ಬುಚ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಸೆಬಿ ಪ್ರಧಾನ ಕಚೇರಿಯಲ್ಲಿ SEBI ನೌಕರರ ಪ್ರತಿಭಟನೆ!

ಪ್ರಧಾನ ಕಚೇರಿಯ ಮುಂದೆ ಜಮಾಯಿಸಿದ ಸೆಬಿಯ ನೌಕರರು ಸುಮಾರು 90 ನಿಮಿಷಗಳ ಕಾಲ ಪ್ರತಿಭಟನೆ ನಡೆಸಿದರು. ಬುಚ್ ತನ್ನ ಅಧಿಕಾರಾವಧಿಯ ಅತ್ಯಂತ ಸವಾಲಿನ ಕ್ಷಣಗಳನ್ನು ಎದುರಿಸುತ್ತಿರುವ ಸಮಯದಲ್ಲೇ ಸಿಬ್ಬಂದಿ ಪ್ರತಿಭಟನೆಗಳು ಮತ್ತಷ್ಟು ಒತ್ತಡ ಹೆಚ್ಚಿಸಿದೆ.
ಮಾಧವಿ ಪುರಿ ಬುಚ್
ಮಾಧವಿ ಪುರಿ ಬುಚ್TNIE
Updated on

ಮುಂಬೈ: ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಅವರ ರಾಜೀನಾಮೆಗೆ ಒತ್ತಾಯಿಸಿ ಸೆಬಿಯ ಉದ್ಯೋಗಿಗಳು ಇಂದು ಪ್ರಧಾನ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.

ಮುಂಬೈನಲ್ಲಿರುವ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಕೇಂದ್ರ ಕಚೇರಿಯಲ್ಲಿ ಸೆಬಿ ಅಧ್ಯಕ್ಷ ಬುಚ್ ಮತ್ತು ಇತರ ಹಿರಿಯ ಅಧಿಕಾರಿಗಳ ಕಚೇರಿಗಳು ಇದೆ. ಹೀಗಾಗಿ ಕೇಂದ್ರ ಕಚೇರಿಯ ಹೊರಗೆ 200ಕ್ಕೂ ಹೆಚ್ಚು ಉದ್ಯೋಗಿಗಳು ಮೌನ ಪ್ರತಿಭಟನೆ ನಡೆಸಿದರು. ಆದರೆ ಪ್ರತಿಭಟನಾನಿರತ ಯಾವುದೇ ನೌಕರರು ಮಾಧ್ಯಮಗಳ ಜೊತೆ ಮಾತನಾಡಲಿಲ್ಲ. ಆದರೆ ಪ್ರತಿಭಟನಾಕಾರರು ಹಿಡಿದುಕೊಂಡಿದ್ದ ಕರಪತ್ರಗಳಲ್ಲಿ ಬುಚ್ ರಾಜೀನಾಮೆಗೆ ಒತ್ತಾಯಿಸಲಾಗಿದೆ. ಅಲ್ಲದೆ ಮಾರುಕಟ್ಟೆ ನಿಯಂತ್ರಣಾಧಿಕಾರಿ ಬುಧವಾರ ಹೊರಡಿಸಿರುವ ಪತ್ರಿಕಾ ಪ್ರಕಟಣೆಯನ್ನು ಹಿಂಪಡೆಯುವಂತೆಯೂ ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರಧಾನ ಕಚೇರಿಯ ಮುಂದೆ ಜಮಾಯಿಸಿದ ಸೆಬಿಯ ನೌಕರರು ಸುಮಾರು 90 ನಿಮಿಷಗಳ ಕಾಲ ಪ್ರತಿಭಟನೆ ನಡೆಸಿದರು. ಬುಚ್ ತನ್ನ ಅಧಿಕಾರಾವಧಿಯ ಅತ್ಯಂತ ಸವಾಲಿನ ಕ್ಷಣಗಳನ್ನು ಎದುರಿಸುತ್ತಿರುವ ಸಮಯದಲ್ಲೇ ಸಿಬ್ಬಂದಿ ಪ್ರತಿಭಟನೆಗಳು ಮತ್ತಷ್ಟು ಒತ್ತಡ ಹೆಚ್ಚಿಸಿದೆ. ಕಳೆದ ತಿಂಗಳು ಅಮೆರಿಕಾ ಮೂಲದ ಸಣ್ಣ ಮಾರಾಟಗಾರ ಹಿಂಡೆನ್‌ಬರ್ಗ್ ವರದಿಯಲ್ಲಿ ಬುಚ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಸ್ವ ಹಿತಾಸಕ್ತಿಯಿಂದಾಗಿ ಅದಾನಿ ಸಮೂಹದ ವಿರುದ್ಧದ ಆರೋಪಗಳ ತನಿಖೆ ನಿಧಾನಗತಿಯಲ್ಲಿದೆ ಎಂದು ಆರೋಪಿಸಲಾಗಿತ್ತು.

ಆದರೆ, ಸೆಬಿ ನೌಕರರು ಪ್ರತಿಭಟನೆ ನಡೆಸುತ್ತಿರುವುದು ಇದೇ ಮೊದಲಲ್ಲ. ಒಂದು ತಿಂಗಳ ಹಿಂದೆಯೂ ಕೆಲವು ನೌಕರರು ಇದೇ ರೀತಿ ಪ್ರತಿಭಟನೆ ನಡೆಸಿದ್ದರು. ಆ ಸಮಯದಲ್ಲಿ ಅಧಿಕಾರಿಗಳು ಕೆಲವು ಅಂಶಗಳಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಆದರೆ ಮಾನ್ಯತೆ ಪಡೆದ ನೌಕರರ ಸಂಘಟನೆಗಳು ಬೆಂಬಲಿಸಲಿಲ್ಲ ಎಂದು ಹೇಳಿದ್ದರು.

ಮಾಧವಿ ಪುರಿ ಬುಚ್
SEBI ಮುಖ್ಯಸ್ಥೆ ಮಾಧಬಿ ಬುಚ್ ಗೆ ನಿವೃತ್ತಿ ವೇತನ; ಸ್ಪಷ್ಟನೆ ಕೊಟ್ಟ ICICI ಬ್ಯಾಂಕ್ ಹೇಳಿದ್ದೇನು?

ಸಂಸ್ಥೆಯಲ್ಲಿನ 'ಅಹಿತರ' ಕೆಲಸದ ವಾತಾವರಣವನ್ನು ಆರೋಪಿಸಿ ಸುಮಾರು 500 ಸೆಬಿ ಉದ್ಯೋಗಿಗಳು ಉನ್ನತ ಆಡಳಿತದ ವಿರುದ್ಧ ಆಗಸ್ಟ್ 6ರಂದು ಹಣಕಾಸು ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಆ ಪತ್ರದಲ್ಲಿ ನೌಕರರು ಸಾರ್ವಜನಿಕವಾಗಿ ಅವಹೇಳನ ಮಾಡಿದ ಆರೋಪವನ್ನೂ ಮಾಡಿದ್ದರು. ಈ ಸಂಬಂಧ ಮಾಧ್ಯಮ ವರದಿಗಳು ಹೊರಬಂದ ನಂತರ, ಸೆಬಿ ಬುಧವಾರ ಈ ಹೇಳಿಕೆಗಳನ್ನು 'ಸುಳ್ಳು' ಎಂದು ಕರೆದಿತ್ತು. ಆಡಳಿತ ಮಂಡಳಿಯ ಈ ಧೋರಣೆಯಿಂದ ಆಕ್ರೋಶಿತ ನೌಕರರು ಗುರುವಾರ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವಾರದ ಆರಂಭದಲ್ಲಿ, ಬುಚ್ ಈ ಹಿಂದೆ ಕೆಲಸ ಮಾಡುತ್ತಿದ್ದ ಐಸಿಐಸಿಐ ಬ್ಯಾಂಕ್‌ನಿಂದ 16.8 ಕೋಟಿ ರೂ.ಗಳ ಮೊತ್ತದ ಗಮನಾರ್ಹ ಸಂಬಳ ಮತ್ತು ಇತರ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿತ್ತು. 2014ರಲ್ಲಿ ಬುಚ್ ನಿವೃತ್ತಿ ಹೊಂದಿದ ನಂತರವೂ ಈ ವೇತನ ಮುಂದುವರೆದಿತ್ತು. ಅಷ್ಟೇ ಅಲ್ಲ 2017ರಲ್ಲಿ ಸಂಪೂರ್ಣ ಸಮಯದ ನಿರ್ದೇಶಕರಾಗಿ SEBI ಗೆ ಸೇರಿದ ನಂತರವೂ ಇದು ಮುಂದುವರೆಯಿತು ಎಂದು ಕಾಂಗ್ರೆಸ್ ಆರೋಪಿಸಿತ್ತು. ಆದರೆ ಆರೋಪಗಳನ್ನು ICICI ನಿರಾಕರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com