ಸರ್ಕಾರಿ ಇ-ಮಾರುಕಟ್ಟೆಯಿಂದ ಸರಕು ಖರೀದಿ 2024 ರಲ್ಲಿ ದ್ವಿಗುಣ, 4 ಲಕ್ಷ ಕೋಟಿ ರೂ. ಗೆ ಏರಿಕೆ

ಸರ್ಕಾರಿ ಇ- ಮಾರುಕಟ್ಟೆಯಿಂದ ಸರಕು ಖರೀದಿ ಪ್ರಮಾಣ 2024 ರಲ್ಲಿ ದ್ವಿಗುಣಗೊಂಡಿದ್ದು, 4 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ಸರ್ಕಾರಿ ಇ- ಮಾರುಕಟ್ಟೆ
ಸರ್ಕಾರಿ ಇ- ಮಾರುಕಟ್ಟೆonline desk

ನವದೆಹಲಿ: ಸರ್ಕಾರಿ ಇ- ಮಾರುಕಟ್ಟೆಯಿಂದ ಸರಕು ಖರೀದಿ ಪ್ರಮಾಣ 2024 ರಲ್ಲಿ ದ್ವಿಗುಣಗೊಂಡಿದ್ದು, 4 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

ಮಾ.28, 2024 ವರೆಗಿನ ಅಂಕಿ-ಅಂಶಗಳು ಇದಾಗಿದೆ. ಸರ್ಕಾರಿ ಇಲಾಖೆಗಳಿಗೆ ಸರಕು ಸೇವೆಗಳನ್ನು ಪಡೆಯುವುದಕ್ಕೆ ಪಾದರ್ಶಕ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ 2016 ರಲ್ಲಿ ಈ ಜಿಇಎಂ ನ್ನು ಜಾರಿಗೆ ತರಲಾಗಿತ್ತು.

ಜಿಇಎಂ ನಲ್ಲಿ ಮಹಿಳಾ ಸ್ವಸಹಾಯಕ ಗುಂಪು, ಸ್ಟಾರ್ಟ್ ಅಪ್ ಹಾಗೂ ಎಂಎಸ್ಎಂಇಗಳಂತಹ ಸಣ್ಣ ಉದ್ಯಮಿಗಳು, ಸೇವೆ, ಸರಕುಗಳನ್ನು ಪೂರೈಸುತ್ತಾರೆ. 2016 ರಲ್ಲಿ ಪೋರ್ಟಲ್ ನಲ್ಲಿನ ವ್ಯಾಪಾರದ ಮೌಲ್ಯ422 ಕೋಟಿ ರೂಪಾಯಿಗಳಷ್ಟಿತ್ತು 2021-22 ರಲ್ಲಿ ಇದು 1.06 ಲಕ್ಷ ಕೋಟಿಗೆ ಏರಿಕೆಯಾಗಿತ್ತು. 2023 ರಲ್ಲಿ ಇಲ್ಲಿನ ವಹಿವಾಟು 2 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿತ್ತು.

ಮಾರ್ಚ್ 2024 ರವರೆಗಿನ ಈ GMV ಯ ಸುಮಾರು 50% ರಷ್ಟು ಸೇವೆಗಳ ಸಂಗ್ರಹಣೆಗೆ ಕಾರಣವಾಗಿದೆ, ಕಳೆದ ವರ್ಷಕ್ಕೆ ಹೋಲಿಸಿದರೆ 205% ಬೆಳವಣಿಗೆಯನ್ನು ದಾಖಲಿಸಿದೆ. ಜಿಇಎಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿಕೆ ಸಿಂಗ್ ಮಾತನಾಡಿ, ಪೋರ್ಟಲ್‌ನಿಂದ ಸೇವೆಗಳ ಸಂಗ್ರಹಣೆಯು FY23 ರಲ್ಲಿ 66,000 ಕೋಟಿಗಳಿಂದ ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ 2.05 ಲಕ್ಷ ಕೋಟಿ ರೂಪಾಯಿಗಳಿಗೆ ಜಿಗಿದಿದೆ. ವೇದಿಕೆಯಿಂದ 1.95 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ಖರೀದಿಸಲಾಗಿದೆ. ಆಟೋಮೊಬೈಲ್‌ಗಳು, ಕಂಪ್ಯೂಟರ್‌ಗಳು ಮತ್ತು ಕಚೇರಿ ಪೀಠೋಪಕರಣಗಳು ಖರೀದಿಸಲಾಗಿರುವ ಕೆಲವು ಪ್ರಮುಖ ಉತ್ಪನ್ನ ವರ್ಗಗಳಾಗಿವೆ.

ಸರ್ಕಾರಿ ಇ- ಮಾರುಕಟ್ಟೆ
ಪ್ರಸಕ್ತ ಆರ್ಥಿಕ ವರ್ಷದಲ್ಲಿ 1.36 ಲಕ್ಷ ಕೋಟಿ ಜಿಎಸ್ ಟಿ ವಂಚನೆ: ಹಣಕಾಸು ಇಲಾಖೆ ಮಾಹಿತಿ

"ಸ್ಥಾಪಿತ ಸೇವಾ ಪೂರೈಕೆದಾರರ ಏಕಚಕ್ರಾಧಿಪತ್ಯವನ್ನು ಮುರಿಯುವಲ್ಲಿ ಜಿಇಎಂ ಯಶಸ್ವಿಯಾಗಿದೆ, ಸಣ್ಣ ದೇಶೀಯ ಉದ್ಯಮಿಗಳು ಯಾವುದೇ ಸಮಯದಲ್ಲಿ ಸರ್ಕಾರಿ ಟೆಂಡರ್‌ಗಳಲ್ಲಿ ಭಾಗವಹಿಸಲು ದಾರಿ ಮಾಡಿಕೊಟ್ಟಿದೆ" ಎಂದು ವಾಣಿಜ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com