
ನವದೆಹಲಿ: ಕೆಲವು ದಿನಗಳಿಂದ ಒಂದೇ ಸಮನೇ ಏರುತ್ತಿದ್ದ ಚಿನ್ನಾಭರಣ ಬೆಲೆಯಲ್ಲಿ ಸ್ವಲ್ಪ ತಗ್ಗಿದೆ. ದಾಸ್ತಾನುಗಾರರಿಂದ ನಿರಂತರ ಮಾರಾಟದಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ರೂ. 300 ಅಷ್ಟು ಕಡಿಮೆಯಾಗಿದೆ ಎಂದು ಅಖಿಲ ಭಾರತ ಸರಾಪ ಅಸೋಸಿಯೇಷನ್ ಹೇಳಿದೆ.
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ₹99,970 ಆಗಿದೆ. ನಿನ್ನೆ ಇದು ₹1,00,180 ಆಗಿತ್ತು. 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ₹91,650 ಆಗಿದೆ. ನಿನ್ನೆ ಇದು ₹91,850 ಆಗಿತ್ತು.
ಬೆಳ್ಳಿಯಲ್ಲಿಯೂ ಬೆಲೆ ಕಡಿಮೆಯಾಗಿದೆ. ಶುಕ್ರವಾರ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ ರೂ. 2,500 ಕಡಿಮೆಯಾಗಿದ್ದು, ರೂ. 1,09,500 ಆಗಿದೆ. ಗುರುವಾರ ಒಂದು ಕೆಜಿ ಚಿನ್ನದ ಬೆಲೆ ರೂ.1,12,00 ಆಗಿತ್ತು.
ಬೆಂಗಳೂರಿನಲ್ಲಿ ಇಂದು 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ ರೂ. 99, 820 ಆಗಿದೆ. ಗುರುವಾರ ರೂ. 1,00,030 ಆಗಿತ್ತು. ಒಟ್ಟಾರೇ ರೂ. 210 ಕಡಿಮೆ ಆಗಿದೆ. ಇನ್ನೂ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ರೂ. 91,500 ಆಗಿದೆ. ನಿನ್ನೆ 91.700 ಆಗಿತ್ತು. 18 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ ರೂ. 74,870 ಆಗಿದೆ. ನಿನ್ನೆ ದಿನ ಇದು ರೂ. 75, 030 ಆಗಿತ್ತು.
Advertisement