ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹಣೆಯಲ್ಲಿನ ಬೆಳವಣಿಗೆಯು ಮಧ್ಯಮಗತಿಯಲ್ಲಿ ಕಂಡುಬರುತ್ತಿದ್ದು, 2024ರ ಆಗಸ್ಟ್‌ನಲ್ಲಿ ಒಟ್ಟು ಸಂಗ್ರಹಣೆಗಳು ಶೇ.10 ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷ 1.59 ಲಕ್ಷ ಕೋಟಿ ರೂಪಾಯಿ ಹೆಚ್ಚಾಗಿದ್ದರೆ ಈ ವರ್ಷ 1.75 ಲಕ್ಷ ಕೋಟಿ ರೂಪಾಯಿ ಏರಿಕೆಯಾಗಿದೆ.
ಕಳೆದ ಜುಲೈ ತಿಂಗಳಲ್ಲಿ ಒಟ್ಟು ಸಂಗ್ರಹಣೆಯು ಶೇಕಡಾ 10.3 ರಷ್ಟು ಹೆಚ್ಚಾಗಿದೆ. ಆಗಸ್ಟ್ 2023ಕ್ಕಿಂತ ಒಟ್ಟು ಜಿಎಸ್ ಟಿ ಸಂಗ್ರಹಣೆಗಳು ಶೇಕಡಾ 11 ರಷ್ಟು ಏರಿಕೆಯಾಗಿದೆ.
ನಿವ್ವಳ ಜಿಎಸ್ಟಿ ಸಂಗ್ರಹಣೆಯಲ್ಲಿನ ನಿಧಾನಗತಿಯು ಇನ್ನೂ ಹೆಚ್ಚು ಪ್ರಮುಖವಾಗಿದೆ, ಆಗಸ್ಟ್ ತಿಂಗಳ ಸಂಗ್ರಹ ಕೇವಲ ಶೇಕಡಾ 6.5ರಷ್ಟು ಅಂದರೆ 1.50 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ಮರುಪಾವತಿಯಲ್ಲಿ ಶೇಕಡಾ 38 ರಷ್ಟು ಹೆಚ್ಚಳವಾಗಿದೆ. ಜುಲೈನಲ್ಲಿ, ನಿವ್ವಳ ಜಿಎಸ್ಟಿ ಸಂಗ್ರಹವು ಶೇಕಡಾ 14.14 ರಷ್ಟು ಹೆಚ್ಚಾಗಿದೆ.
2024ರ ಆರ್ಥಿಕ ವರ್ಷದಲ್ಲಿ, ಒಟ್ಟು ಸಂಗ್ರಹಣೆಗಳು ಶೇಕಡಾ 11.65 ರಷ್ಟು ಬೆಳೆದಿದ್ದರೆ, ಹಿಂದಿನ ವರ್ಷದಲ್ಲಿ, ಸಂಗ್ರಹಣೆಗಳು ಶೇಕಡಾ 21.5 ರಷ್ಟು ಏರಿಕೆಯಾಗಿದೆ. ಈ ವರ್ಷ ಆಗಸ್ಟ್ ವರೆಗೆ (ಏಪ್ರಿಲ್-ಆಗಸ್ಟ್ 2024), ಒಟ್ಟು ಜಿಎಸ್‌ಟಿ ಆದಾಯವು ಕೇವಲ 10ರಷ್ಟು ಮಾತ್ರ ಹೆಚ್ಚಳವಾಗಿದೆ.
ಜಿಎಸ್ ಟಿ ಸಂಗ್ರಹದಲ್ಲಿನ ಕುಸಿತವು ಆರ್ಥಿಕ ಚಟುವಟಿಕೆಗಳಲ್ಲಿ ಮಿತವಾಗಿರುವುದನ್ನು ಪ್ರತಿಬಿಂಬಿಸುತ್ತದೆ. ಇದು ಹಿಂದಿನ ವರ್ಷದ ಅವಧಿಯಲ್ಲಿ ಶೇಕಡಾ 8.2 ಕ್ಕೆ ಹೋಲಿಸಿದರೆ ಈ ವರ್ಷ ಶೇಕಡಾ 6.8ರಷ್ಟು ಕಡಿಮೆಯಾಗಿದೆ.
2024 ರಲ್ಲಿ ದೇಶೀಯ ವಹಿವಾಟುಗಳಿಂದ ಆದಾಯವು ಶೇಕಡಾ 9.2ರಿಂದ 1.25 ಲಕ್ಷ ಕೋಟಿಗೆ ಏರಿಕೆಯಾಗಿದೆ ಆದರೆ ಆಮದುಗಳಿಂದ ಆದಾಯವು ಶೇಕಡಾ 12ರಿಂದ 49,900 ಕೋಟಿ ರೂಪಾಯಿಗಳಿಗೆ ಹೆಚ್ಚಾಗಿದೆ, ಹೀಗಾಗಿ ಆಮದುಗಳು ತಿಂಗಳ ಒಟ್ಟು ಸಂಗ್ರಹಣೆಯ ಶೇಕಡಾ 28.5 ರಷ್ಟಿದೆ.
1.74 ಲಕ್ಷ ಕೋಟಿ ರೂಪಾಯಿ ಒಟ್ಟು ಸಂಗ್ರಹಣೆಯಲ್ಲಿ 30,862 ಕೋಟಿ ರೂಪಾಯಿ ಕೇಂದ್ರ ಜಿಎಸ್‌ಟಿ, 38,411 ಕೋಟಿ ರಾಜ್ಯ ಜಿಎಸ್‌ಟಿ ಮತ್ತು 93,621 ಕೋಟಿ ರೂಪಾಯಿ ಇಂಟಿಗ್ರೇಟೆಡ್ ಜಿಎಸ್‌ಟಿ ಎಂದು ಸಂಗ್ರಹಿಸಲಾಗಿದೆ. 12,068 ಕೋಟಿ ರೂಪಾಯಿ ಸೆಸ್ ಸಂಗ್ರಹವಾಗಿದೆ.
ತಮಿಳುನಾಡು (ಶೇ. 7), ಗುಜರಾತ್ (ಶೇ. 6), ಬಿಹಾರ (ಶೇ. 8), ರಾಜಸ್ಥಾನ (ಶೇ. 5) ಮತ್ತು ಪಶ್ಚಿಮ ಬಂಗಾಳ (ಶೇ. 6) ನಂತಹ ದೊಡ್ಡ ರಾಜ್ಯಗಳಲ್ಲಿ ಜಿಎಸ್‌ಟಿ ಆದಾಯದ ಬೆಳವಣಿಗೆ ಮಿತಿಯಲ್ಲಿದೆ. ಏಕ-ಅಂಕಿಯ ಬೆಳವಣಿಗೆಯನ್ನು ತೋರಿಸುತ್ತಿದೆ. ದೊಡ್ಡ ರಾಜ್ಯಗಳ ಪೈಕಿ ಆಂಧ್ರಪ್ರದೇಶ ಸಂಗ್ರಹಣೆಯಲ್ಲಿ ಶೇ 5ರಷ್ಟು ಕುಸಿತ ಕಂಡಿದೆ.
ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಹರಿಯಾಣದಂತಹ ದೊಡ್ಡ ರಾಜ್ಯಗಳ ಸಂಗ್ರಹಣೆಯಲ್ಲಿ ಮತ್ತೊಮ್ಮೆ ಎರಡಂಕಿಯ ಹೆಚ್ಚಳವನ್ನು ದಾಖಲಿಸುವ ಸಾಮರ್ಥ್ಯವು ಈ ರಾಜ್ಯಗಳಲ್ಲಿ ದೃಢವಾದ ಬಳಕೆಯನ್ನು ಸೂಚಿಸುತ್ತದೆ, ಗುಜರಾತ್, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಂತಹ ದೊಡ್ಡ ರಾಜ್ಯಗಳಲ್ಲಿ ಒಂದೇ ಅಂಕಿಯ ಹೆಚ್ಚಳವು ಈ ರಾಜ್ಯಗಳಲ್ಲಿನ ತೆರಿಗೆ ಅಧಿಕಾರಿಗಳ ಗಮನವನ್ನು ಸೆಳೆಯುತ್ತದೆ ಎಂದು ಡೆಲಾಯ್ಟ್‌ನ ಎಂಎಸ್ ಮಣಿ ಹೇಳುತ್ತಾರೆ.
Advertisement