

ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ವಿಮಾನ ಕಾರ್ಯಾಚರಣೆಯಲ್ಲಿ ಸೋಮವಾರ ಸ್ವಲ್ಪ ಸುಧಾರಣೆ ಕಂಡುಬಂದಿದ್ದು, ತನ್ನ ನೆಟ್‌ವರ್ಕ್‌ನಲ್ಲಿ 1,800 ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸಿರುವುದಾಗಿ ದೃಢಪಡಿಸಿದೆ.
ಪತ್ರಿಕಾ ಪ್ರಕಟಣೆಯಲ್ಲಿ, ವಿಮಾನಯಾನ ಸಂಸ್ಥೆಯು ತನ್ನ ನೆಟ್‌ವರ್ಕ್‌ನಲ್ಲಿರುವ ಎಲ್ಲಾ ನಿಲ್ದಾಣಗಳಿಗೆ ಸಂಪರ್ಕವನ್ನು ಪುನಃಸ್ಥಾಪಿಸಿದೆ ಮತ್ತು ಬಿಗಿಯಾದ ಯೋಜನೆ ಹಾಗೂ ಕಾರ್ಯಾಚರಣೆಯ ಆಪ್ಟಿಮೈಸೇಶನ್ ಮೂಲಕ ರದ್ದತಿಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ ಎಂದು ತಿಳಿಸಿದೆ.
ಡಿಸೆಂಬರ್ 15 ರವರೆಗಿನ ರದ್ದಾದ ವಿಮಾನಗಳಿಗೆ 827 ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡಲಾಗಿದೆ ಮತ್ತು 4500 ಕ್ಕೂ ಹೆಚ್ಚು ಪ್ರಯಾಣಿಕರ ಬ್ಯಾಗ್ ಗಳನ್ನು ಪ್ರಯಾಣಿಕರಿಗೆ ತಲುಪಿಸಲಾಗಿದೆ ಎಂದು ಇಂಡಿಗೋ ತಿಳಿಸಿದೆ. ಅಲ್ಲದೆ, ತನ್ನ ಜಾಲದಲ್ಲಿ ಶೇ. 90 ರಷ್ಟು ಸಮಯಕ್ಕೆ ಸರಿಯಾಗಿ ವಿಮಾನಗಳು ಸಂಚರಿಸಿವೆ ಎಂದು ಹೇಳಿಕೊಂಡಿದೆ.
ಒಂದು ದಿನದಲ್ಲಿ 450ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದರೂ, 1,800ಕ್ಕೂ ಹೆಚ್ಚು ವಿಮಾನಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಇಂಡಿಯಾ ಸಂಸ್ಥೆ ತಿಳಿಸಿದೆ.
ಸೋಮವಾರಕ್ಕೆ ನಿಗದಿಪಡಿಸಲಾದ ಎಲ್ಲಾ ರದ್ದತಿಗಳನ್ನು ಭಾನುವಾರ ಅಂತಿಮಗೊಳಿಸಲಾಯಿತು ಮತ್ತು ಪ್ರಯಾಣಿಕರಿಗೆ ಮುಂಚಿತವಾಗಿ ತಿಳಿಸಲಾಯಿತು. ಇದು ಸುಗಮ ಪ್ರಯಾಣ ಯೋಜನೆ ಮತ್ತು ಕಡಿಮೆ ಕೊನೆ ನಿಮಿಷದ ರದ್ದತಿಗಳನ್ನು ಕಡಿಮೆ ಮಾಡಿದೆ.
ಡಿಸೆಂಬರ್ 1 ರಿಂದ 7 ರವರೆಗೆ, ವಿಮಾನಯಾನ ಸಂಸ್ಥೆಯು ವಿಮಾನ ನಿಲ್ದಾಣದಲ್ಲಿ ಸಿಲುಕಿದ ತನ್ನ ಪ್ರಯಾಣಿಕರಿಗಾಗಿ 9,500ಕ್ಕೂ ಹೆಚ್ಚು ಹೋಟೆಲ್ ಕೊಠಡಿಗಳು ಮತ್ತು ಸುಮಾರು 10,000 ಕ್ಯಾಬ್ ಹಾಗೂ ಬಸ್ ವ್ಯವಸ್ಥೆ ಮಾಡಿದೆ. 4,500 ಕ್ಕೂ ಹೆಚ್ಚು ವಿಳಂಬವಾದ ಬ್ಯಾಗ್‌ಗಳನ್ನು ಅವುಗಳ ಮಾಲೀಕರಿಗೆ ತಲುಪಿಸಲಾಗಿದೆ ಮತ್ತು ಉಳಿದ ಬ್ಯಾಗೇಜ್‌ಗಳನ್ನು ಮುಂದಿನ 36 ಗಂಟೆಗಳಲ್ಲಿ ತಲುಪಿಸುವ ನಿರೀಕ್ಷೆಯಿದೆ ಎಂದು ಇಂಡಿಗೋ ಹೇಳಿದೆ.
Advertisement