ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗ್ರಾಹಕರಿಗೆ ಗುಡ್ ನ್ಯೂಸ್: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ, ನೂತನ ದರ ಹೀಗಿದೆ...

ಮೇ ತಿಂಗಳ ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರ ದೇಶದ ಜನತೆಗೆ ಬೆಲೆ ಏರಿಕೆಯ ತತ್ತರದಿಂದ ಕೊಂಚ ನಿರಾಳತೆ ಎನಿಸುವ ಸುದ್ದಿ ನೀಡಿದೆ.

ನವದೆಹಲಿ: ಮೇ ತಿಂಗಳ ಲೋಕಸಭೆ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರ ದೇಶದ ಜನತೆಗೆ ಬೆಲೆ ಏರಿಕೆಯ ತತ್ತರದಿಂದ ಕೊಂಚ ನಿರಾಳತೆ ಎನಿಸುವ ಸುದ್ದಿ ನೀಡಿದ್ದು, ದೇಶಾದ್ಯಂತ ಇಂದು ಶುಕ್ರವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 2 ರೂಪಾಯಿ ಇಳಿಕೆಯಾಗಿದೆ.

ಬೆಲೆ ಇಳಿಕೆಯಿಂದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ಲೀಟರ್‌ಗೆ 94.72 ಮತ್ತು 87.62 ರೂಪಾಯಿಯಾಗಿದ್ದು, ವ್ಯಾಟ್( VAT), ಸ್ಥಳೀಯ ಶುಲ್ಕಗಳಾದ ಸೆಸ್ ಮತ್ತು ಸರಕು ಸಾಗಣೆ ಶುಲ್ಕಗಳಲ್ಲಿನ ವ್ಯತ್ಯಾಸದಿಂದಾಗಿ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ.

ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 101.94 ರೂಪಾಯಿ ಹಾಗೂ ಡೀಸೆಲ್ ಬೆಲೆ 87.89 ರೂಪಾಯಿ ಇದ್ದು. ಇಂದಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ 2 ರೂಪಾಯಿ ಇಳಿಕೆಯಾಗಲಿದೆ. ಪೆಟ್ರೋಲ್ ಬೆಲೆ 99.94 ರೂಪಾಯಿ ಹಾಗೂ ಡೀಸೆಲ್ ಬೆಲೆ 85.89 ರೂಪಾಯಿಗೆ ಇಳಿಕೆ ಆಗಲಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಿಂದ ಜನತೆಗೆ ಅನುಕೂಲವಾಗಲಿದೆ. ಇದರಿಂದ ಗ್ರಾಹಕರ ಪೆಟ್ರೋಲ್, ಡೀಸೆಲ್ ಬಳಕೆ ಕೂಡ ಹೆಚ್ಚಾಗಿ ದೇಶದಲ್ಲಿ ಪ್ರವಾಸೋದ್ಯಮವನ್ನು, ಲಾಜಿಸ್ಟಿಕ್ಸ್, ಉತ್ಪಾದನೆ ಮತ್ತು ಚಿಲ್ಲರೆ ವಲಯಗಳ ಲಾಭದಾಯಕತೆ ಹೆಚ್ಚಾಗುತ್ತದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈಗ ಲೀಟರ್‌ಗೆ 96.72 ರೂ.ಗೆ ಹೋಲಿಸಿದರೆ ಲೀಟರ್‌ಗೆ 94.72 ರೂ ಆಗಿದ್ದು, ಡೀಸೆಲ್ ಪ್ರತಿ ಲೀಟರ್‌ಗೆ 87.62 ರೂ.ಗೆ ಮಾರಾಟವಾಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿನ ಕಡಿತವು ಡೀಸೆಲ್ ಮೂಲಕ ಚಲಿಸುವ 58 ಲಕ್ಷಕ್ಕೂ ಹೆಚ್ಚು ಭಾರೀ ಸರಕುಗಳ ವಾಹನಗಳು, 6 ಕೋಟಿ ಕಾರುಗಳು ಮತ್ತು 27 ಕೋಟಿ ದ್ವಿಚಕ್ರ ವಾಹನಗಳಲ್ಲಿ ಚಲಿಸುವ ಗ್ರಾಹಕರ ವೆಚ್ಚವನ್ನು ತಗ್ಗಿಸಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಟ್ವೀಟ್ ಮೂಲಕ ತಿಳಿಸಿದೆ.

ಕಚ್ಚಾ ತೈಲ ಬೆಲೆಗಳಲ್ಲಿ ತಿದ್ದುಪಡಿಯ ಹೊರತಾಗಿಯೂ ಮೇ 2022 ರಿಂದ ಭಾರತದಲ್ಲಿ ಇಂಧನ ಬೆಲೆಗಳು ಬದಲಾಗದೆ ಉಳಿದಿತ್ತು. ವಿಶಿಷ್ಟವಾಗಿ, ಕೇಂದ್ರ ಸ್ವಾಮ್ಯ ತೈಲ ಕಂಪೆನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಗಳು ಅಂತಾರಾಷ್ಟ್ರೀಯ ಮಾನದಂಡದ ಬೆಲೆಗಳ ರೋಲಿಂಗ್ ಸರಾಸರಿಯನ್ನು ಆಧರಿಸಿ ಪ್ರತಿದಿನ ಚಿಲ್ಲರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಷ್ಕರಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 8 ರಂದು ದೇಶದಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 100 ರೂಪಾಯಿ ಕಡಿತವನ್ನು ಘೋಷಿಸಿದ್ದರು.

Related Stories

No stories found.

Advertisement

X
Kannada Prabha
www.kannadaprabha.com