನೆಯ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ, ಇದು ವಿಶ್ವದಾದ್ಯಂತ ವ್ಯಾಪಾರಿಗಳು ಮತ್ತು ಗ್ರಾಹಕರಿಬ್ಬರಿಗೂ ತಡೆರಹಿತ, ಸುರಕ್ಷಿತ ಮತ್ತು ವೆಚ್ಚ-ಪರಿಣಾಮಕಾರಿ ಪಾವತಿ ಮಾರ್ಗವನ್ನು ಸಕ್ರಿಯಗೊಳಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com