Paytm
ಪೇಟಿಎಂonline desk

4ನೇ ತ್ರೈಮಾಸಿಕದಲ್ಲಿ ಪೇಟಿಎಂ ಗೆ 550 ಕೋಟಿ ರೂ. ನಷ್ಟ; ಆರ್ಥಿಕ ವರ್ಷದಲ್ಲಿ 1,422 ಕೋಟಿ ರೂ. ಕಳೆದುಕೊಂಡ ಸಂಸ್ಥೆ

ಆರ್ ಬಿಐ ಪೇಟಿಎಂ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಗೆ ನಿರ್ಬಂಧ ವಿಧಿಸಿದ್ದರ ಪರಿಣಾಮವನ್ನು ಪೇಟಿಎಂ ನ ಮಾತೃಸಂಸ್ಥೆ One97 ಕಮ್ಯುನಿಕೇಷನ್ಸ್ ಎದುರಿಸಿದ್ದು 2023-24 ನೇ ಸಾಲಿನ 4 ನೇ ತ್ರೈಮಾಸಿಕದಲ್ಲಿ 550 ಕೋಟಿ ನಷ್ಟ ಎದುರಿಸಿದೆ.
Published on

ನವದೆಹಲಿ: ಆರ್ ಬಿಐ ಪೇಟಿಎಂ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಗೆ ನಿರ್ಬಂಧ ವಿಧಿಸಿದ್ದರ ಪರಿಣಾಮವನ್ನು ಪೇಟಿಎಂ ನ ಮಾತೃಸಂಸ್ಥೆ One97 ಕಮ್ಯುನಿಕೇಷನ್ಸ್ ಎದುರಿಸಿದ್ದು 2023-24 ನೇ ಸಾಲಿನ 4 ನೇ ತ್ರೈಮಾಸಿಕದಲ್ಲಿ 550 ಕೋಟಿ ನಷ್ಟ ಎದುರಿಸಿದೆ.

ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಸಂಸ್ಥೆ 167.5 ಕೋಟಿ ರೂಪಾಯಿ ನಷ್ಟ ಎದುರಿಸಿತ್ತು. ವಿಜಯ್ ಶೇಖರ್ ಶರ್ಮಾ ನೇತೃತ್ವದ ಕಂಪನಿಯ ಕಾರ್ಯಾಚರಣೆಗಳ ಆದಾಯ ಶೇ.2.9 ರಷ್ಟು ಕನಿಷ್ಠ ಕುಸಿತ ಅಂದರೆ 2,267.10 ಕೋಟಿಗೆ ಕುಸಿದಿದ್ದು, ಕಳೆದ ವರ್ಷ ಸಂಸ್ಥೆಯ ಆದಾಯ 2,334 ಕೋಟಿ ರೂಪಾಯಿಗಳಷ್ಟಿತ್ತು.

ನಮ್ಮ 4 ನೇ ತ್ರೈಮಾಸಿಕ ಫಲಿತಾಂಶಗಳು UPI ಪರಿವರ್ತನೆ ಇತ್ಯಾದಿಗಳ ಖಾತೆಯಲ್ಲಿ ತಾತ್ಕಾಲಿಕ ಅಡಚಣೆಯಿಂದ ಬಾಧಿಸಲ್ಪಟ್ಟಿವೆ. PPBL ನಿರ್ಬಂಧದ ಕಾರಣದಿಂದಾಗಿ ಶಾಶ್ವತ ಅಡಚಣೆಯಿಂದ ಪ್ರಭಾವಿತವಾಗಿದೆ ಎಂದು ಪೇಟಿಎಂ ಸಂಸ್ಥೆ ತಿಳಿಸಿದೆ. ಆರ್ ಬಿಐ ನ ಕ್ರಮದ ಪೂರ್ಣ ಪರಿಣಾಮ ಏನಾಗಿರಲಿದೆ ಎಂಬುದು 2025 ರ ಮೊದಲ ತ್ರೈಮಾಸಿಕದಲ್ಲಿ ಸ್ಪಷ್ಟವಾಗಿ ತಿಳಿಯಲಿದೆ ಎಂದು ಸಂಸ್ಥೆ ಹೇಳಿದೆ.

RBI ಹೊಸ ಬಳಕೆದಾರರನ್ನು ಪಡೆಯುವುದರಿಂದ PPBL ನ್ನು ನಿರ್ಬಂಧಿಸಿದ ನಂತರ ಮಾರ್ಚ್ ತ್ರೈಮಾಸಿಕ Paytm ನ ಮೊದಲ ತ್ರೈಮಾಸಿಕ ಫಲಿತಾಂಶವಾಗಿದೆ.

Paytm
ಮನಿ ಲಾಂಡರಿಂಗ್ ನಿಯಮ ಉಲ್ಲಂಘನೆ: ಪೇಟಿಎಂ ಪೇಮೆಂಟ್‌ ಬ್ಯಾಂಕ್‌ಗೆ 5.49 ಕೋಟಿ ರೂ ದಂಡ

PPBL ನಲ್ಲಿ ಕಂಪನಿಯ ಹೂಡಿಕೆಯ ಮೌಲ್ಯವು ದುರ್ಬಲವಾಗಿದೆ ಎಂದು ಸಂಸ್ಥೆಯ ನಿರ್ವಹಣೆ ಆಡಳಿತ ತಿಳಿಸಿದ್ದು, ಆರ್ಥಿಕ ವರ್ಷ 2023 ರಲ್ಲಿ ದಾಖಲಾಗಿದ್ದ 1,776.5 ಕೋಟಿ ನಷ್ಟಕ್ಕೆ ಹೋಲಿಸಿದರೆ, ಈ ಸಾಲಿನಲ್ಲಿ ಸಂಸ್ಥೆ 1,422.4 ಕೋಟಿ ರೂಪಾಯಿ ನಷ್ಟ ಎದುರಿಸಿದೆ. ಆರ್ಥಿಕ ವರ್ಷ 2024 ರಲ್ಲಿ ಕಾರ್ಯಾಚರಣೆಗಳಿಂದ ಬಂದ ಆದಾಯ ವರ್ಷದಿಂದ ವರ್ಷಕ್ಕೆ 25% ರಷ್ಟು ಏರಿಕೆಯಾಗಿದ್ದು 9,977.8 ಕೋಟಿ ರೂಗಳಷ್ಟಿದೆ. 2025 ರ ಮೊದಲ ತ್ರೈಮಾಸಿಕದಲ್ಲಿ ಸಂಸ್ಥೆ 1500-1600 ಕೋಟಿ ರೂಪಾಯಿ ಆದಾಯ ನಿರೀಕ್ಷಿಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com