World Beer Awards 2025: ನಾಲ್ಕು ಪ್ರಶಸ್ತಿ ಗೆದ್ದ ಕಿಂಗ್‌ಫಿಶರ್
ಬೆಂಗಳೂರು: ಹೈನೆಕೆನ್ ಕಂಪನಿಯ ಭಾಗವಾಗಿರುವ, ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್(ಯುಬಿಎಲ್)ನ ಭಾರತದ ಐಕಾನಿಕ್ ಬಿಯರ್ ಕಿಂಗ್‌ಫಿಶರ್, ವರ್ಲ್ಡ್ ಬಿಯರ್ ಪ್ರಶಸ್ತಿ 2025ರಲ್ಲಿ ಒಟ್ಟು ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದೆ.
ಈ ವರ್ಷದ ಪ್ರಶಸ್ತಿಗಳಲ್ಲಿ, ಕಿಂಗ್‌ಫಿಷರ್ ಅಲ್ಟ್ರಾ ಅಂತರರಾಷ್ಟ್ರೀಯ ಲಾಗರ್‌ನಲ್ಲಿ ಗೋಲ್ಡ್ ಕಂಟ್ರಿ ವಿಜೇತ ಪ್ರಶಸ್ತಿಯನ್ನು ಪಡೆದಿದೆ ಎಂದು ಯುಬಿಎಲ್ ಮಂಗಳವಾರ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸೀಸನಲ್ ನಲ್ಲಿ ಕಿಂಗ್‌ಫಿಶರ್ ಸ್ಟ್ರಾಂಗ್ ಬೆಳ್ಳಿ ಗೆದ್ದರೆ, ಕಿಂಗ್‌ಫಿಷರ್ ಪ್ರೀಮಿಯಂ ಹೆಲ್ಲೆಸ್/ಮುಂಚ್ನರ್‌ನಲ್ಲಿ ಲಾಗರ್ ಬೆಳ್ಳಿ ಗೆದ್ದಿದೆ.
ಸೀಸನಲ್ ನಲ್ಲಿ ಕಿಂಗ್‌ಫಿಷರ್ ಅಲ್ಟ್ರಾ ಮ್ಯಾಕ್ಸ್ ಕಂಚಿನ ಪದಕ ಪಡೆದಿದೆ. ಕಿಂಗ್‌ಫಿಷರ್ ಮತ್ತೊಮ್ಮೆ ಜಾಗತಿಕ ವೇದಿಕೆಯಲ್ಲಿ ಮಿಂಚುತ್ತಿರುವುದನ್ನು ನೋಡಲು ನಮಗೆ ನಿಜವಾಗಿಯೂ ಸಂತೋಷವಾಗುತ್ತಿದೆ ಎಂದು ಯುನೈಟೆಡ್ ಬ್ರೂವರೀಸ್ ಲಿಮಿಟೆಡ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ವಿಕ್ರಮ್ ಬಹ್ಲ್ ಅವರು ಹೇಳಿದ್ದಾರೆ.
ಈ ಮನ್ನಣೆಯು ಭಾರತಕ್ಕೆ ಹೆಮ್ಮೆ ತರುವುದಲ್ಲದೆ, ವಿಶ್ವಾದ್ಯಂತ ಗ್ರಾಹಕರನ್ನು ಸಂತೋಷಪಡಿಸುವ ನಮ್ಮ ಪ್ರಯಾಣವನ್ನು ಬಲಪಡಿಸುತ್ತದೆ ಎಂದಿದ್ದಾರೆ.


