ಕಂಟೈನರ್‌ಗಳಿಗೆ ಬೇಡಿಕೆ ಕಡಿಮೆ ಹಾಗೂ ಹೆಚ್ಚುತ್ತಿರುವ ಆರ್ಥಿಕ ನಷ್ಟದ ನಂತರ ಟಪ್ಪರ್‌ವೇರ್ ಅಧ್ಯಾಯ 11 ದಿವಾಳಿತನದ ರಕ್ಷಣೆಗಾಗಿ ಅರ್ಜಿ ಸಲ್ಲಿಸಿದೆ. ಕೋವಿಡ್ ಸಮಯದಲ್ಲಿ ಬೇಡಿಕೆಯಲ್ಲಿ ಅಲ್ಪಾವಧಿಯ ಏರಿಕೆ ಕಂಡಿದ್ದರೂ ಆ ನಂತರ ತೊಂದರೆಗಳು ಮತ್ತೆ ಕಾಣಿಸಿಕೊಂಡಿದ್ದವು. ಟಪ್ಪರ್‌ವೇರ್‌ನ ವರ್ಣರಂಜಿತ, ಗಾಳಿಯಾಡದ ಪ್ಲಾಸ್ಟಿಕ್ ಕಂಟೇನರ್‌ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಆದರೆ ಸಾಂಕ್ರಾಮಿಕ ನಂತರದ ಬೆಲೆ ಏರಿಕೆ ಪರಿಣಾಮಗಳು, ಪ್ಲಾಸ್ಟಿಕ್ ಕಚ್ಚಾ ವಸ್ತುಗಳು, ಕಾರ್ಮಿಕರು ಮತ್ತು ಸರಕು ಸಾಗಣೆ ಸಮಸ್ಯೆಗಳು ಟಪ್ಪರ್‌ವೇರ್‌ನ ಲಾಭಕ್ಕೆ ಮತ್ತಷ್ಟು ಹೊಡೆತ ನೀಡಿತ್ತು.
ಕಳೆದ ಕೆಲವು ವರ್ಷಗಳಿಂದ ಸವಾಲಿನ ಸ್ಥೂಲ ಆರ್ಥಿಕ ವಾತಾವರಣದಿಂದ ಕಂಪನಿಯ ಆರ್ಥಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಸಿಇಒ ಲಾರಿ ಗೋಲ್ಡ್‌ಮನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಟಪ್ಪರ್‌ವೇರ್ ಸಾಲದ ಸುಳಿಗೆ ಸಿಕ್ಕ ನಂತರ ದಿವಾಳಿತನಕ್ಕೆ ಅರ್ಜಿ ಸಲ್ಲಿಸಲು ಯೋಜಿಸಿದ್ದು ಕಾನೂನು ಮತ್ತು ಆರ್ಥಿಕ ಸಲಹೆಗಾರರನ್ನು ನೇಮಿಸಿಕೊಂಡಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಕಂಪನಿಯು 500 ಮಿಲಿಯನ್ ಡಾಲರ್ ಮತ್ತು 1 ಶತಕೋಟಿ ಡಾಲರ್ ನಡುವಿನ ಅಂದಾಜು ಆಸ್ತಿಗಳನ್ನು ಮತ್ತು 1 ಶತಕೋಟಿ ಡಾಲರ್ ಮತ್ತು 10 ಶತಕೋಟಿ ಡಾಲರ್ ನಡುವಿನ ಅಂದಾಜು ಹೊಣೆಗಾರಿಕೆಗಳನ್ನು ಅಮೆರಿಕಾ ದಿವಾಳಿತನ ನ್ಯಾಯಾಲಯದಲ್ಲಿ ಸಲ್ಲಿಸಿದೆ. ಡೆಲವೇರ್, ಸಾಲಗಾರರ ಸಂಖ್ಯೆ 50,001ರಿಂದ 100,000 ಆಗಿದೆ. Tupperware ಕಳೆದ ನಾಲ್ಕು ವರ್ಷಗಳಲ್ಲಿ ತನ್ನ ವ್ಯವಹಾರವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದೆ. ಆದರೆ 2021ರ ಮೂರನೇ ತ್ರೈಮಾಸಿಕದಿಂದ ಪ್ರಾರಂಭವಾಗುವ ಸತತ ಆರು ತ್ರೈಮಾಸಿಕ ಮಾರಾಟ ಕುಸಿತವನ್ನು ಅನುಭವಿಸಿದ ನಂತರ ಅದು ಹೋರಾಟವನ್ನು ಮುಂದುವರೆಸಿದೆ. ಅಧಿಕ ಹಣದುಬ್ಬರವು ಅದರ ಕಡಿಮೆ ಮತ್ತು ಮಧ್ಯಮ-ಆದಾಯದ ಗ್ರಾಹಕರ ನೆಲೆಯನ್ನು ನಿರುತ್ಸಾಹಗೊಳಿಸಿದೆ.
2023ರಲ್ಲಿ ಕಂಪನಿಯು ತನ್ನ ಸಾಲದ ಬಾಧ್ಯತೆಗಳನ್ನು ಪುನರ್ರಚಿಸಲು ತನ್ನ ಸಾಲಗಾರರೊಂದಿಗೆ ಒಪ್ಪಂದಕ್ಕೆ ಬಂದಿತು. ಕಾರ್ಯತಂತ್ರದ ಪರ್ಯಾಯಗಳನ್ನು ಅನ್ವೇಷಿಸಲು ಸಹಾಯ ಮಾಡಲು ಹೂಡಿಕೆ ಬ್ಯಾಂಕ್ ಮೊಯೆಲಿಸ್ ಮತ್ತು ಕೋ ಅನ್ನು ತಂದಿತು. ಕಂಪನಿಯು ತನ್ನ 700 ಮಿಲಿಯನ್ ಡಾಲರ್ ಸಾಲವನ್ನು ನಿರ್ವಹಿಸಲು ಸುದೀರ್ಘ ಮಾತುಕತೆಗಳ ನಂತರ ಕಾನೂನು ಮತ್ತು ಆರ್ಥಿಕ ಸಲಹೆಗಾರರನ್ನು ನೇಮಿಸಿದೆ ಎಂದು ಇತ್ತೀಚೆಗೆ ಬಹಿರಂಗಪಡಿಸಿತು. ಬ್ಲೂಮ್‌ಬರ್ಗ್ ನ್ಯೂಸ್ ವರದಿಯ ಪ್ರಕಾರ, ಟಪ್ಪರ್‌ವೇರ್ ತನ್ನ ಸಾಲದ ನಿಯಮಗಳನ್ನು ಉಲ್ಲಂಘಿಸಿದೆ. ಈ ಕಾರಣದಿಂದಾಗಿ ಕಂಪನಿಯು ನ್ಯಾಯಾಲಯದ ರಕ್ಷಣೆಯನ್ನು ಯೋಜಿಸಿದೆ. ವರದಿಯ ಪ್ರಕಾರ, ಕಂಪನಿಯ ಆರ್ಥಿಕ ಸ್ಥಿತಿ ಅತ್ಯಂತ ಗಂಭೀರವಾಗಿದೆ ಮತ್ತು ಅದರ ಷೇರುಗಳಲ್ಲಿ ಶೇಕಡ 57ರಷ್ಟು ಭಾರಿ ಕುಸಿತ ಕಂಡುಬಂದಿದೆ.
Advertisement