
ಮುಂಬೈ: ಖಾಸಗಿ ವಲಯದ ಎರಡನೇ ಅತಿದೊಡ್ಡ ಬ್ಯಾಂಕ್ ಆಗಿರುವ ಐಸಿಐಸಿಐ ಬ್ಯಾಂಕ್, ಗ್ರಾಹಕರ ಕನಿಷ್ಠ ಸರಾಸರಿ ಮಾಸಿಕ ಬ್ಯಾಲೆನ್ಸ್ ನ್ನು ಐದು ಪಟ್ಟು ಹೆಚ್ಚಳ ಮಾಡಿದೆ. ಈ ತಿಂಗಳಿನಿಂದ ತೆರೆಯಲಾದ ಹೊಸ ಉಳಿತಾಯ ಖಾತೆಗಳಿಗೆ (ವೇತನರಹಿತ) ಮಾತ್ರ ಇದು ಅನ್ವಯಿಸುತ್ತದೆ, ಮಹಾನಗರಗಳಲ್ಲಿ 10,000 ರೂಪಾಯಿಗಳಿಂದ 50,000 ರೂಪಾಯಿಗೆ ಏರಿಕೆಯಾಗಿದೆ ಮತ್ತು ಮಹಾನಗರಗಳಲ್ಲದ ಇತರ ನಗರಗಳಲ್ಲಿ 5,000 ರೂಪಾಯಿಗಳಿಂದ 25,000 ರೂಪಾಯಿಗಳಿಗೆ ಏರಿಕೆಯಾಗಿದೆ.
ಅಗತ್ಯವಿರುವ ಬ್ಯಾಲೆನ್ಸ್ ನ್ನು ನಿರ್ವಹಿಸದಿದ್ದರೆ ಅಗತ್ಯವಿರುವ ಬ್ಯಾಲೆನ್ಸ್ ಕೊರತೆಯ ಶೇಕಡಾ 6 ಅಥವಾ 500 ರೂಪಾಯಿ ಯಾವುದು ಕಡಿಮೆಯೋ ಅದು ಅನ್ವಯವಾಗುವಂತೆ ದಂಡ ವಿಧಿಸಲಾಗುತ್ತದೆ.
ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚಿನ ಸಾರ್ವಜನಿಕ ವಲಯದ ಬ್ಯಾಂಕುಗಳು ಈ ಷರತ್ತನ್ನು ಮನ್ನಾ ಮಾಡಿದ್ದರೂ ಸಹ ಈ ಶುಲ್ಕಗಳನ್ನು ವಿಧಿಸಲಾಗುತ್ತದೆ. ವಾಸ್ತವವಾಗಿ, ಎಸ್‌ಬಿಐ 2020 ರಿಂದ ಈ ನಿಯಮ ಅಳವಡಿಸಿಕೊಂಡಿತ್ತು.
ಗ್ರಾಮೀಣ ಶಾಖೆಗಳಲ್ಲಿ ಈ ತಿಂಗಳಿನಿಂದ ತೆರೆಯಲಾದ ಹೊಸ ಉಳಿತಾಯ ಖಾತೆಗಳಿಗೆ ಬ್ಯಾಲೆನ್ಸ್ ಅವಶ್ಯಕತೆ ಹಿಂದೆ ಇದ್ದ 2,500 ರೂಪಾಯಿಗೆ ಹೋಲಿಸಿದರೆ 10,000 ರೂಪಾಯಿ ಆಗಿದೆ. ಬಡ್ಡಿದರವು ವಾರ್ಷಿಕ ಕನಿಷ್ಠ 2.5 ಪ್ರತಿಶತದಲ್ಲಿ ಬದಲಾಗದೆ ಉಳಿದಿದೆ, ಇದು ಎಸ್‌ಬಿಐನ 2.25 ಪ್ರತಿಶತ ದರದ ನಂತರ ಉದ್ಯಮದಲ್ಲಿ ಅತ್ಯಂತ ಕಡಿಮೆ ದರಗಳಲ್ಲಿ ಒಂದಾಗಿದೆ ಎಂದು ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಆದಾಗ್ಯೂ, ಐಸಿಐಸಿಐ ಬ್ಯಾಂಕಿನ ಹೊಸ ಖಾತೆದಾರರು ಉಚಿತ ಐಎಂಪಿಎಸ್ ವಹಿವಾಟುಗಳು ಮತ್ತು ಉಚಿತ ಚೆಕ್ ಪುಸ್ತಕಗಳಂತಹ ಕೆಲವು ಶುಲ್ಕ ವಿನಾಯಿತಿಗಳನ್ನು ಪಡೆಯುತ್ತಾರೆ. ನಗದು ವಹಿವಾಟುಗಳಿಗಾಗಿ ಬ್ಯಾಂಕ್ ತನ್ನ ಸೇವಾ ಶುಲ್ಕಗಳನ್ನು ಸಹ ಪರಿಷ್ಕರಿಸಿದೆ. ಶಾಖೆಗಳಲ್ಲಿ ನಗದು ಠೇವಣಿಗಳು ಮತ್ತು ನಗದು ಮರುಬಳಕೆ ಯಂತ್ರಗಳಿಗೆ, ಒಬ್ಬ ಗ್ರಾಹಕನಿಗೆ ತಿಂಗಳಿಗೆ ಮೂರು ಉಚಿತ ವಹಿವಾಟುಗಳನ್ನು ನಡೆಸಲಾಗುತ್ತದೆ.
ಪ್ರತಿ ವಹಿವಾಟಿಗೆ 150 ರೂಪಾಯಿ ವಿಧಿಸಲಾಗುತ್ತದೆ. 1 ಲಕ್ಷ ರೂಪಾಯಿಗಳ ಸಂಚಿತ ಮಾಸಿಕ ಮೌಲ್ಯದ ಮಿತಿಯನ್ನು ಶುಲ್ಕಗಳಿಲ್ಲದೆ ಲಭ್ಯವಿದೆ, ಅದನ್ನು ಮೀರಿ ಪ್ರತಿ 1,000 ರೂಪಾಯಿಗೆ 3.5 ರೂಪಾಯಿ ಅಥವಾ 150 ರೂಪಾಯಿ - ಯಾವುದು ಹೆಚ್ಚೋ ಅದು ಅನ್ವಯಿಸುತ್ತದೆ. ಮೂರನೇ ವ್ಯಕ್ತಿಯ ನಗದು ಠೇವಣಿಗಳನ್ನು ಪ್ರತಿ ವಹಿವಾಟಿಗೆ ರೂ 25,000 ಕ್ಕೆ ಮಿತಿಗೊಳಿಸಲಾಗಿದೆ.
ಶಾಖೆಗಳಲ್ಲಿ ನಗದು ಹಿಂಪಡೆಯುವಿಕೆಗಳು-ಮೂರು ಉಚಿತ ಮಾಸಿಕ ವಹಿವಾಟುಗಳು, ಪ್ರತಿ ಹೆಚ್ಚುವರಿ ವಹಿವಾಟಿಗೆ ರೂ 150 ಮತ್ತು ಉಚಿತ ಸಂಚಿತ ಮಾಸಿಕ ಮಿತಿ ರೂ 1 ಲಕ್ಷ. ಈ ಮಿತಿಯನ್ನು ಮೀರಿದ ಶುಲ್ಕಗಳು ಪ್ರತಿ 1,000 ರೂಪಾಯಿಗೆ 3.5 ರೂಪಾಯಿ ಅಥವಾ 150 ರೂಪಾಯಿ, ಮೂರನೇ ವ್ಯಕ್ತಿಯಿಂದ ಹಣ ಹಿಂಪಡೆಯುವ ಮಿತಿಯನ್ನು ಇದೇ ರೀತಿ ಪ್ರತಿ ವಹಿವಾಟಿಗೆ 25,000 ರೂಪಾಯಿಗೆ ಸೀಮಿತಗೊಳಿಸಲಾಗಿದೆ ಎಂದು ಐಸಿಐಸಿಐ ಬ್ಯಾಂಕ್ ಪ್ರಕಟಣೆ ತಿಳಿಸಿದೆ.
ಬ್ಯಾಂಕಿನ ಕಾರ್ಯ ಅವಧಿ ಮುಗಿನ ನಂತರ (ಸಂಜೆ 4.30 ರಿಂದ ಬೆಳಿಗ್ಗೆ 9 ರವರೆಗೆ) ಮತ್ತು ರಜಾದಿನಗಳಲ್ಲಿ ನಗದು ಯಂತ್ರಗಳು ಅಥವಾ ನಗದು ಮರುಬಳಕೆ ಯಂತ್ರಗಳ ಮೂಲಕ ಮಾಡಿದ ಠೇವಣಿಗಳು ಒಂದು ತಿಂಗಳಲ್ಲಿ ಒಟ್ಟು 10,000 ರೂಪಾಯಿ ಮೀರಿದರೆ ಪ್ರತಿ ವಹಿವಾಟಿಗೆ 50ರೂಪಾಯಿಯಷ್ಟಾಗುತ್ತದೆ.
ಮುಂಬೈ, ದೆಹಲಿ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ಆರು ಮಹಾನಗರಗಳಲ್ಲಿ ಐಸಿಐಸಿಐ ಬ್ಯಾಂಕ್ ಅಲ್ಲದ ಎಟಿಎಂ ಯಂತ್ರಗಳಲ್ಲಿ ಎಟಿಎಂ ವಹಿವಾಟುಗಳಿಗೆ, ಮೊದಲ ಮೂರು ಮಾಸಿಕ ವಹಿವಾಟುಗಳ ನಂತರ ಬ್ಯಾಂಕ್ ಪ್ರತಿ ಹಣಕಾಸು ವಹಿವಾಟಿಗೆ 23 ರೂಪಾಯಿ ಮತ್ತು ಹಣಕಾಸುಯೇತರ ವಹಿವಾಟಿಗೆ 8.5 ರೂಪಾಯಿ ಶುಲ್ಕ ವಿಧಿಸುತ್ತದೆ.
Advertisement