GAIL ನಿಂದ ಸಿಎನ್ ಜಿ ದರ ಪ್ರತಿ ಕೆ.ಜಿಗೆ 2.50 ರೂಪಾಯಿ ಇಳಿಕೆ!

ಎಲ್ ಪಿ ಜಿ ಸಿಲಿಂಡರ್ ದರ 100 ರೂಪಾಯಿ ಕಡಿಮೆಯಾಗುತ್ತಿದ್ದಂತೆಯೇ ಜಿಎಐಎಲ್ (ಇಂಡಿಯಾ) ಲಿಮಿಟೆಡ್ ಹಾಗೂ ಅದರ ಶಾಖಾ ಸಂಸ್ಥೆ ಜಿಎಐಎಲ್ ಗ್ಯಾಸ್ ಲಿಮಿಟೆಡ್ ಸಿಎನ್ ಜಿ ದರವನ್ನು ಇಳಿಕೆ ಮಾಡಿವೆ.
ಸಿನ್ ಜಿ 40 ಪೈಸೆ, ಪಿಎನ್ ಜಿ ದರ 81 ಪೈಸೆ ಏರಿಕೆ
ಸಿನ್ ಜಿ 40 ಪೈಸೆ, ಪಿಎನ್ ಜಿ ದರ 81 ಪೈಸೆ ಏರಿಕೆ

ನವದೆಹಲಿ: ಎಲ್ ಪಿ ಜಿ ಸಿಲಿಂಡರ್ ದರ 100 ರೂಪಾಯಿ ಕಡಿಮೆಯಾಗುತ್ತಿದ್ದಂತೆಯೇ ಜಿಎಐಎಲ್ (ಇಂಡಿಯಾ) ಲಿಮಿಟೆಡ್ ಹಾಗೂ ಅದರ ಶಾಖಾ ಸಂಸ್ಥೆ ಜಿಎಐಎಲ್ ಗ್ಯಾಸ್ ಲಿಮಿಟೆಡ್ ಸಿಎನ್ ಜಿ ದರವನ್ನು ಇಳಿಕೆ ಮಾಡಿವೆ. ದೇಶಾದ್ಯಂತ ಸಿಎನ್ ಜಿ ದರ ಪ್ರತಿ ಕೆ.ಜಿಗೆ 2.50 ರೂಪಾಯಿ ಕಡಿಮೆಯಾಗಲಿದೆ. ಸಿಎನ್ ಜಿ ದರ ಕಡಿತ ಜಿಎಐಎಲ್ ಹಾಗೂ ಜಿಎಐಎಲ್ ಗ್ಯಾಸ್ ಸಿಎನ್ ಜಿ ಔಟ್ ಲೆಟ್ ಗಳಿಗೆ ಅನ್ವಯವಾಗಲಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜಿಎಐಎಲ್ ಸಂಸ್ಥೆ, CNG ಅನ್ನು ಗ್ರಾಹಕರಿಗೆ ಹೆಚ್ಚು ಆಕರ್ಷಕವಾದ ಆಯ್ಕೆಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ, ಶುದ್ಧ ಇಂಧನಗಳ ಅಳವಡಿಕೆಯನ್ನು ಉತ್ತೇಜಿಸುತ್ತದೆ ಮತ್ತು ಸುಸ್ಥಿರ ಸಾರಿಗೆ ಅಭ್ಯಾಸಗಳನ್ನು ಈ ಕ್ರಮ ಉತ್ತೇಜಿಸುತ್ತದೆ ಎಂದು ಹೇಳಿದೆ.

ಸಿನ್ ಜಿ 40 ಪೈಸೆ, ಪಿಎನ್ ಜಿ ದರ 81 ಪೈಸೆ ಏರಿಕೆ
ಮಾರುತಿ ಸುಜುಕಿಯಿಂದ ಸೆಲೆರಿಯೊ ಎಸ್- ಸಿಎನ್ ಜಿ ಕಾರು ಮಾರುಕಟ್ಟೆಗೆ ಬಿಡುಗಡೆ

ದರ ಇಳಿಕೆಯ ನಂತರ ವಾರಣಾಸಿಯಲ್ಲಿ ಸಿಎನ್‌ಜಿ ಪರಿಷ್ಕೃತ ಬೆಲೆ ಪ್ರತಿ ಕೆಜಿಗೆ 81.17 ರೂ., ಪಾಟ್ನಾದಲ್ಲಿ ಪ್ರತಿ ಕೆಜಿಗೆ 84.54 ರೂ., ರಾಂಚಿಯಲ್ಲಿ ಕೆಜಿಗೆ 87.15 ರೂ., ಜೆಮ್‌ಶೆಡ್‌ಪುರದಲ್ಲಿ ಕೆಜಿಗೆ 87.08 ರೂ., ಭುವನೇಶ್ವರದಲ್ಲಿ 87.08 ರೂ. ಪ್ರತಿ ಕೆಜಿಗೆ 87.26 ರೂ., ಕಟಕ್‌ನಲ್ಲಿ 87.60 ರೂ. ಆಗಿರಲಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅಡುಗೆ ಅನಿಲ ಬೆಲೆಯಲ್ಲಿ ಪ್ರತಿ ಸಿಲಿಂಡರ್‌ಗೆ 100 ರೂಪಾಯಿ ಕಡಿತಗೊಳಿಸಿರುವುದನ್ನು ಘೋಷಿಸಿದ್ದರು. ಪೆಟ್ರೋಲ್ ಅಥವಾ ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com