ಎಲೆಕ್ಟ್ರಿಕ್ ಬೈಕ್ ಖರೀದಿಸುವ ಯೋಚನೆಯಲ್ಲಿದ್ದೀರಾ? ಹೊಸ ಸಬ್ಸಿಡಿಗಳು ಹಿಂದಿನ ಸ್ಕೀಮ್ ಗಿಂತ ಕಡಿಮೆ ಇರಬಹುದು, ಗಮನಿಸಿ!

ಕೇಂದ್ರದ ಹೊಸ ಎಲೆಕ್ಟ್ರಿಕ್ ವಾಹನ ಸಬ್ಸಿಡಿ ಯೋಜನೆಯು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆಯನ್ನ 10,000 ರೂ.ವರೆಗೆ ಕಡಿತಗೊಳಿಸುತ್ತದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಎಚ್ ಡಿ ಕುಮಾರಸ್ವಾಮಿ-ನರೇಂದ್ರ ಮೋದಿ
ಎಚ್ ಡಿ ಕುಮಾರಸ್ವಾಮಿ-ನರೇಂದ್ರ ಮೋದಿTNIE
Updated on

ನವದೆಹಲಿ: ಕೇಂದ್ರದ ಹೊಸ ಎಲೆಕ್ಟ್ರಿಕ್ ವಾಹನ ಸಬ್ಸಿಡಿ ಯೋಜನೆಯು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಲೆಯನ್ನ 10,000 ರೂ.ವರೆಗೆ ಕಡಿತಗೊಳಿಸುತ್ತದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. ಇಂದು ನಡೆದ SIAM ಕಾರ್ಯಕ್ರಮವೊಂದರಲ್ಲಿ, ಹೊಸ ಯೋಜನೆಯು ಇ-ಬೈಕ್‌ಗಳು ಮತ್ತು ಇ-ಸ್ಕೂಟರ್‌ಗಳ ಬೆಲೆಯನ್ನು ರೂ 10,000/ಯುನಿಟ್‌ವರೆಗೆ ಕಡಿಮೆ ಮಾಡುತ್ತದೆ ಎಂದು ಹೇಳಿದರು.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಹೊಸ ಯೋಜನೆಯಡಿಯಲ್ಲಿ ಸಬ್ಸಿಡಿಯನ್ನು ಬ್ಯಾಟರಿ ಶಕ್ತಿಯ ಆಧಾರದ ಮೇಲೆ ಪ್ರತಿ ಕಿಲೋವ್ಯಾಟ್ ಗಂಟೆಗೆ 5,000 ರೂ.ಗೆ ನಿಗದಿಪಡಿಸಲಾಗಿದೆ. ಆದರೆ ಒಟ್ಟಾರೆ ಸಬ್ಸಿಡಿ ಮೊದಲ ವರ್ಷದಲ್ಲಿ 10,000 ರೂಪಾಯಿಗಳನ್ನು ಮೀರುವುದಿಲ್ಲ ಎಂದು ಕೇಂದ್ರ ಭಾರೀ ಕೈಗಾರಿಕೆಗಳ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಎರಡನೇ ವರ್ಷದಲ್ಲಿ, ಪ್ರತಿ ಕಿಲೋವ್ಯಾಟ್ ಗಂಟೆಗೆ 2,500 ರೂ.ಗಳಷ್ಟು ಅರ್ಧದಷ್ಟು ಕಡಿಮೆಗೊಳಿಸಲಾಗುವುದು ಮತ್ತು ಒಟ್ಟಾರೆ ಲಾಭವು 5,000 ರೂಗಳನ್ನು ಮೀರುವುದಿಲ್ಲ ಎಂದು ಅವರು ಹೇಳಿದರು. ಇದಕ್ಕೂ ಮುನ್ನ ಇ-ಬೈಕ್‌ಗಳಿಗೆ 15 ಸಾವಿರ ಸಬ್ಸಿಡಿ ನೀಡಲಾಗಿತ್ತು.

ಎಲೆಕ್ಟ್ರಿಕ್ ಬಸ್‌ಗಳ ಸಬ್ಸಿಡಿ ಮೊತ್ತ ನಿಗದಿಯಾಗಿಲ್ಲ!

ಎಲೆಕ್ಟ್ರಿಕ್ ಬಸ್‌ಗಳ ಸಬ್ಸಿಡಿ ಮೊತ್ತದ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ. PM ಎಲೆಕ್ಟ್ರಿಕ್ ಡ್ರೈವ್ ಕ್ರಾಂತಿಯಲ್ಲಿ ನವೀನ ವಾಹನ ವರ್ಧನೆ (PM ಇ-ಡ್ರೈವ್) ಯೋಜನೆಯು ವಿಶ್ವದ ಮೂರನೇ ಅತಿದೊಡ್ಡ ವಾಹನ ಉದ್ಯಮದಲ್ಲಿ ವಿದ್ಯುತ್ ಚಲನಶೀಲತೆಯ ಅಳವಡಿಕೆಯನ್ನು ಹೆಚ್ಚಿಸುವ ಮತ್ತೊಂದು ಪ್ರಯತ್ನವಾಗಿದೆ. ಯೋಜನೆಯ ಅಂತ್ಯದ ವೇಳೆಗೆ ದ್ವಿಚಕ್ರ ವಾಹನ ವಿಭಾಗದಲ್ಲಿ ಶೇ.10ರಷ್ಟು ಇವಿ ಹೆಚ್ಚಳ ಮತ್ತು ತ್ರಿಚಕ್ರ ವಾಹನ ವಿಭಾಗದಲ್ಲಿ ಶೇ.15ರಷ್ಟು ಇವಿ ಸಂಪರ್ಕ ಸಾಧಿಸುವ ಗುರಿ ಹೊಂದಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಎಚ್ ಡಿ ಕುಮಾರಸ್ವಾಮಿ-ನರೇಂದ್ರ ಮೋದಿ
ಎಲೆಕ್ಟ್ರಿಕ್ ವಾಹನ ತಯಾರಕರಿಗೆ ಇನ್ನು ಮುಂದೆ ಸರ್ಕಾರದ ಸಬ್ಸಿಡಿ ಅಗತ್ಯವಿಲ್ಲ: ಗಡ್ಕರಿ

PM ಇ-ಡ್ರೈವ್‌ನಲ್ಲಿ ಕಾರನ್ನು ಏಕೆ ಸೇರಿಸಲಾಗಿಲ್ಲ?

ಈ ಯೋಜನೆಯಲ್ಲಿ ಎಲೆಕ್ಟ್ರಿಕ್ ಕಾರುಗಳು ಮತ್ತು ಹೈಬ್ರಿಡ್ ವಾಹನಗಳನ್ನು ಸೇರಿಸಲಾಗಿಲ್ಲ ಎಂದು ಕೇಂದ್ರ ಸಚಿವರು ಹೇಳಿದರು. PM ಇ-ಡ್ರೈವ್‌ನಲ್ಲಿ ಪ್ರಯಾಣಿಕರ EV ಗಳನ್ನು ಸೇರಿಸದಿರುವ ಹಿಂದಿನ ತಾರ್ಕಿಕತೆಯನ್ನು ವಿವರಿಸಿದ ಸಚಿವರು, ಎಲೆಕ್ಟ್ರಿಕ್ ಕಾರುಗಳಿಗೆ ಈಗಾಗಲೇ ಶೇಕಡ 5% ರಷ್ಟು ಕಡಿಮೆ GST ಸ್ಲ್ಯಾಬ್‌ನಲ್ಲಿ ತೆರಿಗೆ ವಿಧಿಸಲಾಗುತ್ತಿದೆ ಎಂದು ಹೇಳಿದರು. ಇದಲ್ಲದೇ ಆಟೋ ಪಿಎಲ್‌ಐ ಯೋಜನೆಯಡಿಯೂ ಪ್ರಯೋಜನಗಳು ದೊರೆಯುತ್ತವೆ ಎಂದರು.

ಯಾವ ವಿಭಾಗದಲ್ಲಿ ಎಷ್ಟು ಪರಿಹಾರ?

ಎರಡು ವರ್ಷಗಳಲ್ಲಿ ಒಟ್ಟಾರೆ 10,900 ಕೋಟಿ ರೂ.ಗಳ ವೆಚ್ಚದೊಂದಿಗೆ, ಯೋಜನೆಯು 24.79 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, 3.16 ಲಕ್ಷ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು ಮತ್ತು 14,028 ಎಲೆಕ್ಟ್ರಿಕ್ ಬಸ್‌ಗಳನ್ನು ಬೆಂಬಲಿಸುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

* ಶೇಕಡ 40ರಷ್ಟು ಮೊತ್ತವನ್ನು (4,391 ಕೋಟಿ ರೂ.) ಎಲೆಕ್ಟ್ರಿಕ್ ಬಸ್‌ಗಳಿಗೆ ಮೀಸಲಿಡಲಾಗಿದೆ.

* ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ 1,772 ಕೋಟಿ ರೂ.

* ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳಿಗೆ 907 ಕೋಟಿ ರೂ.

* ಹೆಚ್ಚುವರಿಯಾಗಿ, ಹೈಬ್ರಿಡ್ ಆಂಬ್ಯುಲೆನ್ಸ್‌ಗಳಿಗೆ 500 ಕೋಟಿ ರೂ.

ಯೋಜನೆಯ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು, ಭಾರೀ ಕೈಗಾರಿಕೆ ಸಚಿವಾಲಯವು EV ಖರೀದಿದಾರರಿಗೆ ಇ-ವೋಚರ್‌ಗಳನ್ನು ನೀಡುತ್ತದೆ. ವಾಹನವನ್ನು ಖರೀದಿಸುವ ಸಮಯದಲ್ಲಿ, ಸ್ಕೀಮ್ ಪೋರ್ಟಲ್‌ನಲ್ಲಿ ಖರೀದಿದಾರರಿಗೆ ಆಧಾರ್ ದೃಢೀಕೃತ ಇ-ವೋಚರ್‌ಗಳನ್ನು ರಚಿಸಲಾಗುತ್ತದೆ. ಡೀಲರ್‌ಶಿಪ್‌ನಿಂದ ಖರೀದಿದಾರರಿಗೆ ನೀಡುತ್ತಿರುವ ಸಬ್ಸಿಡಿಯಲ್ಲಿ ಯಾವುದೇ 'ಸೋರಿಕೆ' ಇಲ್ಲ ಎಂದು ಈ ವೋಚರ್ ಖಚಿತಪಡಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com