ನಿಮ್ಮನ್ನು ಬಡವರನ್ನಾಗಿಯೇ ಉಳಿಸುವ 10 ಕೆಟ್ಟ ಹಣಕಾಸು ನಿರ್ವಹಣಾ ಅಭ್ಯಾಸಗಳು!

ಆರೋಗ್ಯವಾಗಲಿ ಅಥವಾ ಸಂಪತ್ತಾಗಲಿ - ಗುರಿಗಳನ್ನು ಹೊಂದಿರುವುದು ನಿಜವಾಗಿಯೂ ಮುಖ್ಯವಾಗಿದೆ. ಶ್ರೀಮಂತರು ಮತ್ತು ನಿಜವಾಗಿಯೂ ಅದನ್ನು ಸಾಧಿಸ ಬಯಸುವವರು ಸ್ಪಷ್ಟ ಗುರಿಗಳನ್ನು ಹೊಂದಿರುತ್ತಾರೆ.
Casual Images
ಸಾಂದರ್ಭಿಕ ಚಿತ್ರಗಳು

ನಿಮ್ಮನ್ನು ಬಡವರನ್ನಾಗಿಯೇ ಉಳಿಸುವ 10 ಕೆಟ್ಟ ಹಣಕಾಸು ನಿರ್ವಹಣಾ ಅಭ್ಯಾಸಗಳು ಯಾವುವು. ನಿಜವಾಗಿಯೂ ಬಡತನ ಇಲ್ಲದಿದ್ದರೂ ಮಧ್ಯಮ ವರ್ಗದಿಂದ ಹೊರಬರಲು ಈ ಅಭ್ಯಾಸಗಳು ಅವಕಾಶ ಮಾಡಿಕೊಡುವುದಿಲ್ಲ. ಇಂತಹ ಕೆಲವು ವಿಷಯಗಳನ್ನು ಗಮನಿಸೋಣ.

1. ಯಾವುದೇ ಹಣಕಾಸಿನ ಗುರಿಗಳಿಲ್ಲದಿರುವುದು

ಉಳಿಸುವ ಅಥವಾ ಹೂಡಿಕೆ ಮಾಡುವ ಯಾವುದೇ ಗುರಿ ಇಲ್ಲದಿದ್ದಾಗ, ಉಳಿಸಲು ಅಥವಾ ಹೂಡಿಕೆ ಮಾಡದಿರುವ ಸಾಧ್ಯತೆಗಳಿವೆ! ಆರೋಗ್ಯವಾಗಲಿ ಅಥವಾ ಸಂಪತ್ತಾಗಲಿ - ಗುರಿಗಳನ್ನು ಹೊಂದಿರುವುದು ನಿಜವಾಗಿಯೂ ಮುಖ್ಯವಾಗಿದೆ. ಶ್ರೀಮಂತರು ಮತ್ತು ನಿಜವಾಗಿಯೂ ಅದನ್ನು ಸಾಧಿಸ ಬಯಸುವವರು ಸ್ಪಷ್ಟ ಗುರಿಗಳನ್ನು ಹೊಂದಿರುತ್ತಾರೆ.

2. ಅಗತ್ಯತೆಗಳು, ಐಷಾರಾಮಿ ಜೀವನಕ್ಕಾಗಿ ಹೆಚ್ಚು ವೆಚ್ಚ

ನಿಯಮಿತವಾಗಿ ಹಣ ಗಳಿಸುವವರು (ಮಾಸಿಕ ಹಣ) ಮೊದಲಿಗೆ ಅಗತ್ಯತೆಗಳು ಮತ್ತು ಐಷಾರಾಮಿಗಳಿಗಾಗಿ ಖರ್ಚು ಮಾಡಿದರೆ ಎಂದಿಗೂ ಸಾಕಷ್ಟು ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ. ಶ್ರೀಮಂತರು 'ನಿಮಗಾಗಿ ಮೊದಲು ಖರ್ಚು ಮಾಡಿ' ಎಂಬ ತತ್ವಕ್ಕೆ ಅಂಟಿಕೊಳ್ಳುತ್ತಾರೆ - ಮೊದಲು ನಿಮ್ಮ ಎಲ್ಲಾ ಗುರಿಗಳಿಗಾಗಿ ಹಣವನ್ನು ಮೀಸಲಿಡಿ. ಹೀಗೆ ಹಣ ಉಳಿತಾಯ ಮಾಡಬಹುದು.

3. ಸಾಲದಿಂದ ನೆಮ್ಮದಿಯಾಗಿರುವುದು

ಇದ್ದಕಿದ್ದಂತೆ ಖರ್ಚು ಎದುರಾದಾಗ ಉದಾಹರಣೆಗೆ ವಿದ್ಯುತ್ ಬೀಲ್, ಡಾಕ್ಟರ್ ಬಿಲ್ ಮತ್ತಿತರ ಕಾರಣದಿಂದಾಗಿ ಸಾಲ ಪಡೆಯುವುದು. ಒಮ್ಮೆ ನೀವು ಸಾಲದಿಂದ ಮುಕ್ತರಾದ ನಂತರ ಸಾಲದ ಬಗ್ಗೆ ಚಿಂತಿಸದಿರುವುದು. ಕಂತುಗಳ ಲೆಕ್ಕದಲ್ಲಿ ಹೇಳಿದಾಗ ಸಾಲವು ಚಿಕ್ಕದಾಗಿ ಕಾಣುತ್ತದೆ. ಅಂತಹ ಜನರು ಎಲ್ಲವನ್ನೂ ಕಂತುಗಳಲ್ಲಿ ಖರೀದಿಸುತ್ತಾರೆ. ಪ್ರಯಾಣ ಮತ್ತು ದುಬಾರಿ ಫೋನ್‌ ಖರೀದಿಗೂ EMI ಬಳಸುತ್ತಾರೆ. ಬ್ಯಾಂಕುಗಳಿಗೆ ಪಾವತಿಸುವ ಬಡ್ಡಿಯು ನಿಮ್ಮನ್ನು ಬಡವರನ್ನಾಗಿ ಮಾಡುತ್ತದೆ!

4. ತುರ್ತು ಹಣ ಹೊಂದಿಲ್ಲದಿರುವುದು

ಸ್ವಲ್ಪ ಹಣದ ಅಗತ್ಯವಿದ್ದಾಗ ಬ್ಯಾಂಕ್ ನಲ್ಲಿದ್ದ ಎಲ್ಲಾ ಹಣವೂ ಖಾಲಿಯಾದಾಗ ಸಾಲ ಪಡೆಯುವುದು ಅನೀವಾರ್ಯವಾಗುತ್ತದೆ. ಕೊನೆಗೆ ವೈದ್ಯಕೀಯ ಮತ್ತಿತರ ತುರ್ತುಪರಿಸ್ಥಿತಿಗಾಗಿ ಸಾಲ ಮಾಡಿದ್ದಾಗಿ ಸಮರ್ಥಿಸಿಕೊಳ್ಳುತ್ತಾರೆ.

5. ಖರ್ಚು, ಆದಾಯ, ಆಸ್ತಿಗೆ ಹೊಣೆಗಾರಿಯ ಹಂಗಿಲ್ಲದಿರುವುದು

ಗುರಿಗಳನ್ನು ಹೊಂದಿಲ್ಲದಿದ್ದರೆ, ನಿಮಗೆ ಯಾವುದೇ ಮಾರ್ಗವಿರಲ್ಲ. ಲೆಕ್ಕಾಚಾರವೂ ಇರಲ್ಲ. ಇದರರ್ಥ ಅವರಿಗೆ ತಮ್ಮ ಬಗ್ಗೆ ಯಾವುದೇ ಹೊಣೆಗಾರಿಕೆ ಇಲ್ಲ ಎಂಬುದಾಗುತ್ತದೆ. ಇದು ನಿಜವಾಗಿಯೂ ನಿಮ್ಮನ್ನು ಬಡವರನ್ನಾಗಿ ಮಾಡುತ್ತದೆ. ಶ್ರೀಮಂತರು ತಮ್ಮ ಆಸ್ತಿಗಳು, ಹೊಣೆಗಾರಿಕೆಗಳು, ಆದಾಯ ಮತ್ತು ವೆಚ್ಚಗಳಿಗೆ ಆದ್ಯತೆ ನೀಡುತ್ತಾರೆ. ಬಹು ಮುಖ್ಯವಾಗಿ ಅವರು ತಮ್ಮಲ್ಲಿರುವ ಹಣದ ಮೌಲ್ಯವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಾರೆ.

6. ನೋಡಲು ದುಂದು ವೆಚ್ಚ ಮಾಡುವವರ ರೀತಿ ಕಾಣಿಸಿಕೊಳ್ಳಬೇಕೆಂಬ ಅಭ್ಯಾಸ:

ಕೊನೆಯ ಕೆಲವೇ ನಿಮಿಷಗಳಲ್ಲಿ ಪ್ರವಾಸಕ್ಕೆ ಆಯೋಜಿಸುವುದು, ವಿಮಾನದ ಟಿಕೆಟ್ ಗಾಗಿ ನೂರಾರು ಡಾಲರ್ ವ್ಯಯಿಸುವುದು. ಪ್ರವಾಸಕ್ಕೆ ತೆರಳಿದಾಗ ದುಬಾರಿ ಹೋಟೆಲ್ ಗಳಲ್ಲಿ ವಾಸ್ಯವ ಹೂಡುವುದು, ಪ್ರತಿ ಬಾರಿಯೂ ಖಾಸಗಿ ಸಾರಿಗೆಯನ್ನು ಬಳಸುವುದು! ಖಾಸಗಿ ಸಾರಿಗೆಯಲ್ಲಿ ಪ್ರಯಾಣಿಸುವುದು ಎಷ್ಟು ದುಬಾರಿ ಎಂದು ಲೆಕ್ಕಹಾಕಲು ತಲೆ ಕೆಡಿಸಿಕೊಳ್ಳದಿರುವುದು.

7. ಹೂಡಿಕೆ ಮಾಡದೆ ಬ್ಯಾಂಕಿನಲ್ಲಿ ಹಣ ಇಡುವುದು

ಹೆಚ್ಚಿನ ಹಣವು (ಯಾವುದಾದರೂ ಇದ್ದರೆ) ಹೂಡಿಕೆ ಮಾಡದೆಯೇ ಬ್ಯಾಂಕಿನಲ್ಲಿಯೇ ಇಡುವುದು ಕೂಡಾ ಬಡವರನ್ನಾಗಿ ಮಾಡುವ ಒಂದು ಕೆಟ್ಟ ಅಭ್ಯಾಸವಾಗಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಹೂಡಿಕೆ ಮಾಡದಿದ್ದರೆ ಅಥವಾ ತದನಂತರದ ದಿನಗಳಲ್ಲಿ ಮಾಡಿದ್ದರೆ ಅದರಿಂದ ಯಾವುದೇ ಉಪಯೋಗವಾಗುವುದಿಲ್ಲ.

8. ತೆರಿಗೆ ಬಗ್ಗೆ ಹೆಚ್ಚಾಗಿ ತಿಳಿಯದಿರುವುದು

ನಿಯಮಿತ ಆದಾಯಕ್ಕಿಂತ ಕಡಿಮೆ ದರದಲ್ಲಿ ಹೂಡಿಕೆ ಲಾಭಗಳಿಗೆ ತೆರಿಗೆ ಹಾಕಲಾಗುತ್ತದೆ ಎಂಬುದು ಎಷ್ಟೋ ಜನರಿಗೆ ತಿಳಿಯದಿರುವುದಿಲ್ಲ. ಇದು ಸ್ವಲ್ಪ ಹಣವಿರುವ ಜನರಿಗೆ ಅನ್ವಯವಾಗುತ್ತದೆ. ನಿಜವಾದ ಶ್ರೀಮಂತರು ಹೂಡಿಕೆ ಮತ್ತು ತೆರಿಗೆಯನ್ನು ಅರ್ಥಮಾಡಿಕೊಳ್ಳುತ್ತಾರೆ.

9. ಮೂಲಭೂತ ವೈಯಕ್ತಿಕ ಹಣಕಾಸು ಅರ್ಥವಾಗದಿರುವುದು

ಗುರಿಗಳು, ಬಜೆಟ್‌ಗಳು, ಮೇಲ್ವಿಚಾರಣೆ, ಬಾಡಿಗೆ v/s ಖರೀದಿ, ತುಂಬಾ ದೊಡ್ಡ ಮನೆ ಅಥವಾ ಐಷಾರಾಮಿ ಕಾರನ್ನು ಖರೀದಿಸುವುದು, ಇವೆಲ್ಲವೂ ನಿಮ್ಮನ್ನು ಬಡವರನ್ನಾಗಿ ಮಾಡುವ ದುರ್ಬಲ ಕ್ರಿಯೆಗಳಾಗಿವೆ!

10. ಪ್ರತಿದಿನ ಹೊರಗೆ ಊಟ ಮಾಡುವುದು, ಬ್ರಾಂಡೆಡ್ ಸರಕು ಖರೀದಿಸುವುದು, ದುಬಾರಿ ಸಾರಿಗೆ ಬಳಸುವುದು

ಇವು ಐಷಾರಾಮಿಗಳಾಗಿವೆ. ಪ್ರಯಾಣವು ಅವಶ್ಯಕವಾಗಿದೆ ಆದರೆ ಐಷಾರಾಮಿ ಪ್ರಯಾಣವು ನಿಮ್ಮನ್ನು ಬಡವರನ್ನಾಗಿ ಮಾಡುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com