SMS ಮೂಲಕ ಬರುವ ವೆಬ್ ಲಿಂಕ್‌ಗಳ ವೈಟ್‌ಲಿಸ್ಟ್ ಕಡ್ಡಾಯಗೊಳಿಸಿದ TRAI; ಇಂದಿನಿಂದ ಜಾರಿ

ಈ ನಿಯಮ ಅಕ್ಟೋಬರ್ 1, 2024 ರಿಂದ ಜಾರಿಗೆ ಬರುತ್ತಿದ್ದು, ಟೆಲಿಕಾಂ ಸೇವಾ ಪೂರೈಕೆದಾರರು ವೈಟ್‌ಲಿಸ್ಟ್ ಮಾಡಲಾದ ಲಿಂಕ್‌ಗಳನ್ನು ಮಾತ್ರ SMS ಮೂಲಕ ರವಾನಿಸುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಇಂದಿನಿಂದ SMS ಮೂಲಕ ವೆಬ್ ಲಿಂಕ್‌ಗಳ ವೈಟ್‌ಲಿಸ್ಟ್ ಮಾಡುವುದನ್ನು ಕಡ್ಡಾಯಗೊಳಿಸಿದ್ದು, ಇನ್ನುಮುಂದೆ ಮೊಬೈಲ್ ಫೋನ್ ಬಳಕೆದಾರರು SMS ಮೂಲಕ ಅನುಮೋದಿತ ವೆಬ್ ಲಿಂಕ್‌ಗಳನ್ನು ಮಾತ್ರ ಸ್ವೀಕರಿಸುತ್ತಾರೆ.

ಈ ನಿಯಮ ಅಕ್ಟೋಬರ್ 1, 2024 ರಿಂದ ಜಾರಿಗೆ ಬರುತ್ತಿದ್ದು, ಟೆಲಿಕಾಂ ಸೇವಾ ಪೂರೈಕೆದಾರರು ವೈಟ್‌ಲಿಸ್ಟ್ ಮಾಡಲಾದ ಲಿಂಕ್‌ಗಳನ್ನು ಮಾತ್ರ SMS ಮೂಲಕ ರವಾನಿಸುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಈ ಕ್ರಮವು ಬಳಕೆದಾರರು ದುರುದ್ದೇಶಪೂರಿತ ವೆಬ್‌ಸೈಟ್‌ಗಳಿಂದ ಮೋಸ ಹೋಗುವುದನ್ನು ತಪ್ಪಿಸುತ್ತದೆ.

ವೆಬ್‌ಸೈಟ್ ಲಿಂಕ್‌ಗಳು, OTT ಲಿಂಕ್‌ಗಳು, APK ಗಳನ್ನು ಹೊಂದಿದ್ದರೆ ವೈಟ್‌ಲಿಸ್ಟ್ ಮಾಡದ ಕಂಪನಿಗಳಿಂದ SMS ಸಂದೇಶಗಳನ್ನು ನಿರ್ಬಂಧಿಸುವಂತೆ ಟೆಲಿಕಾಂ ಪ್ರಾಧಿಕಾರ, ಟೆಲಿಕಾಂ ಕಂಪನಿಗಳನ್ನು ಸೂಚಿಸಿದೆ.

ಸಾಂದರ್ಭಿಕ ಚಿತ್ರ
ಅಕ್ಟೋಬರ್ 1 ರಿಂದ ಆದಾಯ ತೆರಿಗೆ ನಿಯಮಗಳಲ್ಲಿ ಬದಲಾವಣೆ: ನೀವು ತಿಳಿದಿರಬೇಕಾದ ಮಾಹಿತಿ ಇದು...

ನೀವು ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ, ನಿಮ್ಮ ಫೋನ್‌ನಲ್ಲಿ ವೈರಸ್‌ಗಳು ಬರುವ ಸಾಧ್ಯತೆಯಿದೆ. ಈ ಹೊಸ ನಿಯಮವು ಅಂತಹ ಅಪಾಯವನ್ನು ಕಡಿಮೆ ಮಾಡುತ್ತದೆ.

ಟ್ರಾಯ್ ಸೆಪ್ಟೆಂಬರ್‌ನಿಂದ ಈ ಹೊಸ ನಿಯಮಗಳನ್ನು ಜಾರಿಗೆ ತಂದಿತ್ತು. ಆದರೆ, ಕಂಪನಿಗಳು ಈ ಬದಲಾವಣೆಗೆ ಸಿದ್ಧರಾಗದ ಕಾರಣ, ದಿನಾಂಕವನ್ನು ಅಕ್ಟೋಬರ್‌ 1ರ ವರೆಗೆ ಮುಂದೂಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com