ದೇಶದಲ್ಲಿ ನಕಲಿ ದಾಖಲೆ ಬಳಸಿ 6.80 ಲಕ್ಷ ಮೊಬೈಲ್ ಸಂಪರ್ಕ!

ನಕಲಿ ದಾಖಲೆಗಳನ್ನು ಕೊಟ್ಟು 6.80 ಲಕ್ಷ ಮೊಬೈಲ್ ಸಂಪರ್ಕಗಳನ್ನು ಪಡೆದಿರುವುದನ್ನು ದೂರಸಂಪರ್ಕ ಇಲಾಖೆ (DoT) ಗುರುತಿಸಿದೆ. ಈ ಸಂಪರ್ಕಗಳನ್ನು ತಕ್ಷಣವೇ ಮರು-ಪರಿಶೀಲಿಸುವಂತೆ ದೂರಸಂಪರ್ಕ ಸೇವಾ ಪೂರೈಕೆದಾರರಿಗೆ (ಟಿಎಸ್‌ಪಿ) ದೂರಸಂಪರ್ಕ ಇಲಾಖೆ ನಿರ್ದೇಶಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರTNIE
Updated on

ನವದೆಹಲಿ: ನಕಲಿ ದಾಖಲೆಗಳನ್ನು ಕೊಟ್ಟು 6.80 ಲಕ್ಷ ಮೊಬೈಲ್ ಸಂಪರ್ಕಗಳನ್ನು ಪಡೆದಿರುವುದನ್ನು ದೂರಸಂಪರ್ಕ ಇಲಾಖೆ (DoT) ಗುರುತಿಸಿದೆ. ಈ ಸಂಪರ್ಕಗಳನ್ನು ತಕ್ಷಣವೇ ಮರು-ಪರಿಶೀಲಿಸುವಂತೆ ದೂರಸಂಪರ್ಕ ಸೇವಾ ಪೂರೈಕೆದಾರರಿಗೆ (ಟಿಎಸ್‌ಪಿ) ದೂರಸಂಪರ್ಕ ಇಲಾಖೆ ನಿರ್ದೇಶಿಸಿದೆ.

ಈ ಗುರುತಿಸಲಾದ ಮೊಬೈಲ್ ಸಂಖ್ಯೆಗಳನ್ನು ತಕ್ಷಣ ಮರು-ಪರಿಶೀಲಿಸುವಂತೆ TSP ಗೆ DoT ನಿರ್ದೇಶನ ನೀಡಿದೆ. ಅಲ್ಲದೆ DoT ಗುರುತಿಸಿರುವ ಸಂಪರ್ಕಗಳನ್ನು 60 ದಿನಗಳಲ್ಲಿ ಮರು ಪರಿಶೀಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಸಂಗ್ರಹ ಚಿತ್ರ
Air India ಉದ್ಯೋಗಿಗಳಿಗೆ Good News: ವೇತನ ಹೆಚ್ಚಳದ ಜೊತೆಗೆ ಬೋನಸ್ ಘೋಷಣೆ ಮಾಡಿದ TATA ಸಮೂಹ!

ಮರು ಪರಿಶೀಲನೆಯನ್ನು ಪೂರ್ಣಗೊಳಿಸಲು ವಿಫಲವಾದರೆ ಸಂಬಂಧಿಸಿದ ಮೊಬೈಲ್ ಸಂಖ್ಯೆಗಳ ಸಂಪರ್ಕ ಕಡಿತಗೊಳ್ಳುತ್ತದೆ ಎಂದು ಪತ್ರಿಕಾ ಟಿಪ್ಪಣಿಯಲ್ಲಿ DoT ತಿಳಿಸಿದೆ. ಸುಧಾರಿತ AI ವಿಶ್ಲೇಷಣೆಯು ಈ ಸಂಭಾವ್ಯ ಮೋಸದ ಸಂಪರ್ಕಗಳನ್ನು ಗುರುತಿಸಿದೆ ಎಂದು DoT ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com