RBI Governor Sanjay Malhotra
ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ(FILE Photo | ANI)

Repo Rate ಶೇ. 5.5 ಯಥಾಸ್ಥಿತಿ ಮುಂದುವರಿಕೆ, GDP ಬೆಲವಣಿಗೆ ಶೇ. 6.5: RBI ವಿತ್ತೀಯ ನೀತಿ ಪ್ರಕಟ

ನಿರೀಕ್ಷೆಗಳಿಗೆ ಅನುಗುಣವಾಗಿ ಪ್ರಮುಖ ಹಣದುಬ್ಬರವು ಶೇಕಡಾ 4ರಲ್ಲಿ ಸ್ಥಿರವಾಗಿದೆ. ಎಂಪಿಸಿ ತನ್ನ ಜೂನ್ ನೀತಿ ಪರಿಶೀಲನೆಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ 50 ಬೇಸಿಸ್ ಪಾಯಿಂಟ್ ದರ ಹೆಚ್ಚಳವನ್ನು ಘೋಷಿಸಿತ್ತು.
Published on

ಚೆನ್ನೈ: ಭಾರತೀಯ ರಿಸರ್ವ್ ಬ್ಯಾಂಕಿನ(Reserve Bank Of India) ಹಣಕಾಸು ನೀತಿ ಸಮಿತಿ (MPC) ಬುಧವಾರ ಪ್ರಮುಖ ರೆಪೊ ದರವನ್ನು ಶೇಕಡಾ 5.5ರಲ್ಲಿ ಯಥಾಸ್ಥಿತಿಯಲ್ಲಿ ಇರಿಸಿದೆ. ಅಮೆರಿಕದೊಂದಿಗೆ ನಡೆಯುತ್ತಿರುವ ವ್ಯಾಪಾರ ಮತ್ತು ಸುಂಕ ವಿವಾದದ ಬಗ್ಗೆ ಅನಿಶ್ಚಿತತೆಯ ನಡುವೆಯೂ ತನ್ನ ತಟಸ್ಥ ನೀತಿ ನಿಲುವನ್ನು ಆರ್ ಬಿಐ ಕಾಯ್ದುಕೊಂಡಿದೆ.

ತನ್ನ ತ್ರೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಕೇಂದ್ರ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 6.5ರಲ್ಲಿಯೇ ಉಳಿಸಿಕೊಳ್ಳಲಿದೆ ಎಂದು ಹೇಳಿದರು, ಅಪಾಯಗಳು ಸಮವಾಗಿ ಸಮತೋಲನದಲ್ಲಿರುತ್ತವೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತವೆ ಎಂದರು.

ನಿರೀಕ್ಷೆಗಳಿಗೆ ಅನುಗುಣವಾಗಿ ಪ್ರಮುಖ ಹಣದುಬ್ಬರವು ಶೇಕಡಾ 4ರಲ್ಲಿ ಸ್ಥಿರವಾಗಿದೆ. ಎಂಪಿಸಿ ತನ್ನ ಜೂನ್ ನೀತಿ ಪರಿಶೀಲನೆಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ 50 ಬೇಸಿಸ್ ಪಾಯಿಂಟ್ ದರ ಹೆಚ್ಚಳವನ್ನು ಘೋಷಿಸಿತ್ತು.

ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಸಂಜಯ್ ಮಲ್ಹೋತ್ರಾ ಪ್ರಸಕ್ತ ಆರ್ಥಿಕ ವರ್ಷದ ಮೂರನೇ ದ್ವೈಮಾಸಿಕ ಆರ್ಥಿಕ ನೀತಿಯನ್ನು ಇಂದು ಘೋಷಿಸಿದ್ದಾರೆ. ಆರು ಸದಸ್ಯರ ಹಣಕಾಸು ಸಮಿತಿ ಆರ್ಥಿಕ ವರ್ಷ 2026ರ ಮೂರನೇ ದ್ವೈಮಾಸಿಕ ನೀತಿಯನ್ನು ಪ್ರಕಟಿಸಿದೆ.

RBI Governor Sanjay Malhotra
'ಭಾರತ ಒಳ್ಳೆಯ ವ್ಯಾಪಾರ ಪಾಲುದಾರನಲ್ಲ': ಮುಂದಿನ 24 ಗಂಟೆಗಳಲ್ಲಿ ಹೆಚ್ಚುವರಿ ಸುಂಕ; ಟ್ರಂಪ್ ಬೆದರಿಕೆ!

ಭಾರತದ ಆಮದುಗಳ ಮೇಲೆ ಶೇ. 25ರಷ್ಟು ಅಮೆರಿಕಾದ ಸುಂಕದ ನಿರ್ಧಾರ, ಆಗಸ್ಟ್ ಏಳರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ. ರಷ್ಯಾ ಜೊತೆಗಿನ ವ್ಯವಹಾರವನ್ನು ಮುಂದುವರಿಸಿಕೊಂಡು ಹೋಗುವ ಭಾರತದ ನಿರ್ಧಾರದಿಂದಾಗಿ, ಇನ್ನಷ್ಟು ಹೆಚ್ಚುವರಿ ಸುಂಕವನ್ನು ವಿಧಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ರೆಪೊ ದರ ಶೇ. 5.5ರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

ರೆಪೊ ದರ

ವಾಣಿಜ್ಯ ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ನಿಂದ ಹಣವನ್ನು ಪಡೆದಾಗ, ವಿಧಿಸುವ ಬಡ್ಡಿದರವನ್ನು ರೆಪೊ ದರ ಎಂದು ಕರೆಯಲಾಗುತ್ತದೆ. ಬ್ಯಾಂಕುಗಳು, ತಮ್ಮ ಹೆಚ್ಚುವರಿ ಹಣವನ್ನು ಠೇವಣಿ ಮಾಡಿದಾಗ ನೀಡುವ ಬಡ್ಡಿದರಕ್ಕೆ ರಿವರ್ಸ್ ರೆಪೊ ದರ ಎನ್ನಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com