
ನವದೆಹಲಿ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕ ಇಂದು 5,000 ಪಾಯಿಂಟ್‌ಗಳಷ್ಟು ಕುಸಿತ ಕಂಡಿತು.
ಇಂದು ಬೆಳಗಿನ ವಹಿವಾಟು ಆರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭಾರತೀಯ ಜನತಾ ಪಾರ್ಟಿ ನೇತೃತ್ವದ ಮೈತ್ರಿಕೂಟವು 272 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ತೋರಿಸಿದರೂ ವಿಜಯದ ಪ್ರಮಾಣ. ಸ್ಪಷ್ಟವಾಗಿಲ್ಲ. ಎನ್ ಡಿಎ ಮುನ್ನಡೆ ಊಹಿಸಿದ್ದಕ್ಕಿಂತ ಕಡಿಮೆಯಾದ ಕಾರಣ ಷೇರುಪೇಟೆ ಸಂವೇದಿ ಸೂಚ್ಯಂಕ ಭಾರೀ ಕುಸಿತ ಕಂಡಿದೆ.
ಮುಂಚೂಣಿ ಸೂಚ್ಯಂಕಗಳು -- ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ 50 - ಸೋಮವಾರ ತಲಾ ಶೇಕಡಾ 3ಕ್ಕಿಂತ ಹೆಚ್ಚು ಏರಿಕೆಯಾದ ನಂತರ ಇಂದು ಮಂಗಳವಾರ ತಲಾ ಶೇಕಡಾ 5ರಷ್ಟು ಕಡಿಮೆಯಾಗಿದೆ.
ಸೆನ್ಸೆಕ್ಸ್ 4,000 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದು 72,337 ಕ್ಕೆ ತಲುಪಿದರೆ, ನಿಫ್ಟಿ 1,200 ಪಾಯಿಂಟ್‌ಗಳು ಕುಸಿದು 22,000 ಕ್ಕೆ ತಲುಪಿತು. ಸೆನ್ಸೆಕ್ಸ್ ಪ್ಯಾಕ್‌ನಲ್ಲಿ, ಪವರ್‌ಗ್ರಿಡ್, ಎನ್‌ಟಿಪಿಸಿ ಮತ್ತು ಎಸ್‌ಬಿಐ 12-14% ಕಡಿತದೊಂದಿಗೆ ವಹಿವಾಟು ನಡೆಸುತ್ತಿವೆ. ಅದಾನಿ ಗ್ರೂಪ್ ಷೇರುಗಳು ಶೇಕಡಾ 20ವರೆಗೆ ಕುಸಿಯಿತು ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಶೇಕಡಾ 5ಕ್ಕಿಂತ ಹೆಚ್ಚು ಕುಸಿದಿದೆ.
BSE PSU ಸೂಚ್ಯಂಕವು ಶೇಕಡಾ 5ಕ್ಕಿಂತ ಹೆಚ್ಚು ಕಡಿಮೆಯಾಗಿದೆ. ಬ್ಯಾಂಕ್ ಆಫ್ ಬರೋಡಾ, ಗೇಲ್ ಮತ್ತು ಆರ್‌ಇಸಿ ಷೇರುಗಳು ತಲಾ ಶೇ.7ರಷ್ಟು ಕುಸಿದಿವೆ. ನಿಫ್ಟಿ ಪಿಎಸ್‌ಯು ಬ್ಯಾಂಕ್ ಶೇ.5.5ರಷ್ಟು ಕುಸಿದು 7,568ಕ್ಕೆ ತಲುಪಿದೆ. ಬ್ಯಾಂಕ್ ಆಫ್ ಬರೋಡಾ, ಇಂಡಿಯನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಪಿಎನ್‌ಬಿ ಷೇರುಗಳು ಶೇ.5-7ರಷ್ಟು ಇಳಿಕೆ ಕಂಡಿವೆ.
ನಿಫ್ಟಿ ಫಾರ್ಮಾ ಮತ್ತು ನಿಫ್ಟಿ ಎಫ್‌ಎಂಸಿಜಿ ಹೊರತುಪಡಿಸಿ, ಎಲ್ಲಾ ನಿಫ್ಟಿ ವಲಯದ ಸೂಚ್ಯಂಕಗಳು ಕುಸಿತ ಕಂಡಿವೆ.
Advertisement