
ಮುಂಬೈ: ಲೋಕಸಭೆ ಚುನಾವಣೆ 2024ರ ಫಲಿತಾಂಶದ ಮತ ಎಣಿಕೆ ಸಾಗುತ್ತಿದ್ದಂತೆ ಆರಂಭಿಕ ಟ್ರೆಂಡ್ ಪ್ರಕಾರ ಎನ್ ಡಿಎ ಮುನ್ನಡೆ ಸಾಧಿಸುತ್ತಿದ್ದು, ಮಂಗಳವಾರ ಷೇರುಪೇಟೆ ವಹಿವಾಟು ಆರಂಭಕ್ಕೆ ಕುಸಿತ ಕಂಡುಬಂತು.
ನಿನ್ನೆ ಸೋಮವಾರ ವಹಿವಾಟು ಅಂತ್ಯಕ್ಕೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಇಂದು ಬೆಳಗ್ಗೆ ಕುಸಿತ ಕಂಡುಬಂದಿದೆ.
ಇಂದು ಬೆಳಗ್ಗೆ ವಹಿವಾಟು ಆರಂಭದಲ್ಲಿ, ಸೆನ್ಸೆಕ್ಸ್ 1,135.48 ಪಾಯಿಂಟ್‌ಗಳ ಕುಸಿತದೊಂದಿಗೆ 75,333.30 ಕ್ಕೆ ತಲುಪಿದರೆ, ನಿಫ್ಟಿ 408.35 ಪಾಯಿಂಟ್‌ಗಳ ಕುಸಿತದೊಂದಿಗೆ 22,855.55 ಕ್ಕೆ ತಲುಪಿತು. ನಿಫ್ಟಿ ಕಂಪನಿಗಳ ಪೈಕಿ 6 ಕಂಪೆನಿಗಳು ಮಾತ್ರ ಮುನ್ನಡೆಯುತ್ತಿದ್ದು, 44 ಕುಸಿತ ಕಂಡಿದ್ದು, ಹೂಡಿಕೆದಾರರು ಲೋಕಸಭೆ ಚುನಾವಣೆ ಫಲಿತಾಂಶವನ್ನು ನೋಡಿಕೊಂಡು ಎಚ್ಚರಿಕೆಯ ಹೆಜ್ಜೆ ಇರಿಸುತ್ತಿದ್ದಾರೆ.
Advertisement