ಆಯ್ದ ನಗರಗಳಲ್ಲಿ ಶುಲ್ಕ ಹೆಚ್ಚಿಸಿದ ಝೊಮ್ಯಾಟೊ!

ಶುಲ್ಕ ಏರಿಕೆಗೆ ಕಾರಣಗಳನ್ನು ಖಚಿತಪಡಿಸಿಕೊಳ್ಳಲು ಸಂಪರ್ಕಿಸಿದಾಗ, Zomato ಮತ್ತು Swiggy ಎರಡೂ ಸಂಸ್ಥೆಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದವು.
Zomato
ಝೊಮ್ಯಾಟೊonline desk
Updated on

ನವದೆಹಲಿ: ಆಹಾರ ಡೆಲಿವರಿ ಸಂಸ್ಥೆ ಝೊಮ್ಯಾಟೊ ಪ್ರಮುಖ ನಗರಗಳಲ್ಲಿ ಶುಲ್ಕ ಹೆಚ್ಚಳ ಮಾಡಿದೆ.

ದೆಹಲಿ, ಮುಂಬೈ, ಬೆಂಗಳೂರು ನಗರಗಳಲ್ಲಿ ಶುಲ್ಕವನ್ನು ಪ್ರತಿ ಆರ್ಡರ್ ಗೆ 5-6 ರೂಪಾಯಿಗಳನ್ನು ಝೊಮ್ಯಾಟೋ ಹೆಚ್ಚಳ ಮಾಡಿದೆ.

ಝೊಮ್ಯಾಟೋ ಗೆ ಪ್ರತಿಸ್ಪರ್ಧಿಯಾಗಿರುವ ಸ್ವಿಗ್ಗಿ ಸಹ ಹಲವು ನಗರಗಳಲ್ಲಿ ಶುಲ್ಕವನ್ನು ಹೆಚ್ಚಳ ಮಾಡಿತ್ತು. ಆದರೆ ದೆಹಲಿ, ಮುಂಬೈ, ಬೆಂಗಳೂರು ನಗರಗಳಲ್ಲಿ ಪ್ರತಿ ಆರ್ಡರ್ ಗೆ 5 ರೂಪಾಯಿಗಳ ಶುಲ್ಕಕ್ಕೆ ಮತ್ತೆ ಬದಲಾವಣೆ ಮಾಡಿದೆ.

ಶುಲ್ಕ ಏರಿಕೆಗೆ ಕಾರಣಗಳನ್ನು ಖಚಿತಪಡಿಸಿಕೊಳ್ಳಲು ಸಂಪರ್ಕಿಸಿದಾಗ, Zomato ಮತ್ತು Swiggy ಎರಡೂ ಸಂಸ್ಥೆಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದವು. ಎರಡು ಕಂಪನಿಗಳು ಕಳೆದ ವರ್ಷ ಪ್ಲಾಟ್‌ಫಾರ್ಮ್ ಶುಲ್ಕವನ್ನು ಪರಿಚಯಿಸಿದ್ದವು, ಆರಂಭದಲ್ಲಿ ಪ್ರತಿ ಆರ್ಡರ್‌ಗೆ 2 ರೂ ಇದ್ದ ಶುಲ್ಕವನ್ನು ಕ್ರಮೇಣ ಹೆಚ್ಚಿಸಲಾಗಿದೆ. ಪ್ಲಾಟ್‌ಫಾರ್ಮ್ ಶುಲ್ಕವನ್ನು ಆಹಾರ-ವಿತರಣಾ ಪ್ಲಾಟ್‌ಫಾರ್ಮ್‌ಗಳು ತಮ್ಮ ಲಾಭದಾಯಕತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ವಿಧಾನಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com