ಅನುದಾನದ ಕೊರತೆ: 100ಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಿದ TISS

ಒಂದು ದಶಕಕ್ಕೂ ಹೆಚ್ಚು ಕಾಲ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ 50ಕ್ಕೂ ಹೆಚ್ಚು ಅಧ್ಯಾಪಕರು ಮತ್ತು 60 ಬೋಧಕೇತರ ಗುತ್ತಿಗೆ ಸಿಬ್ಬಂದಿ ಈಗ ನಿರುದ್ಯೋಗಿಗಳಾಗಿದ್ದಾರೆ.
TISS
TISS
Updated on

ಮುಂಬೈ: ಟಾಟಾ ಟ್ರಸ್ಟ್‌ನಿಂದ ಅನುದಾನದ ಸ್ವೀಕರಿಸದ ಕಾರಣ TATA ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್(TISS) ಸುಮಾರು 100 ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದೆ ಎಂದು ವರದಿಗಳು ತಿಳಿಸಿವೆ.

ಒಂದು ದಶಕಕ್ಕೂ ಹೆಚ್ಚು ಕಾಲ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ 50ಕ್ಕೂ ಹೆಚ್ಚು ಅಧ್ಯಾಪಕರು ಮತ್ತು 60 ಬೋಧಕೇತರ ಗುತ್ತಿಗೆ ಸಿಬ್ಬಂದಿ ಈಗ ನಿರುದ್ಯೋಗಿಗಳಾಗಿದ್ದಾರೆ.

"ಕಳೆದ 10-15 ವರ್ಷಗಳಿಂದ ನಾವು ವಿವಿಧ ಕೋರ್ಸ್‌ಗಳನ್ನು ಕಲಿಸಲು ಹೆಚ್ಚುವರಿ ಅಧ್ಯಾಪಕರನ್ನು ನೇಮಿಸಿಕೊಳ್ಳಲು ಟಾಟಾ ಟ್ರಸ್ಟ್‌ನಿಂದ ಅನುದಾನ ಪಡೆಯುತ್ತಿದ್ದೇವೆ. ಆದರೆ ಆ ಅನುದಾನ ಸ್ಥಗಿತಗೊಳಿಸಲಾಗಿದೆ. ಅನುದಾನದ ನವೀಕರಣ ನಡೆದಂತೆ ತೋರುತ್ತಿಲ್ಲ. ಹೀಗಾಗಿ ವಜಾಗೊಳಿಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧ್ಯಾಪಕ ಸದಸ್ಯರೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

TISS
ದೆಹಲಿ ಮಹಿಳಾ ಆಯೋಗದ 223 ನೌಕರರ ವಜಾ!

"ಗುತ್ತಿಗೆಗಳನ್ನು ನವೀಕರಿಸದಿರುವ ಬಗ್ಗೆ ಜೂನ್ 28 ರಂದು ನಮಗೆ ತಿಳಿಸಲಾಯಿತು. ಟಾಟಾ ಟ್ರಸ್ಟ್‌ನಿಂದ ಸ್ಪಷ್ಟನೇ ಪಡೆಯುವವರೆಗೆ ಪತ್ರಗಳನ್ನು(ಗುತ್ತಿಗೆಗಳನ್ನು ನವೀಕರಿಸದಿರುವಿಕೆಗೆ ಸಂಬಂಧಿಸಿದಂತೆ) ನೀಡದಂತೆ ನಾವು TISS ಆಡಳಿತಕ್ಕೆ ತಿಳಿಸಿದ್ದೇವೆ. ನಾವು ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಿದೇವು. ಆದರೆ ನಮ್ಮ ಮನವಿಗೆ ಯಾವುದೇ ಪ್ರಯೋಜನವಾಗಿಲ್ಲ’’ ಎಂದು ಅಧ್ಯಾಪಕರೊಬ್ಬರು ಹೇಳಿದ್ದಾರೆ.

TISS ಆಡಳಿತವು ಅಧ್ಯಾಪಕರು ಮತ್ತು ಇತರ ಸಿಬ್ಬಂದಿ ವಜಾ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಸಂಸ್ಥೆಯ ವಿದ್ಯಾರ್ಥಿಗಳ ವೇದಿಕೆ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

"ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿರಾಸಕ್ತಿ ಮತ್ತು ಸಂಸ್ಥೆ ನಡೆಸುವಲ್ಲಿ TISS ಆಡಳಿತದ ಪ್ರಸ್ತುತ ನಾಯಕತ್ವ ಸಂಪೂರ್ಣ ವಿಫಲವಾಗಿದೆ" ಎಂದು ಪ್ರಗತಿಪರ ವಿದ್ಯಾರ್ಥಿಗಳ ವೇದಿಕೆ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com