
ನವದೆಹಲಿ: 4ಜಿ ಮತ್ತು 5ಜಿ ಸೇವೆಗಳನ್ನು ನೀಡದಿದ್ದರೆ ಖಾಸಗಿ ಟೆಲಿಕಾಂ ಆಪರೇಟರ್‌ಗಳಾದ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಜೊತೆ ಸ್ಪರ್ಧಿಸಲು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೆ ಅಸಾಧ್ಯ ಎಂದು ಬಿಎಸ್‌ಎನ್‌ಎಲ್ ನೌಕರರ ಸಂಘ ತಿಳಿಸಿದೆ.
ಖಾಸಗಿ ಟೆಲಿಕಾಂ ಆಪರೇಟರ್‌ಗಳಾದ ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಲಾಭದಾಯಕ ಕಂಪನಿಗಳಾಗಿರುವುದರಿಂದ ಅವರು ಇತ್ತೀಚೆಗೆ ಸುಂಕವನ್ನು ಹೆಚ್ಚಿಸಿರುವುದು ಅನಪೇಕ್ಷಿತವಾಗಿದೆ ಎಂದು ಬಿಎಸ್‌ಎನ್‌ಎಲ್ ನೌಕರರ ಒಕ್ಕೂಟ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದಿದೆ.
ಈ ಮೊದಲು, BSNL ಪೈಪೋಟಿಯಿಂದಾಗಿ ಖಾಸಗಿ ಟೆಲಿಕಾಂ ಸೇವಾ ಪೂರೈಕೆದಾರರು ತಮ್ಮ ಸುಂಕವನ್ನು ಹೆಚ್ಚಿಸುವುದಕ್ಕೆ ಹಿಂಜರಿಯುತ್ತಿದ್ದವು. ಆದರೆ, ಈಗ ಸನ್ನಿವೇಶ ಬದಲಾಗಿದೆ. BSNL ತನ್ನ 4G ಮತ್ತು 5G ಸೇವೆಗಳನ್ನು ಇಲ್ಲಿಯವರೆಗೆ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಇದರ ಪರಿಣಾಮವಾಗಿ ಖಾಸಗಿ ಆಪರೇಟರ್‌ಗಳೊಂದಿಗೆ ಸ್ಪರ್ಧೆ ನೀಡದಿದ್ದರಿಂದ ಖಾಸಗಿ ಟೆಲಿಕಾಂಗಳು ಅನಿಯಂತ್ರಿತ ಸುಂಕ ಹೆಚ್ಚಳವನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇತ್ತೀಚೆಗೆ, ಎಲ್ಲಾ ಮೂರು ಖಾಸಗಿ ಆಪರೇಟರ್‌ಗಳು ಮೊಬೈಲ್ ಸೇವಾ ದರಗಳನ್ನು ಶೇಕಡಾ 10-27ರ ವ್ಯಾಪ್ತಿಯಲ್ಲಿ ಹೆಚ್ಚಿಸುವುದಾಗಿ ಘೋಷಿಸಿದರು. ಜಿಯೋ ಮತ್ತು ಏರ್‌ಟೆಲ್ ಘೋಷಿಸಿದ ಹೊಸ ಟ್ಯಾರಿಫ್ ಯೋಜನೆಗಳು ಜಾರಿಗೆ ಬಂದಿದ್ದು, ಜುಲೈ 4 ರಿಂದ Vi ಹೆಚ್ಚಳ ಜಾರಿಗೆ ಬರಲಿದೆ.
ಖಾಸಗಿ ಕಂಪನಿಗಳು ತಮ್ಮ ಸುಂಕವನ್ನು ಇಷ್ಟು ತೀವ್ರವಾಗಿ ಹೆಚ್ಚಿಸಲು ಯಾವುದೇ ಕಾರಣವಿಲ್ಲ. ಗಮನಿಸಬೇಕಾದ ಅಂಶವೆಂದರೆ, ರಿಲಯನ್ಸ್ ಜಿಯೋ 2023-24ರಲ್ಲಿ ರೂ. 20,607 ಕೋಟಿ ನಿವ್ವಳ ಲಾಭ ಗಳಿಸಿದೆ. ಏರ್‌ಟೆಲ್ ರೂ. 7,467 ಕೋಟಿ ನಿವ್ವಳ ಲಾಭ ಗಳಿಸಿದೆ. ಹೀಗಿದ್ದರೂ ಸುಂಕ ಹೆಚ್ಚಳ ಜನ ಸಾಮಾನ್ಯರಿಗೆ ಬರೆ ಎಳೆದಂತಾಗುತ್ತದೆ.
4G ಮತ್ತು 5G ಸೇವೆ ಇಲ್ಲದ ಕಾರಣ BSNL ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ. ಇದರ ಅನುಕೂಲವನ್ನು ಖಾಸಗಿ ಆಪರೇಟರ್‌ಗಳಾದ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಗಳಿಸುತ್ತಿವೆ ಎಂದು ಒಕ್ಕೂಟ ಹೇಳಿದೆ.
BSNL ತನ್ನ ಬಹು ನಿರೀಕ್ಷಿತ 4G ಸೇವೆಗಳನ್ನು ಆಗಸ್ಟ್‌ನಿಂದ ಭಾರತದಾದ್ಯಂತ ಪ್ರಾರಂಭಿಸಲು ತಯಾರಿ ನಡೆಸುತ್ತಿದೆ ಎಂದು ಮೂಲವು ಹಂಚಿಕೊಂಡಿದೆ.
Advertisement