

ನವದೆಹಲಿ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಬುಧವಾರ ಮತ್ತೆ 29 ಪೈಸೆ ಕುಸಿದಿದ್ದು, ಇದರೊಂದಿಗೆ ಭಾರತದ ಕರೆನ್ಸಿ ಮೊದಲ ಬಾರಿಗೆ ನೈಂಟಿ ಕ್ರಾಸ್ ಮಾಡಿದೆ.
ಅಮೆರಿಕದ ಡಾಲರ್ ಎದುರು ರೂಪಾಯಿ ಅಪಮೌಲ್ಯ ಮುಂದುವರೆದಿದ್ದು, ಪ್ರತಿ ಡಾಲರ್ ಗೆ 90.25 ರೂ. ಗೆ ತಲುಪಿದೆ. ಇದು ಸಾರ್ವಕಾಲಿಕ ಕನಿಷ್ಠ ಮಟ್ಟವಾಗಿದೆ. ನಿನ್ನೆ ಡಾಲರ್ ಎದುರು ರೂಪಾಯಿ ಮೌಲ್ಯ 89.94 ರೂಪಾಯಿ ಇತ್ತು.
ಎಫ್‌ಐಐ ಹೊರಹರಿವು ಮತ್ತು ಬ್ಯಾಂಕುಗಳು ನಿರಂತರವಾಗಿ ಡಾಲರ್‌ಗಳನ್ನು ಖರೀದಿಸುತ್ತಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎನ್ನಲಾಗಿದೆ.
ದೇಶೀಯ ಷೇರು ಮಾರುಕಟ್ಟೆಗಳಲ್ಲಿನ ಕುಸಿತ ಮತ್ತು ಭಾರತ-ಅಮೆರಿಕ ವ್ಯಾಪಾರ ವಿಳಂಬ ಹಾಗೂ ವಿದೇಶಿ ಹೂಡಿಕೆದಾರರ ಹಣ ಹಿಂಪಡೆಯುವಿಕೆ ರೂಪಾಯಿ ದುರ್ಬಲಗೊಳ್ಳಲು ಪ್ರಮುಖ ಕಾರಣಗಳಾಗಿವೆ ಎಂದು ಫಾರೆಕ್ಸ್ ವ್ಯಾಪಾರಿಗಳು ತಿಳಿಸಿದ್ದಾರೆ.
ಚಿನ್ನ, ಬೆಳ್ಳಿ ಆಮದು ಹೆಚ್ಚಳದಿಂದ ಡಾಲರ್‌ಗಳ ಬೇಡಿಕೆ ಏರಿದೆ ಎಂದು ಹೇಳಲಾಗುತ್ತಿದೆ. ಇದು ದೇಶದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಆತಂಕ ಹೆಚ್ಚಿಸಿದೆ.
Advertisement