ಈರುಳ್ಳಿ ಮೇಲಿನ ರಫ್ತು ನಿಷೇಧ ವಿಸ್ತರಿಸಿದ ಕೇಂದ್ರ

ದೇಶೀಯ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಅದರ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಕೇಂದ್ರ ಸರ್ಕಾರ ಮುಂದಿನ ಆದೇಶದವರೆಗೆ ಈರುಳ್ಳಿ ಮೇಲಿನ ರಫ್ತು ನಿಷೇಧವನ್ನು ಶನಿವಾರ ವಿಸ್ತರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶೀಯ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಅದರ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಕೇಂದ್ರ ಸರ್ಕಾರ ಮುಂದಿನ ಆದೇಶದವರೆಗೆ ಈರುಳ್ಳಿ ಮೇಲಿನ ರಫ್ತು ನಿಷೇಧವನ್ನು ಶನಿವಾರ ವಿಸ್ತರಿಸಿದೆ.

ಮೊದಲು ಈ ವರ್ಷ ಮಾರ್ಚ್ 31ರವರೆಗೆ ಈರುಳ್ಳಿ ರಫ್ತು ನಿಷೇಧಿಸಲಾಗಿತ್ತು.

"ಈರುಳ್ಳಿ ಮೇಲಿನ ರಫ್ತು ನಿಷೇಧವನ್ನು ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ" ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ(ಡಿಜಿಎಫ್‌ಟಿ) ಮಾರ್ಚ್ 22 ರ ಅಧಿಸೂಚನೆಯಲ್ಲಿ ತಿಳಿಸಿದೆ.

ಸಾಂದರ್ಭಿಕ ಚಿತ್ರ
ಈರುಳ್ಳಿ ರಫ್ತು ನಿಷೇಧ: 1 ವಾರದಲ್ಲಿ 40 ಲಕ್ಷ ನಷ್ಟ; ಬೆಂಗಳೂರಿನ ರಫ್ತುದಾರರ ಅಳಲು!

DGFT ರಫ್ತು ಮತ್ತು ಆಮದು-ಸಂಬಂಧಿತ ಸಮಸ್ಯೆಗಳೊಂದಿಗೆ ವ್ಯವಹರಿಸುವ ಸಚಿವಾಲಯದ ಒಂದು ಅಂಗವಾಗಿದೆ.

ಕೇಂದ್ರ ಸರ್ಕಾರ ಡಿಸೆಂಬರ್ 8, 2023 ರಂದು ಈರುಳ್ಳಿ ರಫ್ತು ನಿಷೇಧಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com